ETV Bharat / state

ಸಿದ್ದಾರ್ಥ ಕುಟುಂಬ ಬಯಸಿದರೆ ತನಿಖೆ : ಆರ್. ಅಶೋಕ್ - Sidharth missing case will be Investigate

ಕೆಫೆ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ ಅವರ ನಾಪತ್ತೆ ಪ್ರಕರಣವನ್ನು ಅವರ ಕುಟುಂಬದವರು ಬಯಸಿದರೆ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.

ಆರ್. ಅಶೋಕ್
author img

By

Published : Jul 30, 2019, 3:57 PM IST

ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕರು ಹಾಗೂ ಎಸ್​.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಾಪತ್ತೆ ಪ್ರಕರಣವನ್ನು ಅವರ ಕುಟುಂಬದವರು ಬಯಸಿದರೆ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ಧಾರ್ಥ್ ನಾಪತ್ತೆಯಾಗಿರುವುದು ತಿಳಿದು ನನಗೆ ಆಘಾತವಾಯಿತು. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ಜನತೆಗೆ ತಿಳಿಯಬೇಕು. ಕುಟುಂಬದವರು ಬಯಸಿದರೆ ತನಿಖೆಗೆ ಶಿಫಾರಸು ಮಾಡುವ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ್

ನನಗೆ ಹಲವಾರು ವರ್ಷಗಳಿಂದ ಸಿದ್ಧಾರ್ಥ ಆತ್ಮೀಯ ಸ್ನೇಹಿತರಾಗಿದ್ದವರು. ಕಾಫಿ ಕುಡಿಯುವ ಸಂದರ್ಭದಲ್ಲಿ ನಾನು ಅವರ ಕೆಫೆ ಕಾಫಿ ಡೇಗೆ ಹೋಗುತ್ತಿದ್ದೆ. ಎಲ್ಲೇ ಇದ್ದರೂ ಬಂದು ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಈ ಘಟನೆ ಬಳಿಕ ನನಗೂ ಆಘಾತವಾಗಿದೆ ಎಂದು ಹೇಳಿದರು.

ಅವರಿಗಿರುವ ಆಸ್ತಿ ಲೆಕ್ಕ ಹಾಕಿದರೆ ಸಾಲ ಲೆಕ್ಕಕ್ಕೇ ಬರುವುದಿಲ್ಲ. ಉದ್ಯಮಿಯಾಗಿ ಸಾಕಷ್ಟು ಯಶಸ್ವಿಯಾಗಿದ್ದರು. ಯಾವ ಕಾರಣಕ್ಕಾಗಿ ಹೀಗಾಯಿತು ಎಂಬುದು ಗೊತ್ತಿಲ್ಲ. ಆದರೂ ಸುರಕ್ಷಿತವಾಗಿ ಅವರು ಹಿಂತಿರುಗಲಿ ಎಂದು ಪ್ರಾರ್ಥಿಸಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗುವುದು ಬಹುತೇಕ ಖಚಿತ :

ಇನ್ನು ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಈ ಹಿಂದೆಯೂ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಎಬಿವಿಪಿ, ಆರ್‍ಎಸ್‍ಎಸ್ ಹಿನ್ನೆಲೆಯಿಂದ ಬಂದಿರುವ ಕಾಗೇರಿ ಅವರು ಉತ್ತಮ ವಾಗ್ಮಿಗಳು ಹಾಗೂ ಸಂಭಾವಿತರು ಎಂದು ಶ್ಲಾಘಿಸಿದರು.

Intro:ಬೆಂಗಳೂರು : ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಪ್ರಕರಣವನ್ನು ಅವರ ಕುಟುಂಬದವರು ಬಯಸಿದರೆ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ. Body:ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡದ ಅವರು, ಸಿದ್ಧಾರ್ಥ್ ಅವರು ನಿಗೂಢವಾಗಿ ನಾಪತ್ತೆಯಾಗಿರುವುದು ತಿಳಿದು ನನಗೆ ಆಘಾತವಾಯಿತು. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ಜನತೆಗೆ ತಿಳಿಯಬೇಕು. ಕುಟುಂಬದವರು ಬಯಸಿದರೆ ತನಿಖೆಗೆ ಶಿಫಾರಸು ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ನನಗೆ ಹಲವಾರು ವರ್ಷಗಳಿಂದ ಸಿದ್ಧಾರ್ಥ್ ಆತ್ಮೀಯ ಸ್ನೇಹಿತರಾಗಿದ್ದು. ಕಾಫಿ ಕುಡಿಯುವ ಸಂದರ್ಭದಲ್ಲಿ ನಾನು ಅವರ ಕಾಫಿ ಡೇಗೆ ಹೋಗುತ್ತಿದ್ದೆ. ಎಲ್ಲೇ ಇದ್ದರೂ ಬಂದು ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಈ ಘಟನೆ ಬಳಿಕ ನನಗೂ ಆಘಾತವಾಗಿದೆ ಎಂದು ಹೇಳಿದರು.
ಅವರಿಗಿರುವ ಆಸ್ತಿ ಲೆಕ್ಕ ಹಾಕಿದರೆ ಸಾಲವು ಲೆಕ್ಕಕ್ಕೇ ಬರುವುದಿಲ್ಲ. ಉದ್ಯಮಿಯಾಗಿ ಸಾಕಷ್ಟು ಯಶಸ್ವಿಯಾಗಿದ್ದರು. ಯಾವ ಕಾರಣಕ್ಕಾಗಿ ಇಂತಹ ಘಟನೆ ನಡೆದಿದೆ ಎಂಬುದು ಗೊತ್ತಿಲ್ಲ. ಆದರೂ ಸುರಕ್ಷಿತವಾಗಿ ಅವರು ಹಿಂತಿರುಗಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಇನ್ನು ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಈ ಹಿಂದೆಯೂ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಎಬಿವಿಪಿ ಆರ್‍ಎಸ್‍ಎಸ್ ಹಿನ್ನೆಲೆಯಿಂದ ಬಂದಿರುವ ಕಾಗೇರಿ ಅವರು ಉತ್ತಮ ವಾಗ್ಮಿಗಳು ಹಾಗೂ ಸಂಭಾವಿತರು ಶುಭ ಹಾರಿಸಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಸಿದ್ಧಾರ್ಥ್ ಅವರು ನನಗೆ ಕಳೆದ 30 ವರ್ಷಗಳಿಂದ ಆತ್ಮೀಯ ಸ್ನೇಹಿತರು. ನಮ್ಮ ಜಿಲ್ಲೆಯಲ್ಲಿ ಅವರನ್ನು ಮಾದರಿ ವ್ಯಕ್ತಿ ಎಂದೇ ಕರೆಯುತ್ತಿದ್ದರು. ರಾದರೂ ಉದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ಸಿದ್ಧಾರ್ಥ್ ಅವರನ್ನು ನೋಡಿ ಕಲಿಯಿರಿ ಎನ್ನುತ್ತಿದ್ದರು.
ಆದರೆ ಇಂದು ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಒಂದು ವೇಳೇ ಅವರು ಸಾಲ ಮಾಡಿಕೊಂಡಿದ್ದರೆ ಅವರಿಗಿರುವ ಆಸ್ತಿಗೆ ಅದು ಏನೇನೂ ಅಲ್ಲ. ಈ ಘಟನೆಯಿಂದಾಗಿ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ಎಲ್ಲೇ ಇದ್ದರೂ ಸುರಕ್ಷಿತವಾಗಿ ಹಿಂತಿರುಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.