ETV Bharat / state

ಕಂಟ್ರಿ ಪ್ಲಾನಿಂಗ್ ಕಾಯ್ದೆ ತಿದ್ದುಪಡಿಗೆ ಅಸ್ತು; ಇಂದಿನ ಸಂಪುಟ ಸಭೆ ನಿರ್ಣಯಗಳ ಮಾಹಿತಿ.. - TDR

ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಕಾಯ್ದೆ 1961 ತಿದ್ದುಪಡಿ ಕಾಯ್ದೆಯಲ್ಲಿ ಸ್ಥಳೀಯ ಸಂಸ್ಥೆಗಳೇ ಸರ್ವೆ ನಡೆಸಿ ಸಿದ್ಧಪಡಿಸಿದ ವರದಿ ಆಧಾರದಲ್ಲೇ ಟಿಡಿಆರ್ ನಿಗದಿಗೊಳಿಸಲು ಅನುವು ಮಾಡಿಕೊಡಲಾಗಿದೆ. ಇನ್ನು ಮುಂದೆ ಒಂದೇ ಪ್ರಾಧಿಕಾರ ವರದಿ ಆಧಾರದಲ್ಲಿ 90 ದಿನದೊಳಗೆ ಟಿಡಿಆರ್ ಮಂಜೂರಾತಿ ಮಾಡಬೇಕು. ಇಲ್ಲವಾದರೆ ಅದು ಮಂಜೂರಾತಿ ಆದಂತೆ ಪರಿಗಣಿಸಲಾಗುತ್ತದೆ ಎಂದು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

cabinet
ಸಚಿವ ಬಸವರಾಜ ಬೊಮ್ಮಾಯಿ
author img

By

Published : Jun 21, 2021, 7:42 PM IST

Updated : Jun 21, 2021, 7:55 PM IST

ಬೆಂಗಳೂರು: ಮಹತ್ವದ ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಕಾಯ್ದೆ 1961 ತಿದ್ದುಪಡಿಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮುಂಚೆ ಟಿಡಿಆರ್ (ಟ್ರಾನ್ಸ್​ಪರೇಬಲ್ ಡೆವಲಪ್ಮೆಂಟ್ ರೈಟ್) ನಿಗದಿಗೊಳಿಸುವ ಸಂಬಂಧ ಬಿಬಿಎಂಪಿ, ಬಿಎಂಆರ್ ಸಿಎಲ್, ಸ್ಥಳೀಯ ಪ್ರಾಧಿಕಾರಗಳು ಸರ್ವೆ ಮಾಡಿ ವರದಿಯನ್ನು ಸಂಬಂಧಿತ ಯೋಜನಾ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡುತ್ತಿದ್ದರು. ಯೋಜನಾ ಪ್ರಾಧಿಕಾರ ಮತ್ತೆ ಸರ್ವೆ ನಡೆಸಿ ಟಿಡಿಆರ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಿತ್ತು. ಇದರಿಂದ ಟಿಡಿಆರ್ ನಿಗದಿ ವಿಳಂಬವಾಗುತ್ತಿತ್ತು.

ಇದೀಗ ತಿದ್ದುಪಡಿ ಕಾಯ್ದೆಯಲ್ಲಿ ಸ್ಥಳೀಯ ಸಂಸ್ಥೆಗಳೇ ಸರ್ವೆ ನಡೆಸಿ ಸಿದ್ಧಪಡಿಸಿದ ವರದಿ ಆಧಾರದಲ್ಲೇ ಟಿಡಿಆರ್ ನಿಗದಿಗೊಳಿಸಲು ಅನುವು ಮಾಡಿಕೊಡಲಾಗಿದೆ. ಇನ್ನು ಮುಂದೆ ಒಂದೇ ಪ್ರಾಧಿಕಾರ ವರದಿ ಆಧಾರದಲ್ಲಿ 90 ದಿನದೊಳಗೆ ಟಿಡಿಆರ್ ಮಂಜೂರಾತಿ ಮಾಡಬೇಕು. ಇಲ್ಲವಾದರೆ ಅದು ಮಂಜೂರಾತಿ ಆದಂತೆ ಪರಿಗಣಿಸಲಾಗುತ್ತದೆ ಎಂದು ಕಾನೂನು ಸಚಿವ ಬೊಮ್ಮಾಯಿ ತಿಳಿಸಿದರು.

