ETV Bharat / state

ಕಂಡವರ ಕಾರಿನಲ್ಲಿ ಶೋಕಿ, ಬಿಟ್ಟಿ ಕಾರು ಪಡೆದು ಓಎಲ್‌ಎಕ್ಸ್‌ನಲ್ಲಿ ಮಾರಿಬಿಡ್ತಿದ್ದ.. ಎಫ್‌ಬಿನಲ್ಲೇ ಕಲರ್‌ ಕಲರ್‌ ಗಾಳ ಹಾಕ್ತಿದ್ದ!

ಸ್ನೇಹಿತನಂತೆ ನಂಬಿಸಿ ಟ್ರಿಪ್ ಹೋಗಲೆಂದು ಕಾರು ಪಡೆದು ಓಎಲ್‌ಎಕ್ಸ್‌ನಲ್ಲಿ ಅದನ್ನ ಮಾರಾಟ ಮಾಡ್ತಿದ್ದ. ಕಾರೂ ಇಲ್ಲ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆದಾಗ ಮೋಸ‌ ಹೋದ ಪ್ರಕರಣ ಬೆಳಕಿಗೆ ಬರ್ತಿದ್ದವು.

ಕಾರು ಕಳ್ಳನನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರು
author img

By

Published : Jun 23, 2019, 1:06 PM IST

ಬೆಂಗಳೂರು : ಟ್ರಿಪ್ ಹೋಗಿ ಬರ್ತೀನಿ ಅಂತಾ ಗೆಳೆಯರ ಬಳಿ ಕಾರ್ ಪಡೆದು ಓಎಲ್ಎಕ್ಸ್‌ನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

‌ಕನಕಪುರದ ಚರಣ್ ರಾಜ್ (30) ಬಂಧಿತ ವ್ಯಕ್ತಿ. ಈತ ಐಷಾರಾಮಿ ಕಾರ್ ಹೊಂದಿರುವರನ್ನ ಟಾರ್ಗೆಟ್ ಮಾಡಿ ಫೇಸ್ಬುಕ್ ಸ್ನೇಹಿತರನ್ನಾಗಿ ಮಾಡಿಕೊಳ್ತಿದ್ದ. ಬಳಿಕ ಅವರನ್ನು ಮನೆಗೆ ಕರೆಯಿಸಿ ಕಾಫಿ-ತಿಂಡಿ ಕೊಟ್ಟು ವಿಶ್ವಾಸ ಗಿಟ್ಟಿಸುತ್ತಿದ್ದ.

ಆಮೇಲೆ ಮೂರ್ನಾಲ್ಕು ತಿಂಗಳಲ್ಲಿ ಅವರೊಂದಿಗೆ ಸ್ನೇಹಿತನಂತೆ ನಂಬಿಸಿ ಕಾರ್ ಟ್ರಿಪ್ ಹೋಗೊಕ್ಕೆಂದು ಪಡೆದು ಓಎಲ್‌ಎಕ್ಸ್‌ನಲ್ಲಿ ಅದನ್ನ ಮಾರಾಟ ಮಾಡ್ತಿದ್ದ. ಇತ್ತ ಕಾರು ಇಲ್ಲ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆದಾಗ ಮೋಸ‌ ಹೋದ ವಿಚಾರ ಬೆಳಕಿಗೆ ಬರ್ತಿತ್ತು.

