ETV Bharat / state

39 ಮಂದಿಯ ಮೇಲಿರುವ ಮೊಕದ್ದಮೆ ವಾಪಸ್: ಸಚಿವ ಸಂಪುಟ ಸಭೆ ನಿರ್ಧಾರ

author img

By

Published : Dec 8, 2022, 6:41 PM IST

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 39 ಮಂದಿಯ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೊಕದ್ದಮೆಗಳನ್ನು ವಾಪಸು ಪಡೆಯಲು ನಿರ್ಧರಿಸಲಾಗಿದೆ.

cabinet-meeting-decided-to-withdraw-the-case-of-39-people
39 ಮಂದಿಯ ಮೊಕದ್ದಮೆ ವಾಪಸು ಪಡೆಯಲು ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ 39 ಜನ ಮೇಲಿನ ಮೊಕದ್ದಮೆಗಳನ್ನು ‌ವಾಪಸು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಕೋರ್ಟ್ ಸೂಚನೆಯಂತೆ ಜನಪ್ರತಿನಿಧಿ ಕಾಯ್ದೆ ವ್ಯಾಪ್ತಿಗೆ ಬರದೇ ಇರುವ ಮೊಕದ್ದಮೆಗಳನ್ನು ವಾಪಸು ಪಡೆಯಲು ಅನುಮತಿ ಇದ್ದು, ಅದರಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 41 ಮೊಕದ್ದಮೆಗಳ ಪೈಕಿ ಎರಡು ಮೊಕದ್ದಮೆ ಜನಪ್ರತಿನಿಧಿ ಕಾಯ್ದೆಯಡಿ ಬರುವ ಕಾರಣ ಅವುಗಳನ್ನು ಹೊರತುಪಡಿಸಿ, ಹೋರಾಟ, ಪ್ರತಿಭಟನೆ, ದೊಂಬಿಯಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲಿನ‌ ಸಣ್ಣ ಪುಟ್ಟ ಮೊಕದ್ದಮೆಗಳನ್ನು ವಾಪಸು ಪಡೆಯಲಾಗಿದೆ. ಕೊಲೆ, ಕೊಲೆ ಯತ್ನ, ಅತ್ಯಾಚಾರದಂಥ ಪ್ರಕರಣಗಳು ಇದರಲ್ಲಿ ಒಳಗೊಂಡಿಲ್ಲ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ವಿಜೇತರಾದ ವ್ಯಕ್ತಿಗಳನ್ನು ಕೆಲವು ಹುದ್ದೆಗಳಿಗೆ ಮಾಡುವ ನೇಮಕಾತಿ) (ವಿಶೇಷ) ನಿಯಮಗಳು 2022ಕ್ಕೆ ಅನುಮೋದನೆ ನೀಡಲಾಗಿದೆ.

