ಬೆಂಗಳೂರು: ಶಿರಾ ಹಾಗೂ ಆರ್ ಆರ್ ನಗರ ಎರಡೂ ಕ್ಷೇತ್ರದಲ್ಲಿ ಉಪ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಿನ್ನಡೆ ಅನುಭವಿಸಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಗೆಲುವಿಗೆ ಇನ್ನೂ ಸಮಯ ಇದೆ. ಎಲ್ಲ ಸುತ್ತುಗಳ ಫಲಿತಾಂಶ ಬರಲಿ. ಏನಾಗುತ್ತೆ ಎಂಬುದನ್ನು ಕಾದು ನೋಡೋಣ ಎಂದಿದ್ದಾರೆ.
ಮತದಾರರು ತೀರ್ಪು ಕೊಟ್ಟಿದ್ದಾರೆ. ಸಂಪೂರ್ಣ ಫಲಿತಾಂಶ ಹೊರಬಂದಾಗ ಮಾತನಾಡುತ್ತೇನೆ ಎಂದರು. ಬಳಿಕ ಸದಾಶಿವನಗರ ಮನೆಯಿಂದ ಕಾಂಗ್ರೆಸ್ ಕಚೇರಿಯತ್ತ ಡಿಕೆಶಿ ತೆರಳಿದರು.