ETV Bharat / state

'ಕೋವಿಡ್​​ನಿಂದ ಮೃತಪಟ್ಟವರ 100 ಕುಟುಂಬಗಳಿಗೆ ತಲಾ 1ಲಕ್ಷ ರೂ. ಪರಿಹಾರ' - bangalore

ಕೋವಿಡ್​​ನಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಕೆ.ಆರ್.​​ಪುರ ಕ್ಷೇತ್ರದಲ್ಲಿ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಘೋಷಿಸಿದ್ದಾರೆ.

Minister byrathi basavaraj
ಸಚಿವ ಬೈರತಿ ಬಸವರಾಜ್
author img

By

Published : Jun 21, 2021, 8:56 AM IST

ಕೆ.ಆರ್.​​ಪುರ/ಬೆಂಗಳೂರು: ಕೆ.ಆರ್.​​ಪುರ ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟ 100 ಕುಟುಂಬಗಳಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು.

ಸಚಿವ ಬೈರತಿ ಬಸವರಾಜ್

ಕೆ.ಆರ್.​​ಪುರ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಿ.ಎಂ‌.ರಾಮಚಂದ್ರ ಅವರ ಸ್ಮರಣಾರ್ಥ ತಾಲೂಕು ಆಸ್ಪತ್ರೆ ಆವರಣದಲ್ಲಿ ಶ್ರೀವಿಜಯ ಗಣಪತಿ ಡಯಾಲಿಸಿಸ್ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.

ಒಂದು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ದಿ.ರಾಮಚಂದ್ರ ಅವರ ಸ್ಮರಣಾರ್ಥ ಧರ್ಮಪತ್ನಿ ಸುಶೀಲ ದೇವಿ ಅವರು ರಾಜ್ಯದಲ್ಲಿಯೇ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ನಿರ್ಮಾಣ ಮಾಡಿಕೊಡುತ್ತಿರುವುದು ಸಂತಸದ ವಿಷಯ. ಸುಶೀಲ ದೇವಿ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜತೆಗೆ ಕೋವಿಡ್ ಹಿನ್ನೆಲೆಯಲ್ಲಿ ಕೇರಳ ಸಮಾಜಕ್ಕೆ ಉಚಿತವಾಗಿ ಆ್ಯಂಬುಲೆನ್ಸ್ ನೀಡಿದ್ದಾರೆ ಎಂದರು.

ಬಳಿಕ ಕುರುಬರ ಸಮಾಜದ‌ ಸಂಘದ ಸದಸ್ಯರಿಗೆ ದಿನಸಿ ವಿತರಣೆ, ಹಿರಿಯ ನಾಗರಿಕರಿಗೆ ಲಸಿಕೆ ಚಾಲನೆ, ಯುವ ಮೋರ್ಚಾ ಯಶಸ್ ರೆಡ್ಡಿ ಅವರ ವತಿಯಿಂದ ರಾಮಮೂರ್ತಿ ನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಮುಂದಿನ ಭಾನುವಾರ ಕೇಂದ್ರ ಸಚಿವ ಸದಾನಂದ ಗೌಡ, ಕಂದಾಯ ಸಚಿವ ಆರ್. ಅಶೋಕ್, ಸಚಿವ ಬಸವರಾಜ್ ಬೊಮ್ಮಾಯಿ ಭಾಗಿಯಾಗಿ ಕೆ.ಆರ್.​​ಪುರ ಕ್ಷೇತ್ರದಲ್ಲಿ ಕೋವಿಡ್​​ನಿಂದ ಮೃತ ಕುಟುಂಬಕ್ಕೆ ಸಹಾಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಜನರ ಆರ್ಥಿಕ ಪರಿಸ್ಥಿತಿ ಕೆಟ್ಟುಹೋಗಿದ್ದು, ಕೆಲಸವಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ತಜ್ಞರ ಸಲಹೆಯಂತೆ ಅನ್​​ಲಾಕ್ ಮಾಡಲಾಗುತ್ತಿದ್ದು, ಜನರು ಮೈಮರೆಯದೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸಚಿವ ಬೈರತಿ ಬಸವರಾಜ್ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.