ಒಲಂಪಿಕ್ ಮತ್ತು ಪ್ಯಾರಾ ಒಲಿಂಪಿಕ್‌ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಎ ವೃಂದದ ಸರ್ಕಾರಿ ಉದ್ಯೋಗ, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತರಿಗೆ ಬಿ ಗ್ರೂಪ್ ಸರ್ಕಾರಿ ಉದ್ಯೋಗ, ನ್ಯಾಷನಲ್ ಗೇಮ್ಸ್‌‌ನಲ್ಲಿ ಪದಕ ವಿಜೇತರಿಗೆ ಸಿ ಗ್ರೂಪ್ ಉದ್ಯೋಗ ನೀಡಲಾಗುವುದು. ಉಪ ವಿಭಾಗಾಧಿಕಾರಿ, ಸಹಾಯಕ ಆಯುಕ್ತರು (ಜಿಎಸ್ಟಿ) ಸೇರಿದಂತೆ 9 ಇಲಾಖೆಗಳಲ್ಲಿ ತಲಾ 5 ರಂತೆ 45 ಗ್ರೂಪ್-ಎ ಹುದ್ದೆಗಳು, ತಹಶೀಲ್ದಾರ್ ಸೇರಿದಂತೆ 15 ಇಲಾಖೆಗಳಲ್ಲಿ 150 ಗ್ರೂಪ್ ಬಿ ವೃಂದದ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕರ್ನಾಟಕ ಯುವ ನೀತಿ 2022ಗೆ ಅಸ್ತು: ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಪಷ್ಟವಾದ ನೀತಿ ಮತ್ತು ಕಾರ್ಯಕ್ರಮಗಳ ರೂಪಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ಯುವನೀತಿ-2022ನ್ನು ರಚಿಸಲಾಗಿದ್ದು, ಮುಂದಿನ 8 ವರ್ಷಕ್ಕೆ ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಯುವ ಜನತೆಗಾಗಿ ಪ್ರತ್ಯೇಕ ಯುವ ಸಬಲೀಕರಣ ನಿರ್ದೇಶನಾಲಯ, ತಾಲೂಕು ಮಟ್ಟದಲ್ಲಿ ಕಚೇರಿಗಳು, ಯುವ ಬಜೆಟ್, ಯುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ, ಮುಖ್ಯಮಂತ್ರಿಗಳು ಅಥವಾ ಸಚಿವರ ಅಧ್ಯಕ್ಷತೆಯಲ್ಲಿ ಕೋಶವೊಂದನ್ನು ರಚಿಸಿ ಕಾರ್ಯಕ್ರಮಗಳ ಮೇಲುಸ್ತುವಾರಿ ಮಾಡಲಾಗುವುದು ಎಂದರು.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು?:

  • ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಡಿ ನೋಂದಣಿ ಶುಲ್ಕ ರಿಯಾಯಿತಿಗೆ ಅನುಮತಿ
  • 20+1 ಕುರಿ/ಮೇಕೆ ಘಟಕಗಳನ್ನು ಅರ್ಹ 20,000 ಕುರಿಗಾಹಿಗಳಿಗೆ ರೂ. 1,75,000 ಘಟಕ ವೆಚ್ಚ ಸೇರಿದಂತೆ ಒಟ್ಟಾರೆ ರೂ 354.50 ಕೋಟಿಗಳ ವೆಚ್ಚದಲ್ಲಿ “ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ"ಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ತಾತ್ವಿಕ ಆಡಳಿತಾತ್ಮಕ ಆದೇಶಕ್ಕೆ ಘಟನೋತ್ತರ ಅನುಮೋದನೆ
  • ರಾಜ್ಯ ಸಿವಿಲ್ ಸೇವಾ ನೌಕರರು ಪ್ರತಿ ವರ್ಷದ ಡಿಸೆಂಬರ್ ಅಂತ್ಯದ ಬದಲಾಗಿ ಮಾರ್ಚ್ ಅಂತ್ಯಕ್ಕೆ ಆಸ್ತಿ ವಿವರಗಳನ್ನು ಸಲ್ಲಿಸುವ ಕುರಿತು “ಕರ್ನಾಟಕ ಸಿವಿಲ್‌ ಸೇವೆಗಳು (ನಡತೆ) (2ನೇ ತಿದ್ದುಪಡಿ) ನಿಯಮಗಳು, 2022"ಕ್ಕೆ ಅನುಮೋದನೆ.
  • ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತಕ್ಕೆ ಆರ್ಥಿಕ ವರ್ಷ 2022-2023 ಸಾಲಿಗೆ ಬ್ಯಾಂಕ್‌ಗಳು/ ಹಣಕಾಸು ಸಂಸ್ಥೆಗಳಿಂದ ರೂ. 3,000 ಕೋಟಿಗಳ ಸಾಲವನ್ನು ಒದಗಿಸುವ ಸಂಬಂಧ ಸರ್ಕಾರದ ಖಾತರಿ ನೀಡಲು ಒಪ್ಪಿಗೆ.
