ETV Bharat / state

ದೇಣಿಗೆ ಕೊಟ್ಟವರಿಗಿಲ್ಲದ ಅನುಮಾನ ನಿಮಗೇಕೆ?: ಹೆಚ್​ಡಿಕೆಗೆ ಸಿಟಿ ರವಿ ತಿರುಗೇಟು! - C T Ravi talk about Rama Mandhira donation

ರಾಷ್ಟ್ರ ಮಂದಿರಕ್ಕೆ ಪ್ರತಿಯೊಬ್ಬ ಭಾರತೀಯನ, ರಾಮ ‌ಭಕ್ತನ ಕಾಣಿಕೆ‌ ಇರಬೇಕು ಅನ್ನುವ ಏಕೈಕ ದೃಷ್ಟಿಯಿಂದ ಕರ‌ಸೇವಕರು, ಸ್ವಯಂಸೇವಕರು ಸಮಾಜದ ಪ್ರತಿಯೊಬ್ಬ‌ರ‌ ಮನೆಯನ್ನೂ‌ ಸಂಪರ್ಕ ಮಾಡುತ್ತಿರುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

c-t-ravi-outrage-against-kumaraswamy
ಸಿಟಿ ರವಿ
author img

By

Published : Feb 17, 2021, 10:53 PM IST

ಬೆಂಗಳೂರು: ಕುಮಾರಸ್ವಾಮಿಯವರೇ ಇದುವರೆಗೂ ಬಡವ ಬಲ್ಲಿದ ಎಂಬ ಭೇದವಿಲ್ಲದೆ ‌ಕೋಟ್ಯಂತರ ಮಂದಿ‌‌ ರಾಮ ಭಕ್ತರು ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟಿದ್ದಾರೆ. ಅವರಿಗೆ ಇಲ್ಲದ ಅನುಮಾನ‌, ಅಪನಂಬಿಕೆ ದುಡ್ಡನ್ನೇ ಕೊಡದ ನಿಮಗೆ ಯಾಕೆ‌? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

  • ಕುಮಾರಸ್ವಾಮಿಯವರೇ, ಇದುವರೆಗೂ ಬಡವ ಬಲ್ಲಿದ ಎಂಬ ಭೇದವಿಲ್ಲದೆ ‌ಕೋಟ್ಯಾಂತರ ಮಂದಿ‌‌ ರಾಮ ಭಕ್ತರು ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟಿದ್ದಾರೆ.

    ಅವರಿಗೆ ಇಲ್ಲದ ಅನುಮಾನ‌ ಅಪ ನಂಬಿಕೆ ದುಡ್ಡನ್ನೇ ಕೊಡದ ನಿಮಗೆ ಯಾಕೆ‌?

    — C T Ravi 🇮🇳 ಸಿ ಟಿ ರವಿ (@CTRavi_BJP) February 17, 2021 " class="align-text-top noRightClick twitterSection" data=" ">

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಷ್ಟ್ರ ಮಂದಿರಕ್ಕೆ ಪ್ರತಿಯೊಬ್ಬ ಭಾರತೀಯನ, ರಾಮ ‌ಭಕ್ತನ ಕಾಣಿಕೆ‌ ಇರಬೇಕು ಅನ್ನುವ ಏಕೈಕ ದೃಷ್ಟಿಯಿಂದ ಕರ‌ಸೇವಕರು, ಸ್ವಯಂಸೇವಕರು ಸಮಾಜದ ಪ್ರತಿಯೊಬ್ಬರ ಮನೆಯನ್ನೂ‌ ಸಂಪರ್ಕ ಮಾಡುತ್ತಿರುವುದು. ಅದು‌ ಭಿಕ್ಷುಕನೇ ಇರಲಿ‌ ಅಥವಾ ಅಗರ್ಭ ಸಿರಿವಂತನೇ ಇರಲಿ. ತಮ್ಮ ಕೈಯಲ್ಲಿ ಆದ ದೇಣಿಗೆ ಕೊಡಲಿ‌ ಎನ್ನುವ ಕಾರಣಕ್ಕೆ ಕುಮಾರಸ್ವಾಮಿಯವರೇ. ಹಣದ ಸಂಗ್ರಹವೇ ನಮ್ಮ‌ ಗುರಿ ಆಗಿದ್ದರೆ ನಾವು ಮನೆ‌ ಮನೆಗೆ ಹೋಗಿ ಸಂಗ್ರಹ ಮಾಡುವ ಆವಶ್ಯಕತೆ ಇರಲಿಲ್ಲ ಎಂದು ಟಾಂಗ್ ನೀಡಿದ್ದಾರೆ.

