ಬೆಂಗಳೂರು: ಹಿಜಾಬ್ ವಿಚಾರವನ್ನ ವಿಷಯಾಂತರ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಅದಕ್ಕೆ ಗೌರವ ಕೊಟ್ಟಿದ್ದೇವೆ. ನಮಗೆ ಅಖಂಡ ಭಾರತದ ಅಶಯ ಅಷ್ಟೇ ಮುಖ್ಯ. ರಾಷ್ಟ್ರಧ್ವಜ ಕೆಳಗಿಳಿಸಿ ಭಗವಾಧ್ವಜ ಹಾರಿಸಿದ್ರೆ ತಪ್ಪು. ರಾಷ್ಟ್ರಧ್ವಜದ ಕೆಳಗಡೆ ಭಗವಾಧ್ವಜ ಹಾರಿಸಿದ್ರೆ ತಪ್ಪಲ್ಲ. ಕಾಂಗ್ರೆಸ್‌ಗೆ ಭಗವಾಧ್ವಜ ಕಂಡ್ರೆ ಆಗೋದಿಲ್ಲ ಅದಕ್ಕೆ ಅವರಿಗೆ ಉರಿ. ಅಖಂಡ ಭಾರತ ಆಗಬೇಕು ಅನ್ನೋದು ನಮ್ಮ ಅಶಯ ಎಂದರು.
ಸ್ವತಂತ್ರ ಬಂದಮೇಲೆ ತ್ರಿವರ್ಣ ಧ್ವಜ ಬಂದಿದೆ, ನಾವು ಅದನ್ನ ಒಪ್ಪಿಕೊಂಡಿದ್ದೇವೆ. ಆದ್ರೆ, ಅಖಂಡ ಭಾರತದ ಅಶಯ ನಮಗಿದೆ. ರಾಷ್ಟ್ರಧ್ವಜ ತೆಗೆದು ಕೇಸರಿ ಹಾರಿಸ್ತೇವೆ ಅಂತ ಹೇಳಿಲ್ಲ. ರಾಷ್ಟ್ರಧ್ವಜಕ್ಕೆ ನಾವು ಗೌರವ ಕೊಟ್ಟೇ ಕೊಡ್ತೇವೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ಅವರು ಏನು ಮಾಡಿದ್ರು? 11 ಜನರನ್ನ ಗುಂಡು ಹಾರಿಸಿ ಕೊಂದ್ರು. ಈಗ ರಾಷ್ಟ್ರಧ್ವಜದ ಬಗ್ಗೆ ಎಲ್ಲಿಲ್ಲದ ಪ್ರೀತಿ ಹುಟ್ಟಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಇವರಾ ಬಂಧುಗಳು.. ತೆಲಂಗಾಣದಲ್ಲಿ ಮೊಮ್ಮಕ್ಕಳನ್ನು ಅಪಹರಿಸಿದ ಅಜ್ಜಿ.. 30 ಲಕ್ಷಕ್ಕೆ ಬೇಡಿಕೆ!!
ಲಾಲ್ ಚೌಕದ ಮೇಲೆ ಪಾಕ್ ಧ್ವಜ ಹಾರಿಸಿ ಎಂದು ಉಗ್ರಗಾಮಿಗಳು ಒತ್ತಡ ಹಾಕಿದ್ರು. ಅಲ್ಲಿ ನಾವು ರಾಷ್ಟ್ರಧ್ವಜ ಹಾರಿಸಿ ಬಂದವರು. ರಾಣಿ ಚೆನ್ನಮ್ಮ ಮೈದಾನದಲ್ಲಿ ಗುಂಡು ಹಾರಿಸಿದ್ದು ಹೇಗೆ? ಜೆಎಂಎಂ ಪ್ರಾಡಕ್ಟ್ ಗಳು ಇವರ ಜೊತೆ ಸೇರಿದ್ದಾರೆ. ಕನ್ಹಯ್ಯ ಸೇರಿ ಹಲವರು ಬಂದಿದ್ದಾರೆ. ಹಿಜಾಬ್ ಮರೆಮಾಚೋಕೆ ವಿಷಯಾಂತರ ಮಾಡ್ತಿದ್ದಾರೆ ಎಂದು ದೂರಿದರು.