  • ವಿದ್ಯುತ್ ಸರಬರಾಜು ಕಂಪನಿಗಳ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸರ್ಕಾರದಿಂದ ಹಣಕಾಸಿನ ನೆರವು ಒದಗಿಸಲು ಹೊರಡಿಸಿರುವ ಆರು ಸರ್ಕಾರಿ ಆದೇಶಗಳಿಗೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ.
  • ಕರ್ನಾಟಕ ರಾಜ್ಯದಲ್ಲಿ ಖಾಸಗಿ ಹೂಡಿಕೆ ಆಧಾರದ ಮೇಲೆ ಗ್ರಿಡ್ ಬೆಂಬಲಿತ 1000 ಮೆ.ವ್ಯಾ ಪಂಪ್ಡ್ ಹೈಡ್ರೋ ಸ್ಟೋರೇಜ್‌ ವಿದ್ಯುತ್ ಯೋಜನೆಯನ್ನು ವಿದ್ಯುತ್‌ ಕಾಯ್ದೆ 2003 ಕಲಂ 63ರ ಅಡಿಯಲ್ಲಿ PCKL ಸಂಸ್ಥೆಯವರಿಂದ 4000 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಟಾನಗೊಳಿಸುವುದಕ್ಕೆ ಅನುಮೋದನೆ.
  • ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತ ಸರ್ಕಾರ ನಿಗಧಿಪಡಿಸಿರುವ ಮಾರ್ಗಸೂಚಿಗಳನ್ವಯ ಒಟ್ಟು 42 ಅರ್ಹ ನಿರ್ದಿಷ್ಟ ವರ್ಗದ ಶಿಕ್ಷಾ ಬಂದಿಗಳನ್ನು 26ನೇ ಜನವರಿ 2023ರ ಗಣರಾಜ್ಯೋತ್ಸವದ ಪ್ರಯುಕ್ತ ಎರಡನೇ ಹಂತದಲ್ಲಿ ವಿಶೇಷ ಮಾಫಿಯೊಂದಿಗೆ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನ.
  • ಕರ್ನಾಟಕ ಮಂಡಳಿಯಿಂದ ಸೂರ್ಯನಗರ 1ನೇ ಹಂತದ ವಾಣಿಜ್ಯ ನಿವೇಶನ ಸಂಖ್ಯೆ1 ರಲ್ಲಿ ವಾಣಿಜ್ಯ ಮಳಿಗೆ ಹಾಗೂ ಮಂಡಳಿಯ ಕಚೇರಿಗೆ ಕಟ್ಟಡವನ್ನು ನಿರ್ಮಿಸುವ ರೂ. 20 ಅಂದಾಜು ಮೊತ್ತಕ್ಕೆ ಅನುಮೋದನೆ.
  • ಕರ್ನಾಟಕ ಗೃಹ ಮಂಡಳಿಯು ಅನೇಕಲ್ ತಾಲ್ಲೂಕು, ಸೂರ್ಯನಗರ" 1ನೇ ಹಂತದಲ್ಲಿನ ವಾಣಿಜ್ಯ ನಿವೇಶನ 955ರಲ್ಲಿ ವಾಣಿಜ್ಯ ಸಂಕೀರ್ಣ/" ಮಲ್ಟಿಪ್ಲೆಕ್ಸ್ ನಿರ್ಮಾಣ ಕಾಮಗಾರಿಯ ಯೋಜನಾ ಅಂದಾಜು ಮೊತ್ತ ರೂ. 138.60 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ 2ನೇ ಹಂತದ ಮುಂದುವರಿದ ಸರ್ಜಾಪುರ ಸಂಯುಕ್ತ ವಸತಿ ಯೋಜನೆಯ `ಬ್ಲಾಕ್-ಎ ರಲ್ಲಿ ಹಾದು ಹೋಗಿರುವ ರಾಜಕಾಲುವೆಗಳನ್ನು 11 ಕೋಟಿಗಳ ಅಂದಾಜಿನಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ.
