ETV Bharat / state

200 ಯುನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಲೆಕ್ಕಾಚಾರ ಏನಿದೆ ನೋಡಿ!

200 ಯುನಿಟ್​ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಯ ಲೆಕ್ಕಾಚಾರ ಹೀಗಿರಲಿದೆ.

ಗೃಹ ಜ್ಯೋತಿ ಯೋಜನೆಯ ಲೆಕ್ಕಾಚಾರ
ಗೃಹ ಜ್ಯೋತಿ ಯೋಜನೆಯ ಲೆಕ್ಕಾಚಾರ
author img

By

Published : Jun 3, 2023, 7:09 AM IST

ಬೆಂಗಳೂರು: ಕೊನೆಗೂ ಕಾಂಗ್ರೆಸ್ ಸರ್ಕಾರ ತನ್ನ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಅದರಲ್ಲಿ ಬಹುನಿರೀಕ್ಷಿತ 200 ಯುನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಗ್ಯಾರಂಟಿ ಯೋಜನೆ ಜಾರಿಯಾಗಲಿದೆ.‌ ಆದರೆ, ಈ ಉಚಿತ ವಿದ್ಯುತ್ ಗ್ಯಾರಂಟಿಯಲ್ಲಿನ ಒಳ ಏಟು ಏನಿದೆ ನೋಡಿ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚ ಗ್ಯಾರಂಟಿಗಳ ಷರತ್ತುಬದ್ದ ಜಾರಿಗೆ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿರುವ 200 ಯುನಿಟ್ ವರೆಗಿನ ಗೃಹ ಬಳಕೆಯ ಉಚಿತ ವಿದ್ಯುತ್ ಗ್ಯಾರಂಟಿ ಯೋಜನೆಯಾದ ಗೃಹ ಜ್ಯೋತಿ ಜಾರಿಗೆ ಸಂಪುಟ ಸಭೆ ತೀರ್ಮಾನಿಸಿದೆ. ಗೃಹ ಜ್ಯೋತಿ ಯೋಜನೆಗೆ ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ. ಜುಲೈ ಒಂದರಿಂದ ಈ ಯೋಜನೆ ಅನ್ವಯವಾಗಲಿದೆ. ಆದರೆ ಜುಲೈ ವರೆಗಿನ ಬಾಕಿ ಬಿಲ್ ಗ್ರಾಹಕರು ಪಾವತಿಸಬೇಕು.

ಆದರೆ, ಉಚಿತ ವಿದ್ಯುತ್​ಗೆ ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಪರಿಗಣಿಸಲಾಗುತ್ತದೆ. ಅದಕ್ಕೆ 10% ಸೇರಿಸಿ ಉಚಿತ ವಿದ್ಯತ್ ನೀಡಲು ನಿರ್ಧರಿಸಲಾಗಿದೆ. 200 ಯುನಿಟ್ ವರೆಗೆ ಉಚಿತ ವಿದ್ಯುತ್ ಎಂಬ ಕಾರಣಕ್ಕೆ ಗ್ರಾಹಕರು ಬೇಕಾಬಿಟ್ಟಿ ವಿದ್ಯುತ್ ಬಳಸುವುದನ್ನು ನಿಯಂತ್ರಿಸಲು ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಯನ್ನು ಪರಿಗಣಿಸಲು ತೀರ್ಮಾನಿಸಲಾಗಿದೆ. ಹಿಂದಿನ ವರ್ಷದ ಸರಾಸರಿ ವಿದ್ಯುತ್ ಬಳಕೆಯ ಆಧಾರದಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತದೆ.

ಏನಿದು ಉಚಿತ ವಿದ್ಯುತ್ ಲೆಕ್ಕಾಚಾರ?: ನಿಮ್ಮ ಉಚಿತ ವಿದ್ಯುತ್​ನ್ನು ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಅದಕ್ಕೆ 10% ಸೇರಿಸಿ ಉಚಿತ ವಿದ್ಯುತ್ ನೀಡಲಾಗುತ್ತದೆ. ಅದರ ಲೆಕ್ಕಾಚಾರ ಹೀಗಿದೆ. (12 ತಿಂಗಳ ಮಾಸಿಕ ವಿದ್ಯುತ್ ಬಳಕೆ ಉದಾಹರಣೆ)

ಜೂನ್ 114 ಯುನಿಟ್, ಜುಲೈ 80 ಯುನಿಟ್, ಆಗಸ್ಟ್ 76 ಯುನಿಟ್, ಸೆಪ್ಟೆಂಬರ್ 94 ಯುನಿಟ್, ಅಕ್ಟೋಬರ್ 100 ಯುನಿಟ್, ನವೆಂಬರ್ 217 ಯುನಿಟ್, ಡಿಸೆಂಬರ್ 210 ಯುನಿಟ್, ಜನವರಿ 156 ಯುನಿಟ್, ಫೆಬ್ರವರಿ 114 ಯುನಿಟ್, ಮಾರ್ಚ್ 110 ಯುನಿಟ್, ಏಪ್ರಿಲ್ 160 ಯುನಿಟ್, ಮೇ 180 ಯುನಿಟ್.

ಅದರಂತೆ ಒಂದು ಮನೆಯ ಒಟ್ಟು ವಾರ್ಷಿಕ ವಿದ್ಯುತ್ ಬಳಕೆ 1,611 ಯುನಿಟ್. 12 ತಿಂಗಳ ಸರಾಸರಿ ಬಳಕೆ 134.25 ಯುನಿಟ್, ಅದಕ್ಕೆ 10% ಸೇರಿಸಲಾಗುತ್ತದೆ. 134.25+10% = 147.68 ಯುನಿಟ್ ಆಗಲಿದೆ. ಈ 147.68 ಯುನಿಟ್ ಸರಾಸರಿ ವಿದ್ಯುತ್ ಬಳಕೆಗೆ ವಿದ್ಯುತ್ ಬಿಲ್ ಪಾವತಿಸುವ ಹಾಗಿಲ್ಲ. ಆ ಮನೆಯವರಿಗೆ ಮುಂದೆ 147.68 ಯುನಿಟ್ ವರೆಗೆ ಉಚಿತ ವಿದ್ಯುತ್ ಲಭ್ಯವಾಗಲಿದೆ.

