ETV Bharat / state

ಬೆಂಗಳೂರು ಟರ್ಫ್ ಕ್ಲಬ್‌ನ ಮಾಜಿ ಅಧ್ಯಕ್ಷರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ - ETV Bharath Kannada news

ಟರ್ಫ್ ಕ್ಲಬ್‌ನ ಮಾಜಿ ಅಧ್ಯಕ್ಷ ಹರೀಂದರ್ ಶೆಟ್ಟಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ - ಬಾಣಸವಾಡಿ ಠಾಣೆಯಲ್ಲಿ ಮಹಿಳೆಯಿಂದ ದೂರು ದಾಖಲು - ಹರೀಂದರ್ ಶೆಟ್ಟಿ ಮೇಲೆ 2017ರಲ್ಲಿ ಕ್ಲಬ್‌ನಲ್ಲಿ ಅವ್ಯವಹಾರದ ಮಾಡಿದ್ದಾರೆಂಬ ಆರೋಪ.

former president of Bangalore Turf Club
ಲೈಂಗಿಕ ದೌರ್ಜನ್ಯ ಪ್ರಕರಣ
author img

By

Published : Dec 27, 2022, 1:41 PM IST

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ಮಾಜಿ ಅಧ್ಯಕ್ಷ ಹರೀಂದರ್ ಶೆಟ್ಟಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸ್ತುತ ಬಾಣಸವಾಡಿ - ಹೆಣ್ಣೂರು ಕಾಸ್ಮೋಪಾಲಿಟನ್ ಕ್ಲಬ್‌ನ ಕಾರ್ಯದರ್ಶಿಯಾಗಿರುವ ಹರೀಂದರ್ ಶೆಟ್ಟಿ ವಿರುದ್ಧ ಅದೇ ಕ್ಲಬ್‌ನ ಮಹಿಳಾ ಘಟಕದ ಸದಸ್ಯೆಯೊಬ್ಬರು ದೂರು ದಾಖಲಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ದೂರುದಾರ ಮಹಿಳೆಯನ್ನು ಕ್ಲಬ್‌ನ ತಮ್ಮ ಕೊಠಡಿಗೆ ಕರೆಸಿದ್ದ ಹರೀಂದರ್ ಶೆಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೇ ದೂರುದಾರ ಮಹಿಳೆಯೊಂದಿಗೆ ಸಲುಗೆ ಬೆಳೆಸಲು ಕಳೆದ ಜುಲೈನಿಂದ ನಿರಂತರವಾಗಿ ಕರೆ ಮಾಡಿ, ಸಂದೇಶ ರವಾನಿಸಿ ಬೇರೆ ಬೇರೆ ಕ್ಲಬ್‌ಗಳಿಗೆ ಅನಗತ್ಯವಾಗಿ ಆಹ್ವಾನಿಸಿರುವ ಆರೋಪ ಕೇಳಿ ಬಂದಿದೆ. ಒಪ್ಪದಿದ್ದಾಗ ಮನೆ ಬಳಿ ಸಂಘಟನೆಯವರನ್ನು ಕಳಿಸಿ‌ ಗಲಾಟೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು‌ ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬೆಂಗಳೂರು ಟರ್ಫ್ ಕ್ಲಬ್‌ನ ಅಧ್ಯಕ್ಷರಾಗಿದ್ದ ಹರೀಂದರ್ ಶೆಟ್ಟಿಗೆ 2017ರಲ್ಲಿ ಕ್ಲಬ್‌ನಲ್ಲಿ ಅವ್ಯವಹಾರದ ಆರೋಪದಡಿ ಅಧ್ಯಕ್ಷ ಸ್ಥಾನದಿಂದ ಗೇಟ್ ಪಾಸ್ ನೀಡಲಾಗಿತ್ತು. ಸದ್ಯ ಆರೋಪಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ರಡಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: ಆಡಿಶನ್​ ನೆಪದಲ್ಲಿ ಅತ್ಯಾಚಾರ ಆರೋಪ: ಉದ್ಯಮಿ ರಾಜೇಂದ್ರ ದಗ್ದು ಗಾಯಕ್ವಾಡ್ ಪರಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.