ETV Bharat / state

ಉಪ ಚುನಾವಣೆ ಮತ ಎಣಿಕೆ‌ ಹಿನ್ನೆಲೆ ಡಿಸಿಪಿಗಳಿಂದ ಭದ್ರತೆ ಪರಿಶೀಲನೆ - ಡಿಸಿಪಿಗಳಿಂದ ಭದ್ರತೆ ಪರಿಶೀಲನೆ

ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ. ಹೀಗಾಗಿ ಬೆಂಗಳೂರಿನ 4 ಕ್ಷೇತ್ರಗಳ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಆಯಾ ವಲಯದ ಡಿಸಿಪಿಗಳು ಭದ್ರತೆಯನ್ನು ಪರಿಶೀಲಿಸಿದ್ದಾರೆ.

Security Verification by DCP
ಉಪ ಚುನಾವಣೆ ಮತ ಎಣಿಕೆ‌ ಹಿನ್ನೆಲೆ: ಡಿಸಿಪಿಗಳಿಂದ ಭದ್ರತಾ ಪರಿಶೀಲನೆ
author img

By

Published : Dec 8, 2019, 4:21 PM IST

ಬೆಂಗಳೂರು: ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಹೀಗಾಗಿ ಬೆಂಗಳೂರಿನ 4 ಕ್ಷೇತ್ರಗಳಲ್ಲಿ ಮತ ಎಣಿಕೆ ‌ಕೇಂದ್ರದ ಸುತ್ತ ಆಯಾ ವಲಯದ ಡಿಸಿಪಿಗಳು ಭದ್ರತಾ ಪರಿಶೀಲನೆ ನಡೆಸಿದ್ದಾರೆ.

ಡಿಸಿಪಿಗಳಿಂದ ಭದ್ರತಾ ಪರಿಶೀಲನೆ

ಶಿವಾಜಿನಗರದ ಮೌಂಟ್ ಕಾರ್ಮೆಲ್, ಯಶವಂತಪುರದ ಕೆಂಗೇರಿಯ ಆರ್. ವಿ. ಕಾಲೇಜು, ಮಹಾಲಕ್ಷ್ಮಿ ಲೇಔಟ್ ಮತ್ತು ಕೆ ಆರ್ ​ಪುರದ ಸೈಂಟ್ ಜೋಸೆಫ್ ಕಾಲೇಜು, ಹೊಸಕೋಟೆಯ ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಇಂದು ಕ್ಷೇತ್ರಗಳ ಇವಿಎಂ ಇಟ್ಟಿರುವ ಸ್ಥಳಗಳಲ್ಲಿ ‌ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಭದ್ರತೆಯನ್ನ ಪರಿಶೀಲಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 1300 ಮಂದಿಯಿದ್ದು, ಒಂದೊಂದು ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 80 ಪೊಲೀಸ್ ಅಧಿಕಾರಿಗಳು, 600 ಪಿಎಸ್ ಐ, ಕಾನ್ಸ್​ಟೇಬಲ್, ಹೆಡ್​ಕಾನ್ಸ್​ಟೇಬಲ್ , ಪ್ಯಾರಾಮಿಲಿಟರಿ, ಕೆಎಸ್​ಆರ್​ಪಿ ತುಕಡಿಯನ್ನ ನಿಯೋಜಿಸಲಾಗಿದೆ. ಆಯಾ ಕ್ಷೇತ್ರಗಳಿಂದ ಬರುವ ಜನರ ವಾಹನಗಳ ಪಾರ್ಕಿಂಗ್​ಗೆ ಸ್ಥಳೀಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿಯಲ್ಲಿರುತ್ತೆ. ಹಾಗೆ ಪಾಸ್ ಹೊಂದಿರೊ ಏಜೆಂಟ್​ಗಳು ಮತ್ತು ಚುನಾವಣಾ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

Intro:ಉಪ ಚುನಾವಣೆ ಮತ ಎಣಿಕೆ‌ಹಿನ್ನೆಲೆ
ನಾಲ್ಕು ಕ್ಷೇತ್ರಗಳ ಭದ್ರತೆ ಪರಿಶೀಲಿಸಿದ ಆಯಾ ವಲಯದ ಡಿಸಿಪಿಗಳು

ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು ಹೀಗಾಗಿ ಇಂದೆ ನಾಲ್ಕು ಕ್ಷೇತ್ರದ ಆಯಾ ಮತ ಎಣಿಕೆ‌ ಕೇಂದ್ರ ಸುತ್ತಾ ಆಯಾ ವಲಯದ ಡಿಸಿಪಿಗಳು ಭದ್ರತ ಪರಿಶೀಲನೆ ನಡೆಸಿದ್ದಾರೆ.ಶಿವಾಜಿನಗರ ಕ್ಷೇತ್ರ;- ಮೌಂಟ್ ಕಾರ್ಮೆಲ್, ಯಶವಂತಪುರ ಕ್ಷೇತ್ರ;-ಕೆಂಗೇರಿಯ. ಆರ್ ವಿ.ಕಾಲೇಜು, ಮಹಾಲಕ್ಷ್ಮಿ ಲೇಔಟ್ ಮತ್ತು ಕೆ. ಆರ್ಪುರ ಕ್ಷೇತ್ರ;- ಸೇಂಟ್ ಜೋಸೆಫ್ ಕಾಲೇಜುಹೊಸಕೋಟೆ ಕ್ಷೇತ್ರ;- ದೇವನಹಳ್ಳೊತ ಆಕಾಶ್ ಇಂಟರ್ ನ್ಯಾಷನಲ್ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ

ಹೀಗಾಗಿ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಇಂದು ಕ್ಷೇತ್ರಗಳ ಇವಿಎಂ ಇಟ್ಟಿರುವ ಸ್ಥಳಗಳಲ್ಲಿ ಈಗಾಗ್ಲೇ ಜವಾಬ್ದಾರಿ ವಹಿಸಿರು ‌ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರು ಭದ್ರತೆಯನ್ನ ಪರಿಶೀಲನೆ ಮಾಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 1300 ಮಂದಿ ಇದ್ದು ಇದರಲ್ಲಿ ಒಂದೊದು ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಒಟ್ಟು ೮೦ ಪೊಲೀಸ್ ಅಧಿಕಾರಿಗಳು, ೬೦೦ ಪಿಎಸ್ ಐ, ಕಾನ್ಸ್ಟೇಬಲ್ ಹೆಡ್ ಕಾನ್ಸ್ಟೇಬಲ್ , ಪ್ಯಾರಾಮಿಲಿಟರಿ, ಕೆಎಸ್ ಆರ್ ಪಿ ತುಕಡಿಯನ್ನ ನಿಯೋಜನೆ ಮಾಡಿದ್ದು ಬೆಳಗ್ಗೆ 6 ಗಂಟೆಯಿಂದಲೇ ಪೊಲೀಸ್ರು ಕಾರ್ಯನಿರತರಾಗಿ ಕೆಲಸ ಮಾಡಲಿದ್ದಾರೆ. ಹಾಗೆ ಆಯಾ ಕ್ಷೇತ್ರಗಳಿಂದ ಬರುವ ಜನರ ವಾಹನಗಳ ಪಾರ್ಕಿಂಗ್ ಗೆ ಸ್ಥಳೀಯ ಪಾರ್ಕಿಂಗ್ ಮಾಡಲಾಗಿದ್ದು ಮತದಾನ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿಯಲ್ಲಿರುತ್ತೆ. ಹಾಗೆ ಪಾಸ್ ಹೊಂದಿರೊ ಏಜೆಂಟ್ ಗಳು ಮತ್ತು ಚುನಾವಣಾ ಸಿಬ್ಬಂದಿಗಳಿಗೆ ಮಾತ್ರ ಮತಗಟ್ಟೆ ಗೆಪ್ರವೇಶ ಕಲ್ಪಿಸಲಾಗಿದೆ. ಹಾಗೆ ಕೌಟಿಂಗ್ ನಡೆಯುವ ಸುತ್ತಾ ವಿಜಯೋತ್ಸವದ ಆಚರಿಸೋದು, ಪಟಾಕಿ ಸಿಡಿಸೋದು,
ತಮಟೆ ಬಾರಿಸೋದು, ಪಟಾಕಿ ಹೊಡೆಯೋದು ಮಾಡಿದ್ರೆ ಅಂತಾವರ ವಿರುದ್ಧ ವೀಡಿಯೊ ಚಿತ್ರೀಕರಣ ಮಾಡಿ ಕ್ರಮೈಗೊಳ್ಳದಕ್ಕೆ ಪೊಲೀಸರು ಮುಂದಾಗಿದ್ದಾರೆ

Body:KN_BNG_06_SEQURITY_7204498Conclusion:KN_BNG_06_SEQURITY_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.