ರೇಣುಕಾಚಾರ್ಯ ಕ್ಷೇತ್ರಕ್ಕೆ ಬಂಪರ್: ಸಂಪುಟ ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಎರಡು ಕೆರೆ ತುಂಬಿಸುವ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದ ರೇಣುಕಾಚಾರ್ಯಗೆ ಸಂಪುಟ ಸಭೆಯಲ್ಲಿ ಬಂಪರ್ ಕೊಡುಗೆ ನೀಡಿದ್ದಾರೆ. ದಾವಣಗೆರೆಯ ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ‌ಬರುವ 94 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವ 415 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ವೃದ್ಧಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ ಒಟ್ಟಾರೆ 167 ಕೋಟಿಗಳ ವೆಚ್ಚದಲ್ಲಿ (ಹಂತ 1ರಲ್ಲಿ ರೂ. 121 ಕೋಟಿ ಮತ್ತು ಎರಡನೇ ಹಂತದಲ್ಲಿ ರೂ. 46 ಕೋಟಿ) ಕೈಗೊಳ್ಳುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೂರನೇ ಅಲೆ‌ ವರದಿ ನಾಳೆ ಸಿಎಂಗೆ ಸಲ್ಲಿಕೆ: ಮೂರನೇ ಅಲೆ ಸಂಬಂಧ ದೇವಿ ಶೆಟ್ಟಿ ನೇತೃತ್ವದ ಸಮಿತಿ ಸಿದ್ಧಪಡಿಸಿದ ಮಧ್ಯಂತರ ವರದಿಯನ್ನು ನಾಳೆ ಸಿಎಂಗೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು. ವರದಿಯನ್ನು ಆಧರಿಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸಂಪುಟ ತೀರ್ಮಾನಗಳೇನು?:

  • ಹಾಸನದಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಗಳ ರೂ.193.65 ಕೋಟಿಗಳ ಅಂದಾಜು ಮೊತ್ತಕ್ಕೆ ಅನುಮೋದನೆ‌
  • ಕೃಷಿ ವಿವಿ ಪ್ರವೇಶಾತಿಯಲ್ಲಿ ಕೃಷಿಕರ ಮಕ್ಕಳಿಗೆ ಪ್ರಸ್ತುತ ಇರುವ 40% ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಅಸ್ತು. ಬಜೆಟ್​ನಲ್ಲಿ ಘೋಷಣೆಯಂತೆ ತೀರ್ಮಾನ
  • ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ರಾಣಿ ಚೆನ್ನಮ್ಮ ವಿವಿ ಕಟ್ಟಡ ನಿರ್ಮಾಣಕ್ಕಾಗಿ 110 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ
  • ಮೈಸೂರು ವೈದ್ಯಕೀಯ ಕಾಲೇಜು ವ್ಯಾಪ್ತಿಯ ಟಿಕೆಟಿಬಿ ಆವರಣದಲ್ಲಿನ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ ಕಾಮಗಾರಿಗಳ 154.44 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ಕಂಟಿಂಜೆನ್ಸಿ ಫಂಡ್ 2,500 ಕೋಟಿ ರೂ.ಗೆ ಹೆಚ್ಚಿಸುವ ಆದ್ಯಾದೇಶಕ್ಕೆ ಅನುಮೋದನೆ
  • ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ನರ್ಸಿಂಗ್ ಕೌನ್ಸಿಲ್, ನರ್ಸಿಂಗ್ ಪರೀಕ್ಷಾ ಮಂಡಳಿ, ಪ್ಯಾರಾ ಮೆಡಿಕಲ್ ಮಂಡಳಿಗೆ ಸ್ವಂತ ಕಟ್ಟಡ ನಿರ್ಮಾಣ ಯೋಜನೆಗಾಗಿ 75 ಕೋಟಿ ರೂ.ಗೆ ಆಡಳಿತ ಅನುಮೋದನೆ
  • ರಾಜ್ಯದಲ್ಲಿ ಸ್ವಂತ ಕಟ್ಟಡಗಳಿಲ್ಲದ 100 ಪೊಲೀಸ್ ಠಾಣೆಗಳಿಗೆ 200 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡಗಳ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ. ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿರ್ದೇಶನ
  • ಕರ್ನಾಟಕ ಭೂ ಮಂಜೂರಾತಿ ತಿದ್ದುಪಡಿ ನಿಯಮ 2021ಗೆ ಅನುಮೋದನೆ. ಆ ಮೂಲಕ ರೂಲ್ 22ಎ ಗೆ ತಿದ್ದುಪಡಿ ತರಲು ನಿರ್ಧಾರ. ಖರಾಬ್ ಭೂಮಿ ಮಧ್ಯೆ ಕೆರೆಗಳು ಬಂದರೆ, ಈ ಮುಂಚೆ ಅವುಗಳನ್ನು ಕಾಲಮಿತಿಯಿಲ್ಲದೆ ಕನ್ವರ್ಷನ್ ಮಾಡಲು ಅನುಮತಿ ಇತ್ತು. ಇನ್ನು ಮುಂದೆ ಕನಿಷ್ಟ 10 ವರ್ಷ ಅಂಥ ಕೆರೆಕಟ್ಟೆ ಸ್ವರೂಪ ಇಲ್ಲದೇ ಇದ್ದರೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ಹಾಸನದ ಅರಸೀಕೆರೆ ತಾಲೂಕಿನ ಗಂಡಸಿ, ಬಾಣಾವಾರ ಬ್ಲಾಕ್ ಗಳ 530 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯ 307.19 ಕೋಟಿ ‌ಪರಿಷ್ಕೃತ ಮೊತ್ತಕ್ಕೆ ಮರು ಆಡಳಿತಾತ್ಮಕ ಅನುಮೋದನೆ
  • ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಪೂರ್ವದಲ್ಲಿ ಬಾಕಿ ಇರುವ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗಾಗಿ 193.33 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ
  • ವಿಶ್ವಬ್ಯಾಂಕ್ ನೆರವಿನ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಹಂತ-2 ಮತ್ತು ಹಂತ-3ರಲ್ಲಿ 1,500 ಕೋಟಿ ರೂ. ಮೊತ್ತದ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ. ಇದರಲ್ಲಿ ರಾಜ್ಯ ಸರ್ಕಾರ 450 ಕೋಟಿ ರೂ. ಪಾಲಾಗಿದೆ.
  • ಕರ್ನಾಟಕ ರಾಜ್ಯ ಜಲ ನೀತಿ 2021ಗೆ ಅನುಮೋದನೆ. ರಾಜ್ಯದಲ್ಲಿ ನೀರಿನ ನಿರ್ವಹಣೆ, ಬಳಕೆ ಸಂಬಂಧ 2019 ರಾಜ್ಯ ಜಲ‌ನೀತಿಯನ್ನು ಪರಿಷ್ಕರಿಸಿ ಹೊಸ ನೀತಿ ಮಾಡಲು ತೀರ್ಮಾನ. ಈ ಸಂಬಂಧ ಸಂಪುಟ ಉಪಸಮಿತಿ ರಚಿಸಲು ನಿರ್ಧಾರ.
  • ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಡಿ ಬರುವ 74 ಕೆರೆಗಳಿಗೆ ತುಂಗಾ ಭದ್ರಾ ನದಿಯಿಂದ ನೀರೆತ್ತಿ ಎರಡು ಹಂತಗಳಲ್ಲಿ ತುಂಬಿಸಿ, ಕುಡಿಯುವ ನೀರು ಒದಗಿಸುವ 670 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ
  • ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿರುವ 'ಕಲ್ಲುವಡ್ಡರ್' ಮತ್ತು 'ಮಣ್ಣುವಡ್ಡರ್' ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈಬಿಡಲು ಅಸ್ತು
  • ಶಾಲೆ ವಿದ್ಯಾರ್ಥಿಗಳಿಗೆ 83 ಕೋಟಿ ರೂ.‌ಮೊತ್ತದ ಸಮವಸ್ತ್ರ ನೀಡಲು ಅನುಮೋದನೆ

Last Updated : Jun 21, 2021, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.