ಸದ್ಯ ರುದ್ರೇಶ್ ಎಂಬುವರು ಈತನನ್ನು ನಂಬಿ ತಮ್ಮ ಕಾರ್ ನೀಡಿದ್ರು. ಆದರೆ, ಕಾರು ಸಮೇತ ಚರಣ್ ಎಸ್ಕೇಪ್ ಆಗಿದ್ದ, ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಬಲೆ ಬೀಸಿದ ಪೊಲೀಸರು ಕೊನೆಗೂ ಆರೋಪಿಯನ್ನ ಬಂಧಿಸಿದ್ದಾರೆ. ಅಷ್ಟೇ ಅಲ್ಲ, 12 ಕಾರು ಮತ್ತು 3 ಬೈಕ್‌ನ ಕೂಡ ವಶಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ಗೆಳೆಯರನ್ನು ನಂಬಿ ಕಾರ್ ಕೊಡ್ತೀರಾ ..? ಹುಷಾರ್ ..
ಟ್ರಿಪ್ ಹೋಗಿ ಬರ್ತೀನಿ ಅಂತ ಕಾರ್ ಪಡೆದು ಓ ಎಲ್ ಎಕ್ಸ್ ನಲ್ಲಿ ಮಾರಾಟ ಮಾಡ್ತಿದ್ದ ಆರೋಪಿ ಅಂದರ್

ಭವ್ಯ

ಟ್ರಿಪ್ ಹೋಗಿ ಬರ್ತೀನಿ ಅಂತ ಗೆಳೆಯರ ಬಳಿ ಕಾರ್ ಪಡೆದು ಓಎಲ್ ಎಕ್ಸ್ ನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿಯನ್ನ ಬಂಧನ ಮಾಡುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ..‌ಕನಕಪುರ ರಸ್ತೆಯ ಚರಣ್ ರಾಜ್ (30) ಬಂಧಿತ ವ್ಯಕ್ತಿ .

ಈತ ಐಷಾರಾಮಿ ಕಾರ್ ಹೊಂದಿರುವವರನ್ನ ಟಾರ್ಗೇಟ್ ಮಾಡಿ ಫೇಸ್ಬುಕ್ ಸ್ನೇಹಿತರನ್ನಾಗಿ ಮಾಡಿಕೊಳ್ತಿದ್ದ ಮೊದಲು. ನಂತ್ರ
ಬಳಿಕ ಅವರನ್ನು ಮನೆಗೆ ಕರೆಯಿಸಿ ಕಾಫಿ-ತಿಂಡಿ ಕೊಡಿಸಿ ವಿಶ್ವಾಸ ಗಿಟ್ಟಿಸುತ್ತಿದ್ದ . ಆಮೇಲೆ ಮೂರ್ನಾಲ್ಕು ತಿಂಗಳಲ್ಲಿ ಅವರೊಂದಿಗೆ ಸ್ನೇಹಿತನಂತೆ ನಂಬಿಸಿ ಕಾರ್ ಟ್ರೀಪ್ ಹೋಗೊಕ್ಕೆಂದು ಪಡೆದು ಓಎಲ್ ಎಕ್ಸ್ನಲ್ಲಿ ಕಾರ್ ಮಾರಟ ಮಾಡ್ತಿದ್ದ. ಇತ್ತ ಕಾರು ಇಲ್ಲ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆದಾಗ ಮೋಸ‌ಹೋದ ವಿಚಾರ ಬೆಳಕಿಗೆ ಬರ್ತಿತ್ತು..

ಇತ್ತಿಚ್ಚೆಗೆ ರುದ್ರೇಶ್ ಎಂಬುವವರು ಈತನನ್ನ ನಂಬಿ ಕಾರು ನೀಡಿದ್ರು. ಆದ್ರೆ ಕಾರು ಸಮೇತ ಚರಣ್ ರಾಜ್ ಎಸ್ಕೇಫ್ ಆಗಿದ್ದ ಹೀಗಾಗಿ ರುದ್ರೇಶ್ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ರು. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ತನಿಖೆಯಲ್ಲಿ ಪೋಲೀಸರಿಗೆ ಆರೋಪಿಯ ಅಸಲಿ ವಿಷ್ಯ ಬಯಲಿಗೆ ಬಂದಿದ್ದುಒಟ್ಟು 12 ಕಾರುಗಳು 3 ಬೈಕ್ ವಶಕ್ಕೆ ಪಡೆದು ತನಿಕೆ ಮುಂದುವರೆಸಿದ್ದಾರೆ.
Body:KN_BNG_02_23_CAR THEFT_BHAVYA_7204498Conclusion:KN_BNG_02_23_CAR THEFT_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.