147.68 ಯುನಿಟ್ ಮೇಲೆ ಬಳಕೆ ಮಾಡಿದರೆ ಅಷ್ಟಕ್ಕೆ ವಿದ್ಯುತ್ ಬಿಲ್ ಕಟ್ಟ ಬೇಕು. ಒಂದು ವೇಳೆ ಪ್ರಸಕ್ತ ತಿಂಗಳು ಮನೆಯಲ್ಲಿ 160 ಯುನಿಟ್ ವಿದ್ಯುತ್ ಬಳಕೆಯಾಗಿದ್ದರೆ, ಹಿಂದಿನ 12 ತಿಂಗಳಲ್ಲಿ ಆ ಮನೆಯ ಸರಾಸರಿ ವಿದ್ಯುತ್ ಬಳಕೆಯಾದ 147.68 ಯುನಿಟ್​ಗೆ ಮಾತ್ರ ಉಚಿತ ಲಭ್ಯವಾಗಲಿದೆ. ಉಳಿದ ಹೆಚ್ಚುವರಿ 12.32 ಯುನಿಟ್ ಗೆ ವಿದ್ಯುತ್ ಬಿಲ್ ಪಾವತಿಸಬೇಕು. ಹೀಗೆ ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಳಕೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಲಭಿಸಲಿದೆ. ಉಚಿತ ವಿದ್ಯುತ್ ಗ್ಯಾರಂಟಿಗೆ ನಿಮ್ಮ ಪ್ರಸಕ್ತ ತಿಂಗಳ ವಿದ್ಯುತ್ ಬಳಕೆಯನ್ನು ಪರಿಗಣಿಸಲಾಗುವುದಿಲ್ಲ. ಹಿಂದಿನ ವರ್ಷದ ಸರಾಸರಿ ವಿದ್ಯುತ್ ಬಳಕೆ + 10% ಪರಿಗಣಿಸಲಾಗುತ್ತದೆ.

ಮುಂದುವರಿದ ಗೊಂದಲ: ಉಚಿತ ವಿದ್ಯುತ್ ಯೋಜನೆಯಡಿ ಇನ್ನೂ ಕೆಲ ಗೊಂದಲಗಳು ಮುಂದುವರಿದಿದೆ. ಅಂದರೆ ಒಂದು ವೇಳೆ ಸರಾಸರಿ ವಿದ್ಯುತ್ ಬಳಕೆ + 10% ನಂತೆ 202 ಯುನಿಟ್ ಬಳಕೆಯಾದರೆ ಉಚಿತ ಭಾಗ್ಯ ಲಭ್ಯವಾಗುತ್ತಾ ಎಂಬ ಪ್ರಶ್ನೆ ಹಾಗೇ ಉಳಿದುಕೊಂಡಿದೆ.‌ ಅಂದರೆ ಗ್ರಾಹಕರು 202 ಯುನಿಟ್ ಗೂ ವಿದ್ಯುತ್ ಬಿಲ್ ಪಾತಿಸಬೇಕಾ ಅಥವಾ ಕೇವಲ 2 ಯುನಿಟ್ ವಿದ್ಯುತ್ ಬಳಕೆಗೆ ಮಾತ್ರ ಬಿಲ್ ಪಾವತಿಸಬೇಕಾ ಎಂಬ ಬಗ್ಗೆ ಗೊಂದಲ ಹಾಗೇ ಮುಂದುವರಿದಿದೆ. ಯೋಜನೆ ಜಾರಿಯ ಆದೇಶದಲ್ಲಿ ಈ ಸಂಬಂಧ ಸಂಪೂರ್ಣ ಮಾನದಂಡ ರೂಪಿಸಲಾಗುತ್ತದೆ. ಆಗ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ.

ಪ್ರತ್ಯೇಕ ಆರ್.ಆರ್ ನಂ. ಮೀಟರ್ ಗೆ ಉಚಿತ ಬಿಲ್: ಪ್ರತ್ಯೇಕ ಆರ್.ಆರ್.ನಂಬರ್ ಆಧಾರದಲ್ಲಿ ಗ್ರಾಹಕರಿಗೆ ಉಚಿತ ವಿದ್ಯುತ್ ಲಭ್ಯವಾಗಲಿದೆ. ಅಂದರೆ ಬಾಡಿಗೆದಾರರಿಗೂ ಈ ಯೋಜನೆ ಅನ್ವಯವಾಗಲಿದೆ. ಮಾಲೀಕನ‌ ಹೆಸರಲ್ಲೇ ಬಿಲ್ ಬಂದರೂ, ಪ್ರತಿ ಬಾಡಿಗೆ ಮನೆಗಳಿಗೆ ಪ್ರತ್ಯೇಕ ಆರ್.ಆರ್.‌ನಂಬರ್​ ನ ಮೀಟರ್ ಇದ್ದರೆ, ಅವರಿಗೂ ಉಚಿತ ಲಭಿಸಲಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಸ್ಪಷ್ಟತೆ, ಹಣಕಾಸು ಕ್ರೋಢೀಕರಣದ ಮಾಹಿತಿ ನೀಡಿ: ಎನ್.ರವಿಕುಮಾರ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.