ETV Bharat / state

ನಿಮ್ಮ ಕಷ್ಟ-ಸುಖ ಹಂಚಿಕೊಳ್ಳಲು ಅವಕಾಶ ನೀಡಿ: ಆರ್​.ಆರ್​. ನಗರ ಕೈ ಅಭ್ಯರ್ಥಿ ಕುಸುಮಾ

ಆರ್​.ಆರ್.​ ನಗರ ಉಪ ಚುನಾವಣೆ ಹಿನ್ನೆಲೆ ಭರ್ಜರಿ ಪ್ರಚಾರ ನಡೆಸಿದ ಕುಸುಮಾ, ಕ್ಷೇತ್ರದ ಜನರಲ್ಲಿ ನಿಮ್ಮ ಕಷ್ಟ-ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ.

Kusuma campaign, Kusuma campaign in RR Nagar, Kusuma campaign in RR Nagar at Bangalore, RR Nagar by poll, RR Nagar by poll 2020, RR Nagar by poll 2020 news, ಕುಸುಮಾ ಪ್ರಚಾರ, ಆರ್​ಆರ್​ ನಗರದಲ್ಲಿ ಕುಸುಮಾ ಪ್ರಚಾರ, ಬೆಂಗಳೂರಿನ ಆರ್​ಆರ್​ ನಗರದಲ್ಲಿ ಕುಸುಮಾ ಪ್ರಚಾರ, ಆರ್​ಆರ್​ ನಗರ ಉಪ ಚುನಾವಣೆ, ಆರ್​ಆರ್​ ನಗರ ಉಪ ಚುನಾವಣೆ 2020, ಆರ್​ಆರ್​ ನಗರ ಉಪ ಚುನಾವಣೆ 2020 ಸುದ್ದಿ,
ನಿಮ್ಮ ಕಷ್ಟ ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ
author img

By

Published : Oct 28, 2020, 6:50 AM IST

ಬೆಂಗಳೂರು: ಆರ್​.ಆರ್.​ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ ಕುಸುಮಾ, ನಿಮ್ಮ ಕಷ್ಟ-ಸುಖ ಹಂಚಿಕೊಳ್ಳಲು ನನಗೂ ಒಂದು ಅವಕಾಶ ಕೊಟ್ಟು ಆಶೀರ್ವಾದ ಮಾಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್. ಮನವಿ ಮಾಡಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಮಂಗಳವಾರ ಕ್ಷೇತ್ರದ ಹೆಚ್​ಎಂಟಿ ಬಡಾವಣೆ, ಯಶವಂತಪುರ ಬಡಾವಣೆ ಸೇರಿದಂತೆ ವಿವಿಧೆಡೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ಕುಸುಮಾ ಜತೆ ಪ್ರಚಾರ ನಡೆಸಿದರು.

ಪ್ರಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಕುಸುಮಾ, 'ನಾನು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಕ್ಷೇತ್ರದ ಕಡೆಯ ಪ್ರಜೆಗೂ ನ್ಯಾಯ ಒದಗಿಸಿಕೊಡಬೇಕು. ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಿಕೊಡುವ ಸಲುವಾಗಿ ಕೆಲಸ ಮಾಡಲು ನಿಮ್ಮ ಮನೆ ಮಗಳಾಗಿ ನಿಮ್ಮ ಮನೆ ಬಾಗಿಲ ಮುಂದೆ ಬಂದು ಮತಯಾಚಿಸುತ್ತಿದ್ದೇನೆ. ನನ್ನ ಆಸೆ ಈಡೇರಲು, ಕ್ಷೇತ್ರದ ಅಭಿವೃದ್ಧಿ ಆಗಲು ನಿಮ್ಮ ಸಹಕಾರ ಬೇಕು. ನಿಮ್ಮ ಸೇವೆ ಮಾಡಲು ದಯವಿಟ್ಟು ನನಗೆ ಒಂದು ಅವಕಾಶ ಮಾಡಿಕೊಡಿ ಎಂದರು.

ನಿಮ್ಮ ಕಷ್ಟ-ಸುಖ ಹಂಚಿಕೊಳ್ಳಲು, ನಿಮ್ಮ ಹೋರಾಟದಲ್ಲಿ ಕೈ ಜೋಡಿಸಲು, ಮಹಿಳೆಯರಿಗೆ ಧ್ವನಿಯಾಗಿ ನಿಲ್ಲಲು ಒಂದೇ ಒಂದು ಅವಕಾಶ ಕೇಳಿಕೊಂಡು ಬಂದಿದ್ದೀನಿ. ನಿಮ್ಮ ಮನೆ ಮಗಳಿಗೆ ನೀವು ಹೇಗೆ ಪ್ರೋತ್ಸಾಹ ನೀಡುತ್ತೀರೋ ಅದೇ ರೀತಿ ನನಗೂ ಪ್ರೋತ್ಸಾಹಿಸಿ, ಆಶೀರ್ವಾದ ಮಾಡಿ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇನೆ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಸ್ವಾಭಿಮಾನದ ಮತವನ್ನು ನನಗೆ ಕೊಡಿ ಎಂದು ಕೋರಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.