ETV Bharat / state

Air India Recruitment: ಗಗನಸಖಿಯಾಗುವ ಕನಸಿಗೆ ಇಲ್ಲಿದೆ ರೆಕ್ಕೆ; ನಾಳೆ ಬೆಂಗಳೂರಿನಲ್ಲೇ ನಡೆಯಲಿದೆ ವಾಕ್​-ಇನ್​- ಇಂಟರ್​ವ್ಯೂ - ಈಟಿವಿ ಭಾರತ್​ ಕನ್ನಡ

ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್​ ಕ್ರೂ ಹುದ್ದೆ ನೇಮಕಾತಿ ಇದಾಗಿದೆ

Air India Recruitment
Cabin Crew Job Recruitment form Air India in Bengaluru
author img

By

Published : Jun 21, 2023, 1:06 PM IST

ಪಿಯುಸಿ ಆದಾಕ್ಷಣ ಉದ್ಯೋಗದ ದಾರಿ ಹುಡುಕುತ್ತಿರುವ ಯುವತಿಯರಿಗೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಭರ್ಜರಿ ಅವಕಾಶ ನೀಡಿದೆ. ಏರ್​ ಇಂಡಿಯಾದ ಸಂಸ್ಥೆಯಲ್ಲಿ (Air India Limited) ಖಾಲಿ ಇರುವ ಕ್ಯಾಬಿನ್​ ಕ್ರೂ ಹುದ್ದೆ ಭರ್ತಿಗೆ ಸಂಸ್ಥೆ ಅಧಿಸೂಚನೆ ಪ್ರಕಟಿಸಿದೆ. ವಾಕ್​ ಇನ್​ ಮೂಲಕ ಈ ಹುದ್ದೆ ಆಯ್ಕೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಬಹುದು. ಈ ಹುದ್ದೆಗಳು ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.

ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್​ ಕ್ರೂ ಹುದ್ದೆ ನೇಮಕಾತಿ ಇದಾಗಿದೆ. ಆಗಸದಲ್ಲಿ ಹಾರುವ ಜೊತೆಗೆ ವಿವಿಧ ರಾಜ್ಯ, ದೇಶದ ಅತಿಥಿಗಳೊಂದಿಗೆ ಉತ್ತಮ ಸಂಭಾಷಣೆ, ಅತಿಥ್ಯವನ್ನು ಬೇಡುವ ಹುದ್ದೆ ಇದಾಗಿದೆ. ಈ ಹುದ್ದೆ ಅನೇಕ ಯುವತಿಯರ ಕನಸಾಗಿದ್ದು, ಅದಕ್ಕೆ ಇದೀಗ ವೇದಿಕೆ ಸಿಕ್ಕಿದೆ. ಅತ್ಯುತ್ತಮ ಸಂಬಳ ಹೊಂದಿರುವ ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ವಿಮಾನದ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತಾ ಸೇವೆ ಒದಗಿಸುವುದು ಕ್ಯಾಬಿನ್​ ಕ್ರೂ ಹುದ್ದೆಯಾಗಿದೆ. ನಿಗದಿತ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ.

ಯಾರು ಅರ್ಜಿ ಸಲ್ಲಿಸಬಹುದು

  • ಪಿಯುಸಿಯಲ್ಲಿ ಕನಿಷ್ಠ 50 ಅಂಕ ಪಡೆದ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿದ್ದಾರೆ.
  • ಯುವತಿಯರ ಎತ್ತರ 155 ಸೆಂ.ಮೀ ಇರಬೇಕು.
  • 18 ರಿಂದ 27 ವರ್ಷದ ಯುವತಿಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
  • ಯುವತಿಯರು ಇಂಗ್ಲಿಷ್​ ಮತ್ತು ಹಿಂದಿ ಭಾಷೆಯಲ್ಲಿ ಉತ್ತಮ ಹಿಡಿತವನ್ನು ಹೊಂದಿರಬೇಕು.
  • ಭಾರತೀಯ ಪ್ರಜೆಯಾಗಿದ್ದು, ಭಾರತೀಯ ಪಾಸ್​ಪೋರ್ಟ್​, ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​​ ಹೊಂದಿರಬೇಕು

ಎಲ್ಲಿ- ಯಾವಾಗ ನಡೆಯಲಿದೆ ಸಂದರ್ಶನ:

ಜೂನ್​ 22 ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12:30ರವರೆಗೆ ಈ ನೇರ ಸಂದರ್ಶನ ನಡೆಯಲಿದೆ. ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಮರ್ಥ್ಯದ ಮೂಲಕ ಆಯ್ಕೆ ನಡೆಸಲಾಗುವುದು.

ಸಂದರ್ಶನದ ಸ್ಥಳ: ಐಟಿಸಿ ಫಾರ್ಚೂನ್​ ಪಾರ್ಕ್,​ ಜೆಪಿ ಸೆಲೆಸ್ಟಿಯಲ್​, 5, 43, ರೇಸ್​ ಕೋರ್ಸ್​ ರೋಡ್​, ಆನಂದ್​ ರಾವ್​ ಸರ್ಕಲ್​, ರೇಸ್​ ಕೋರ್ಸ್​​, ಗಾಂಧಿ ನಗರ, ಬೆಂಗಳೂರು- 650009.

ಈ ದಾಖಲೆ ಅವಶ್ಯ: ಈ ಹುದ್ದೆಗೆ ಹಾಜರಾಗುವ ಇಚ್ಛೆಯನ್ನು ಹೊಂದಿರುವ ಅಭ್ಯರ್ಥಿಗಳು ಜೂನ್​ 22ರಂದು ನಡೆಯುವ ಈ ಸಂದರ್ಶನದಲ್ಲಿ ತಮ್ಮ ಶೈಕ್ಷಣಿಕ ದಾಖಲಾತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಂಡೊಯ್ಯುವುದು ಅತಿ ಮುಖ್ಯ. ಜೊತೆಗೆ ಹೊಸ ಅಪ್​ಡೇಟ್​ ರೆಸ್ಯೂಮ್​ ಅನ್ನು ಜೊತೆಗೆ ಎಸ್​ಇಪಿ ಕಾರ್ಡ್​​ ಅನ್ನು ಹೊಂದಿರಬೇಕು. ಅಭ್ಯರ್ಥಿಗಳು ವೆಸ್ಟರ್ನ್​ ಫಾರ್ಮಲ್​ ಧಿರಿಸಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆ ವೀಕ್ಷಣೆಗೆ airindia.in ಈ ಅಧಿಕೃತ ಜಾಲತಾಣಕ್ಕೆ ಅಭ್ಯರ್ಥಿಗಳು ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: IBPS Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ 8594 ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.