ETV Bharat / state

ಹಿಜಾಬ್ ವಿಚಾರದಲ್ಲಿ ಟೂಲ್ ಕಿಟ್ ಅಜೆಂಡಾ ಥರ ಪ್ಲಾನ್ ಮಾಡಲಾಗಿದೆ: ಸಿ ಟಿ ರವಿ ಕಿಡಿ - ಹಿಜಾಬ್ ವಿಚಾರದ ಕುರಿತು ಸಿ ಟಿ ರವಿ ಹೇಳಿಕೆ

ಶಾಸಕ ಜಮೀರ್ ಹೇಳಿಕೆಯನ್ನು ಖಂಡಿಸಿದ ಸಿ. ಟಿ ರವಿ, ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೀತಿದೆ‌. ಇದು ಮಾನಸಿಕತೆ ಮೇಲೆ ಆಧಾರವಾಗಿರುವ ವಿಚಾರ. ಜಮೀರ್ ದೃಷ್ಟಿಯಲ್ಲಿ ದೋಷ ಇದೆ. ಅವರು ತಮ್ಮ ದೃಷ್ಟಿ ದೋಷ ಸರಿಪಡಿಸಿಕೊಳ್ಳಲಿ ಎಂದರು.

c-t-ravi
ಸಿ ಟಿ ರವಿ ಕಿಡಿ
author img

By

Published : Feb 15, 2022, 4:00 PM IST

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಟೂಲ್ ಕಿಟ್ ಅಜೆಂಡಾ ಥರ ಪ್ಲಾನ್ ಮಾಡಲಾಗಿದೆ. ಕಪಿಲ್ ಸಿಬಲ್, ದೇವದತ್ತ ಕಾಮತ್, ರವಿ ವರ್ಮ ಕುಮಾರ್, ಸೋಂದೆ ಇವರೆಲ್ಲ ಕಾಂಗ್ರೆಸ್​​​ನ ಫಲಾನುಭವಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇವರು ಹಿಜಾಬ್ ಪ್ರಕರಣದಲ್ಲಿ ಬಂದಿರೋದು ಕಾಕತಾಳೀಯ ಅಲ್ಲ. ಇದರ ಹಿಂದೆ ಕಾಂಗ್ರೆಸ್ ತಾನು ಇಲ್ಲ‌ ಅಂತ ಹೇಳಬಹುದು. ಆದರೂ ಏನೋ ಇದೆ ಅಂತ ಅನ್ಸತ್ತೆ. ಯುಪಿ ಚುನಾವಣೆ ಆಗೋವರೆಗೂ ಈ ವಿಚಾರಣೆ ಮುಂದೂಡಿ ಅಂತ ಅರ್ಜಿ ಹಾಕಿದ್ದಾರೆ. ರಾಜಕೀಯಕ್ಕೆ ಇದನ್ನು ದುರ್ಬಳಕೆ ಮಾಡಿಕೊಳ್ತಿದೆ ಕಾಂಗ್ರೆಸ್. ಅದಕ್ಕಾಗಿಯೇ ವಿವಾದ ಹುಟ್ಟು ಹಾಕುವ ಸಂಚು ನಡೆದಿದೆ ಎಂದು ಕಿಡಿ ಕಾರಿದರು.

ಇಲ್ಲದ ವಿವಾದ ಹುಟ್ಟು ಹಾಕಿರೋದು, ಇವರೆಲ್ಲರ ವಕಾಲತ್ತು ಕಾಂಗ್ರೆಸಿಗರೇ ಮಾಡ್ತಿರೋದು ಕಾಕತಾಳಿಯ ಅಲ್ಲ. ಕೋರ್ಟ್ ಮಧ್ಯಂತರ ಆದೇಶ ಎಲ್ರೂ ಪಾಲಿಸಬೇಕು. ಪಾಲಿಸದಿದ್ದರೆ ಅವರ ಅಜೆಂಡಾ ಬೇರೇನೋ ಇದೆ ಎಂದರ್ಥ. ಸಮವಸ್ತ್ರ ರೂಲ್ಸ್​ ವಿರುದ್ಧ ನಡೆದುಕೊಂಡರೆ ಅದರ ಹಿಂದೆ ದುರುದ್ದೇಶ ಇದೆ ಎಂದರು.

ಶಾಸಕ ಜಮೀರ್ ಹೇಳಿಕೆಯನ್ನು ಖಂಡಿಸಿದ ಸಿ. ಟಿ ರವಿ, ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೀತಿದೆ‌. ಇದು ಮಾನಸಿಕತೆ ಮೇಲೆ ಆಧಾರವಾಗಿರುವ ವಿಚಾರ. ಜಮೀರ್ ದೃಷ್ಟಿಯಲ್ಲಿ ದೋಷ ಇದೆ. ಅವರು ತಮ್ಮ ದೃಷ್ಟಿ ದೋಷ ಸರಿಪಡಿಸಿಕೊಳ್ಳಲಿ.

ಸಿರಿಯಾ, ಇರಾನ್, ಇರಾಕ್ ನಲ್ಲಿ ಖುರ್ದೀಷ್ ಮಹಿಳೆಯರ ಶೋಷಣೆ ನಡೀತಿದೆ. ಇಸ್ಲಾಂ ಹೆಸರಲ್ಲಿ ದೌರ್ಜನ್ಯ ನಡೀತಿದೆ. ಜಮೀರ್ ತಮ್ಮ ಮಾನಸಿಕತೆ, ದೃಷ್ಟಿ ಸರಿಪಡಿಸಿಕೊಳ್ಳಲಿ. ಹೆಣ್ಣನ್ನು ತಾಯಿ ಥರ ನೋಡಿದರೆ, ತಾಯಿ ಥರ ಕಾಣ್ತಾಳೆ. ಕಾಮುಕ ದೃಷ್ಟಿಯಿಂದ ನೋಡಿದ್ರೆ?. ಇದು ಜಮೀರ್ ದೃಷ್ಟಿಯಲ್ಲಿ ಇರುವ ದೋಷ. ಜಮೀರ್ ತಮ್ಮ ದೃಷ್ಟಿ ಸರಿಪಡಿಸಿಕೊಳ್ಳಲಿ ಎಂದು ಟೀಕಿಸಿದರು.

ಓದಿ: ರೈತನಿಗೆ ಸಿಗದ ಪರಿಹಾರ : ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.