  • ಕರ್ನಾಟಕ ಗೃಹ ಮಂಡಳಿಯು ಹಾವೇರಿ ಜಿಲ್ಲೆ, ಹಾವೇರಿ ತಾಲ್ಲೂಕು, ದೇವಗಿರಿಯಲ್ಲಾಪುರ ಗ್ರಾಮದಲ್ಲಿ ವಸತಿ ಯೋಜನೆಗಾಗಿ ಭೂಸ್ವಾಧೀನಪಡಿಸಿರುವ 99-07 ಎಕರೆ ಜಮೀನು ಪರಿಹಾರದ ಬದಲಿಗೆ ಭೂ ಮಾಲೀಕರಿಗೆ 50:50ರಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಅಸ್ತು.
  • ಕರ್ನಾಟಕ ಗೃಹ ಮಂಡಳಿಯು ಧಾರವಾಡ ಜಿಲ್ಲೆ, ಧಾರವಾಡ ತಾಲ್ಲೂಕು, ಸತ್ತೂರ ಗ್ರಾಮದಲ್ಲಿ ಮಂಡಳಿಯ ವಸತಿ ಯೋಜನೆಗಾಗಿ” ಭೂಸ್ವಾಧೀನಪಡಿಸಿರುವ ಒಟ್ಟು 258-09 ಎಕರೆ ಜಮೀನಿನ ಪೈಕಿ, 50:50ರ ಅನುಪಾತದ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂಮಾಲೀಕರಿಗೆ ನೀಡುವ ಬಗ್ಗೆ ಹಾಗೂ ಪ್ರತಿ ಎಕರೆಗೆ ರೂ. 5 ಲಕ್ಷ ಮುಂಗಡ ಹಣ ಪಾವತಿಸಲು ಅನುಮೋದನೆ.
  • ರಾಯಚೂರು ತಾಲೂಕಿನ ನಾರಾಯಣಪುರ ಬಲದಂಡೆ ನಾಲೆಯ ಉಪ ಕಾಲುವೆಯ ಭಾದಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಒಟ್ಟು ರೂ. 253.94 ಕೋಟಿಗಳ ಅಂದಾಜು ಮೊತ್ತದ 6 ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ.
  • ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಮೈಸೂರು- ಹದಿನಾರು (ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ) ಹಾಗೂ ಶಿರ-ನಂಜನಗೂಡು ರಸ್ತೆ (ರಾಜ್ಯ ಹೆದ್ದಾರಿ-84)ಗೆ ಸಂಪರ್ಕಿಸಲು ಹದಿನಾರು ಮತ್ತು ಸರಗೂರು ರಸ್ತೆಯ ಮಾರ್ಗವಾಗಿ ಕಬಿನಿ ನದಿಗೆ ಅಡ್ಡಲಾಗಿ ರೂ. 27 ಕೋಟಿಗಳ ಅಂದಾಜು ಮೊತ್ತದಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
  • ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲ್ಲೂಕು, ತಿಮ್ಮಸಂದ್ರ ಗ್ರಾಮದ ಸ.ನಂ. 19ರಲ್ಲಿ 07-00 ಎಕರೆ ಜಮೀನನ್ನು ಕರ್ನಾಟಕ ರಾಜ್ಯ "ಲಾನ್ ಟೆನಿಸ್ ಅಸೋಸಿಯೇಷನ್ ಇವರಿಗೆ ಅಂತಾರಾಷ್ಟ್ರೀಯ ದರ್ಜೆಯ ಟೆನ್ನಿಸ್ ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು.
  • ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ತಾಲ್ಲೂಕು, ಹಿರೇಮಗಳೂರು ಗ್ರಾಮದ ಸ.ನಂ. 544 ರಲ್ಲಿ 6 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟೋತ್ಥಾನ ಪರಿಷತ್ತಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಅಸ್ತು.
  • ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹೊಳಲ್ಕೆರೆ ಗ್ರಾಮದ ರಿ.ಸ.ನಂ. 378ರಲ್ಲಿ 1-00 ಎಕರೆ ಜಮೀನನ್ನು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಭಜನಾ ಮಂದಿರ ನಿರ್ಮಿಸಲು ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್, ಹೊಳಲ್ಕೆರೆ ಇವರೆಗೆ ಮಂಜೂರು.
  • ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಸ.ನಂ. 151ರಲ್ಲಿ 8-30 ಎಕರೆ/ ಗುಂಟೆ ಜಮೀನನ್ನು ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಸೇವಾ ಸಂಘ, ಬೋರಬಂಡಾಗೆ ಧಾರ್ಮಿಕ ಉದ್ದೇಶಕ್ಕಾಗಿ ಮಂಜೂರು.
  • ಬೆಂಗಳೂರು ಜಿಲ್ಲೆ, ಅನೇಕಲ್ ತಾಲ್ಲೂಕು, ಜಿಗಣಿ ಹೋಬಳಿ, ಹುಲಿಮಂಗಲ ಗ್ರಾಮದ ಸ.ನಂ. 155/6ರ ಬ್ಲಾಕ್ ನಂ. ಬಿ. 23 ರಲ್ಲಿ 1-36 ಎಕರೆ/ ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟೋತ್ಥಾನ ಪರಿಷತ್‌ಗೆ ಮಂಜೂರು.
  • ಜಲ ಜೀವನ್‌ ಮಿಷನ್ ಯೋಜನೆಯಡಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ, ಬಸರಕೋಡು ಮತ್ತು ಇತರೆ 51 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ವಿಸ್ತರಣೆ ಮೂಲಕ ಅಂಬಳಿ ಮತ್ತು ಇತರೆ 9 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಟ್ಟು ರೂ. ಕೋಟಿಗಳ ಅಂದಾಜು ಮೊತ್ತದಲ್ಲಿ 32.25 ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ವಿವಿ ಸಾಗರವನ್ನು ಜಲಮೂಲವನ್ನಾಗಿ ಪರಿಗಣಿಸಿ ಹಂತ-1 ರಿಂದ ಹಿರಿಯೂರು ತಾಲ್ಲೂಕಿನ ವಿವಿ ಪುರ ಮತ್ತು ಇತರೆ 11 ಗ್ರಾಮಗಳಿಗೆ ಗುಡಿಹಳ್ಳಿ ಮತ್ತು ಇತರ 15 ಗ್ರಾಮಗಳಿಗೆ ಹಾಗೂ ಗೋಗುದ್ದು ಮತ್ತು ಇತರೆ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಟ್ಟು ರೂ. 36 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಬಿ.ಡಿ. ಹಳ್ಳಿ ಮತ್ತು ಇತರೆ 7 ಜನವಸತಿಗಳು", ಮೀನಹಳ್ಳಿ ಮತ್ತು ಇತರೆ 3 ಜನವಸತಿಗಳು ಹಾಗೂ ಹಂದಿಹಾಳ್ ಮತ್ತು ಇತರ 1 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಟ್ಟು ರೂ. 45.74 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ನಾಲ್ಕೂ ಸಾರಿಗೆ ಸಂಸ್ಥೆಗಳ ದರ್ಜೆ-3ರ ಮೇಲ್ವಿಚಾರಕ ಸಿಬ್ಬಂದಿಗಳು, ದರ್ಜೆ-2 ಹಾಗೂ ದರ್ಜೆ-1 (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಯಾ ಸಾರಿಗೆ ಸಂಸ್ಥೆಗಳಿಗೆ ಶಾಶ್ವತ ಹಂಚಿಕೆ ಮಾಡಿ, ದರ್ಜೆ-1 (ಹಿರಿಯ ಶ್ರೇಣಿ) ಮತ್ತು ಮೇಲ್ಪಟ್ಟ ವೃಂದಗಳ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮುಂದುವರೆಸಲು ನಿರ್ಧಾರ.