ದೇಶದ ಉದ್ಯೋಗಪತಿಗಳೇ ಮಂದಿರದ ನಿರ್ಮಾಣ‌‌ದ ಸಂಪೂರ್ಣ ಖರ್ಚು ಕೊಡುತ್ತಿದ್ದರು. ಅದು ಹಾಗಾಗಬಾರದು, ಪ್ರಭು ಶ್ರೀ ರಾಮ‌ಚಂದ್ರ ಈ ದೇಶದ ರಾಷ್ಟ್ರ ಪುರುಷ, ಅವನಿಗೆ ನಿರ್ಮಾಣ ಮಾಡುವ ಮಂದಿರ ಅದು ರಾಷ್ಟ್ರ ಮಂದಿರ. ತುರ್ತುಪರಿಸ್ಥಿತಿ ದೇಶದಲ್ಲಿ‌ ಇಲ್ಲ, ಇಲ್ಲಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಪೂರ್ಣ ಬಹುಮತದಿಂದ ಆಯ್ಕೆಯಾದ ಮೋದಿ ಸರ್ಕಾರ. ಆದರೆ ತುರ್ತುಸ್ಥಿತಿಯಂತಹ ಪರಿಸ್ಥಿತಿ ಇದ್ದದ್ದು ನಿಮ್ಮ ಮೂರು ಜಿಲ್ಲೆಯ ಸರ್ಕಾರ 2019ರಲ್ಲಿ ಅಧಿಕಾರಕ್ಕೆ ಬಂದಿದ್ದಾಗ‌ ಎಂದು ತಿರುಗೇಟು ನೀಡಿದ್ದಾರೆ.

  • ಹಣದ ಸಂಗ್ರಹವೇ ನಮ್ಮ‌ ಗುರಿ ಆಗಿದ್ದರೆ ನಾವು ಮನೆ‌ಮನೆಗೆ ಹೋಗಿ ಸಂಗ್ರಹ ಮಾಡುವ ಆವಶ್ಯಕತೆ ಇರಲಿಲ್ಲ @hd_kumaraswamyಯವರೆ.

    ದೇಶದ ಉದ್ಯೋಗಪತಿಗಳೇ ಮಂದಿರದ ನಿರ್ಮಾಣ‌‌ದ ಸಂಪೂರ್ಣ ಖರ್ಚು ಕೊಡುತ್ತಿದ್ದರು. ಅದು ಹಾಗಾಗಬಾರದು, ಪ್ರಭು ಶ್ರೀ ರಾಮ‌ಚಂದ್ರ ಈ ದೇಶದ ರಾಷ್ಟ್ರ ಪುರುಷ, ಅವನಿಗೆ ನಿರ್ಮಾಣ ಮಾಡುವ ಮಂದಿರ ಅದು ರಾಷ್ಟ್ರ ಮಂದಿರ.

ಓದಿ: ಗೋಲಿಬಾರ್​​ನಲ್ಲಿ ಹುತಾತ್ಮರಾದ ರೈತರ ಸಮಾಧಿಗಳಿಗೆ ಪುಪ್ಷ ನಮನ ಸಲ್ಲಿಸಿದ ಸಿಎಂ ಬಿಎಸ್​ವೈ

ನಿಮ್ಮ ನೀತಿಯನ್ನು ಟೀಕಿಸಿದ ಕಾರಣಕ್ಕೆ ತಮ್ಮದೇ ಸರ್ಕಾರ, ಲೇಖಕರು, ಪತ್ರಕರ್ತರೂ ಆದ ಸಂತೋಷ್ ತಮ್ಮಯ್ಯ, ಅಜಿತ್ ಶೆಟ್ಟೆ ಹೆರಂಜೆ, ಶಾರದ ಡೈಮಂಡ್ ಮೇಲೆ ಕೇಸು ಹಾಕಿಸಿ ರಾತ್ರೋರಾತ್ರಿ ಬಂಧಿಸಿದಾಗ, ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಗೌರವ ಇರಲಿಲ್ಲವೇ? ನೀತಿ, ಬೋಧನೆಗೆ ಒಂದು, ಪಾಲನೆಗೆ ಒಂದು ಇರಬಾರದು ಕುಮಾರ ಸ್ವಾಮಿಯವರೇ. ದಿಶಾ ರವಿ ಬಂಧನವಾಗಿರುವುದು ಅಂತಾರಾಷ್ಟ್ರೀಯ ಮಟ್ಟದ ಸಂಘಟನೆಗಳ ಜೊತೆ ಸೇರಿ ಟೂಲ್ ಕಿಟ್ ತಯಾರಿ/ತಿದ್ದುವಲ್ಲಿ ಪಾಲ್ಗೊಂಡಿದ್ದಾಳೆ ಎನ್ನುವ ಕಾರಣಕ್ಕೆ. ಆಕೆಯ ಬಂಧನ ಸಂವಿಧಾನ/ಕಾನೂನುಬದ್ಧವಾಗಿ ನಡೆದಿದೆ. ಆಕೆ ಸಂವಿಧಾನಕ್ಕಿಂತ ದೊಡ್ಡವಳೇ? ಅಥವಾ #Toolkit ತಯಾರಿಸಿದದವರ ಬಗ್ಗೆ ನಿಮಗೆ ವಿಶೇಷ ಮಾಹಿತಿ ಇದೆಯೇ ಶ್ರೀ ಕುಮಾರಸ್ವಾಮಿಯವರೆ? ಎಂದು ಪ್ರಶ್ನಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.