ಬೆಂಗಳೂರು: ಶತ್ರುವಾದರೂ ರಾವಣನಿಗೆ ಯೋಗ್ಯ ರೀತಿಯಲ್ಲಿ ಅಂತ್ಯ ಸಂಸ್ಕಾರ ಆಗುವಂತೆ ರಾಮ ನೋಡಿಕೊಂಡ. ಆದರೆ, ಸಂವಿಧಾನ ಕೊಟ್ಟ ಮಹಾತ್ಮನಿಗೆ ಆರಡಿ ಮೂರಡಿ ಜಾಗವನ್ನೂ ಕಾಂಗ್ರೆಸ್ ಕೊಡಲಿಲ್ಲ. ಅಂಬೇಡ್ಕರ್ ಮಾತಾಡುತ್ತಿದ್ದ ವಾಸ್ತವಿಕ ಸತ್ಯ ಕಾಂಗ್ರೆಸ್ಗೆ ರುಚಿಸುತ್ತಿರಲಿಲ್ಲ. ಅದಕ್ಕೆ ಬದುಕಿದ್ದಾಗಲೂ ತೊಂದರೆ ಕೊಟ್ಟು ಸತ್ತ ಮೇಲೂ ಗೌರವ ಕೊಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಎಸ್ಸಿ ಮೋರ್ಛಾ ವತಿಯಿಂದ ಸೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಮೇರಾ ಬೂತ್ ಎಸ್ಸಿ ಬೂತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹೇಳಿದ್ದನ್ನು ಪೂರ್ಣ ಪ್ರಮಾಣದಲ್ಲಿ ಸಾಕಾರ ಮಾಡಲು ಮೋದಿ ಬರಬೇಕಾಯ್ತು. ಮೋದಿ ಬರುವವರೆಗೂ ಬಹಳಷ್ಟು ಬಡವರಿಗೆ ಬ್ಯಾಂಕ್ ಖಾತೆಯೇ ಇರಲಿಲ್ಲ. ರಾಮ ರಾವಣನಿಗೆ ಯೋಗ್ಯ ರೀತಿಯಲ್ಲಿ ಅಂತ್ಯ ಸಂಸ್ಕಾರ ಆಗುವಂತೆ ನೋಡಿಕೊಂಡ. ಆದರೆ, ಸಂವಿಧಾನ ಕೊಟ್ಟ ಮಹಾತ್ಮನಿಗೆ ಆರಡಿ ಮೂರಡಿ ಜಾಗ ಕೊಡಲಿಲ್ಲ.
ಆದರೆ, ಅವರ ಕುಟುಂಬಕ್ಕೆ ನೂರಾರು ಎಕರೆ ಜಾಗ ಇಟ್ಟುಕೊಂಡರು. ಲಂಡನ್ನಲ್ಲಿ ಅಂಬೇಡ್ಕರ್ ಮನೆಯನ್ನು ಸ್ಮಾರಕ ಮಾಡಿದ್ದು ಬಿಜೆಪಿ ಸರ್ಕಾರ. ಯಾವ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯುವುದಿಲ್ಲವೋ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಾರೆ. ಅಂಬೇಡ್ಕರ್ ಮಾತಾಡುತ್ತಿದ್ದ ವಾಸ್ತವಿಕ ಸತ್ಯ ಕಾಂಗ್ರೆಸ್ ಗೆ ರುಚಿಸುತ್ತಿರಲಿಲ್ಲ. ಅದಕ್ಕೆ ಬದುಕಿದ್ದಾಗ ತೊಂದರೆ ಕೊಟ್ಟು ಸತ್ತ ಮೇಲೂ ಗೌರವ ಕೊಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ದೇವೇಗೌಡರ ಪಕ್ಷದಲ್ಲಿ ನಾನು ಪಕ್ಷದ ಮಾಲೀಕ ಅಂದರೆ ನಿಮ್ಮನ್ನು ಫುಟ್ಬಾಲ್ ಒದ್ದಂಗೆ ಒದ್ದು ಬಿಸಾಕುತ್ತಾರೆ. ದೇವೇಗೌಡರ ನಂತರ ಯಾರು ಅಂದರೆ ಅಲ್ಲಿ ಸದ್ದಿಲ್ಲದೇ ಕುಮಾರಸ್ವಾಮಿಯನ್ನು ಮುಂದೆ ತಂದರು. ರೇವಣ್ಣನ ತರಲು ಪ್ರಯತ್ನ ಮಾಡಿದರು. ಆದರೆ, ನಿಂಬೆಹಣ್ಣು ಅಡ್ಡ ಬಂತು. ದೇವೇಗೌಡರ ನಂತರ ಪಕ್ಷದ ಮಾಲೀಕ ಯಾರು ಅಂತಾ ಆಗಬೇಕಾದರೆ ಒಂದೋ ರೇವಣ್ಣನ ಮಗ ಆಗಿರಬೇಕು ಅಥವಾ ಕುಮಾರಸ್ವಾಮಿ ಮಗ ಆಗಿರಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಮೇಶ್ವರ್ ಒಂದು ವರ್ಷ ಅವರು ಕಾಡಿ ಬೇಡಿ ಮಂತ್ರಿಯಾಗಬೇಕಾಯ್ತು. ಬಿಜೆಪಿಯಲ್ಲಿ ಮೋದಿ ನಂತರ ಯಾರು ಅಂದರೆ ಕಾರ್ಯಕರ್ತ ಎಂಬ ಉತ್ತರ ಇದೆ ಎಂದು ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.