ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಬುಲೆಟ್ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಬುಲೆಟ್ ಸವಾರರು ತಲೆಬಿಸಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ನಿದ್ದೆಗೆ ಜಾರುವುದನ್ನೇ ಕಾಯುವ ಕಳ್ಳರು, ಕ್ಷಣಮಾತ್ರದಲ್ಲಿ ಎಂಟ್ರಿ ಕೊಟ್ಟು ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿಯೊಬ್ಬರು ಮನೆಯ ಹೊರಗಡೆ ರಾಯಲ್ ಎನ್ ಫೀಲ್ಡ್ ಬೈಕ್ ನಿಲ್ಲಿಸಿದ್ರು. ಇದನ್ನ ಟಾರ್ಗೆಟ್ ಮಾಡಿ ಆ್ಯಕ್ಟಿವಾದಲ್ಲಿ ಬಂದ ಇಬ್ಬರು ಕಳ್ಳರು ರಾಯಲ್ ಎನ್ ಫೀಲ್ಡ್ ಬುಲೆಟ್ನ ಹ್ಯಾಂಡ್ ಲಾಕ್ ಮುರಿದು ಬೈಕ್ ಎಗರಿಸಿದ್ದಾರೆ.
ಸದ್ಯ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ಬಹಳಷ್ಟು ಕೃತ್ಯ ನಡೆದಿದ್ದು, ಬೈಕ್ ಕಳ್ಳರ ಶೋಧಕ್ಕೆ ಕೋರಮಂಗಲ ಪೊಲೀಸರು ತಂಡ ರಚಿಸಿ ತನಿಖೆ ಮುಂದುವರೆಸಿದ್ದಾರೆ.