  • ಕೇಂದ್ರ ಸರ್ಕಾರದ `ಫೇಮ್-2 ಯೋಜನೆಯಡಿ CESL ಮುಖಾಂತರ 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್‌ ಬಸ್‌ಗಳನ್ನು ಜಿ.ಸಿ.ಸಿ. (Gross Cost Contract) ಮಾದರಿಯಲ್ಲಿ ಕೇಂದ್ರ ಸರ್ಕಾರದ ಸಹಾಯಧನ ಹಾಗೂ ರಾಜ್ಯ ಸರ್ಕಾರದ ಧನಸಹಾಯ ಉಪಯೋಗಿಸಿಕೊಂಡು ಬೆಂಗಳೂರು ಮಹಾನಗರ ನಾರಿಗೆ ಸಂಸ್ಥೆಯಿಂದ ಕಾರ್ಯಾಚರಿಸಲು ಆಡಳಿತಾತ್ಮಕ ಅನುಮೋದನೆ.
  • ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿರುವ ಉಪನಗರಗಳನ್ನು ಸಂಪರ್ಕಿಸುವಂತೆ ಪ್ರಸ್ತಾಪಿಸಿರುವ ಮಧ್ಯಂತರ ವರ್ತುಲ ರಸ್ತೆಯ ಪಂಕ್ತೀಕರಣವನ್ನು ಮರುನಿಗದಿಪಡಿಸಿ ಅಧಿಸೂಚಿಸಲು ತೀರ್ಮಾನ
  • ಬೆಂಗಳೂರು ನಗರದಲಿ ಮೇ- ಸಪ್ಟೆಂಬರ್‌ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದ ಹಾನಿಯನ್ನು ತಡೆಗಟ್ಟುವ ಬಿಬಿಎಂಪಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿ, ದಿನಾಂಕ: 28.09.2022 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ.
  • ಬೆಂಗಳೂರಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಚಂದ್ರಾ ಬಡಾವಣೆಯಲ್ಲಿ ಬಿಬಿಎಂಪಿಯಿಂದ ಲೋಕಾರ್ಪಣೆಗೊಂಡಿರುವ ಕನಕ ಭವನದ ಸುಮಾರು 2924.89 ಚದರ ಮೀಟರ್‌ಗಳ ವಿಸ್ತೀರ್ಣದಲ್ಲಿ ನಿರ್ಮಿಸಿದ ಕಟ್ಟಡವನ್ನು “ಶ್ರೀಕಾಗಿನ ಮಹಾ ಸಂಸ್ಥಾನ ಕನಕ ಪೀಠ"ಕ್ಕ ಗುತ್ತಿಗೆ ಆಧಾರದ ಮೇಲೆ 30 ವರ್ಷಗಳ ಅವಧಿಗೆ ಹಸ್ತಾಂತರಿಸಲು ಅನುಮೋದನೆ.
  • ಸ್ಮಾರ್ಟ್‌ಸಿಟಿ ಅಭಿಯಾನದಡಿಯಲ್ಲಿ ಸೃಜಿಸಲಾದ ವಿಶೇಷ ಉದ್ದೇಶಿತ ವಾಹನದ ಮಂಡಳಿಗೆ (SPV Board for Smart City Project) ಪ್ರತ್ಯಾಯೋಜಿಸಿದ ಅಧಿಕಾರವನ್ನು‌ ಪರಿಷ್ಕರಿಸಲು ಅನುಮೋದನೆ.
  • ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ರೂ. 23,251,66 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ: ಪರಿಸರಸ್ನೇಹಿ ಬ್ಯಾಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ DFRL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.