ETV Bharat / state

ಮುಂದಿನ ಸಂಪುಟ ವಿಸ್ತರಣೆಯಾದಾಗ ಬಿಎಸ್​ವೈ ಖಂಡಿತ ನನ್ನನ್ನು ಮರೆಯುವುದಿಲ್ಲ: ಎಂಟಿಬಿ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮನಸ್ಸಿನಲ್ಲಿ ನಾನಿದ್ದೇನೆ, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Cabinate expansion: BSY considers me: MTB Nagaraj
ಸಂಪುಟ ವಿಸ್ತರಣೆಯಾಗಲಿದೆ,, ಬಿಎಸ್​ವೈ ಮನದಲ್ಲಿ ನನ್ನ ಹೆಸರಿದೆ: ಎಂಟಿಬಿ
author img

By

Published : Feb 27, 2020, 3:19 PM IST

ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮನಸ್ಸಿನಲ್ಲಿ ನಾನಿದ್ದೇನೆ, ಖಂಡಿತ ಅವರು ನನ್ನನ್ನು ಮರೆಯುವುದಿಲ್ಲ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಸಂಪುಟ ವಿಸ್ತರಣೆಯಾಗಲಿದೆ,, ಬಿಎಸ್​ವೈ ಮನದಲ್ಲಿ ನನ್ನ ಹೆಸರಿದೆ: ಎಂಟಿಬಿ

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಎಂಟಿಬಿ ನಾಗರಾಜ್ ಸಿಎಂ ಬಿಎಸ್​ವೈಗೆ ಹುಟ್ಟುಹಬ್ಬದ ಶುಭ ಕೋರಿದರು. ನಂತರ ಮಾತನಾಡಿದ ಅವರು, ಎಲ್ಲಾ ಕಾರ್ಯಕರ್ತರು ಅಭಿಮಾನಿಗಳು ಬಂದು ಯಡಿಯೂರಪ್ಪನವರ 78ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅವರಿಗೆ ದೇವರು ಆಯುಷ್ಯ, ಆರೋಗ್ಯ ಕೊಡಲಿ. ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲು, ಬಡವರ ಪರವಾಗಿ, ರೈತರ ಪರವಾಗಿ, ಎಲ್ಲ ಸಮುದಾಯದ ಪರವಾಗಿ ಸಮಗ್ರ ಅಭಿವೃದ್ಧಿ ಮಾಡಲು ದೇವರು ಅವರಿಗೆ ಶಕ್ತಿ ನೀಡಲಿ. ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಸಾಮರ್ಥ್ಯ ನೀಡಿ ಮುಂಬರುವ ಚುನಾವಣೆಯಲ್ಲಿ ಬಹುಮತದಿಂದ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೆಂದು ಹಾರೈಸುತ್ತೇನೆ ಎಂದರು.

ಸಂಪುಟ ವಿಸ್ತರಣೆ ನಂತರ ನಮ್ಮನ್ನು ಯಾರೂ ಕಡೆಗಣಿಸಿಲ್ಲ, ನಮ್ಮವರು ನಮ್ಮನ್ನು ಮರೆತಿಲ್ಲ, ಮರೆಯುವ ಪ್ರಶ್ನೆಯೇ ಬರಲ್ಲ. ಕಾಲ ಬಂದಾಗ ಎಲ್ಲವೂ ಒಳ್ಳೆಯದಾಗಲಿದೆ. ಕಾಯಬೇಕು ಅಷ್ಟೇ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.