ETV Bharat / state

ಖಾಸಗಿ ವೈದ್ಯರು ಕಾರ್ಯ ನಿರ್ವಹಿಸದಿದ್ರೆ ಅಂಥವರ ನೋಂದಣಿ ರದ್ದುಗೊಳಿಸಿ.. ಕುರುಬೂರು ಶಾಂತಕುಮಾರ್

ಸರ್ಕಾರ ಐಎಂಎ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ಕೂಡಲೇ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗುವಂತೆ ಐಎಂಎ ಮೂಲಕ ಸೂಚಿಸಬೇಕು. ಇಲ್ಲದಿದ್ದರೆ ಐಎಂಎ ನೋಂದಣಿ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

author img

By

Published : Apr 13, 2020, 11:54 AM IST

Kurubur Shantakumar
ಕುರುಬೂರು ಶಾಂತಕುಮಾರ್

ಬೆಂಗಳೂರು : ಕೊರೊನಾ ಎಫೆಕ್ಟ್‌ನಿಂದ ಗ್ರಾಮೀಣ ಭಾಗ, ತಾಲೂಕು ಕೇಂದ್ರಗಳಲ್ಲಿ ಜನರಿಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಹೊರತುಪಡಿಸಿ ಖಾಸಗಿ ವೈದ್ಯರು, ಖಾಸಗಿ ನರ್ಸಿಂಗ್ ಹೋಂಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ರೋಗಿಗಳು ಪರದಾಡುವಂತಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಐಎಂಎ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ಕೂಡಲೇ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗುವಂತೆ ಐಎಂಎ ಮೂಲಕ ಸೂಚಿಸಬೇಕು. ಇಲ್ಲದಿದ್ದರೆ ಐಎಂಎ ನೋಂದಣಿ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಕೈಗೊಂಡಿರುವ ಲಾಕ್‌ಡೌನ್ ಮುಗಿಯುವವರೆಗೂ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ, ವ್ಯವಸ್ಥೆಯನ್ನು ಹಾಳು ಮಾಡಬಲ್ಲ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ಕೇವಲ ಎರಡರಷ್ಟು ಜನರ ಒತ್ತಾಯಕ್ಕೆ ಮಣಿದು ಶೇ.98ರಷ್ಟು ಜನರನ್ನು ನಿರ್ಲಕ್ಷಿಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದ್ದಾರೆ.

ಇದೇ ವೇಳೆ ಕೇಂದ್ರದ ಮಾಜಿ ಸಚಿವ ಎಂ ವಿ ರಾಜಶೇಖರನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.