ಬೆಂಗಳೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನ್ಯಾಯಾಲಯ ವಿಧಿಸಿದ್ದ ದಂಡ ಪಾವತಿದ ಕಾರಣ ಅವರ ವಿರುದ್ಧ ಎಸ್.ಜೆ. ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಹಾಗೂ ಕೂಡಲೇ ಮರಾಠ ಪ್ರಾಧಿಕಾರ ಹಿಂಪಡೆಯಲು ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಕಳೆದ ಡಿ. 5ರಂದು ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಿತು. ಈ ವೇಳೆ ವಾಟಾಳ್, ನೂರಾರು ಜನರು ಗುಂಪುಗೂಡುವಂತೆ ಮಾಡಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದರು ಎನ್ನಲಾಗಿದೆ. ಈ ಸಂಬಂಧ ವಾಟಾಳ್ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ-2020 ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 50 ಸಾವಿರ ರೂ. ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ಇದರಂತೆ ಎಸ್.ಜೆ. ಪಾರ್ಕ್ ಪೊಲೀಸರು ದಂಡ ಪಾವತಿಸುವಂತೆ ಡಿ. 19ರಂದು ವಾಟಾಳ್ ನೋಟಿಸ್ ಜಾರಿ ಮಾಡಿದ್ದರು. ಜ. 21ರೊಳಗೆ ದಂಡ ಪಾವತಿಸುವಂತೆ ಗಡುವು ನೀಡಿದರೂ ಪಾವತಿಸದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಸ್.ಜೆ. ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಅಸಮಾಧಾನಿತ ಸಚಿವರ ಕರೆಸಿ ಸಿಎಂ ಮನವೊಲಿಕೆ ಕಸರತ್ತು