ಬೆಂಗಳೂರು: ಉಪಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 17ರಂದು ನಡೆಯುವ ಚುನಾವಣೆಗೆ ಅಭ್ಯರ್ಥಿಗಳು ಭಾರಿ ಪ್ರಮಾಣದಲ್ಲಿ ಪ್ರಚಾರ ಮಾಡಲು ತಯಾರಿ ನಡೆಸಿದ್ದಾರೆ. ಇದೇ ಸಮಯಕ್ಕೆ ಕೋವಿಡ್ ಎರಡನೇ ಅಲೆ ಕೂಡ ಎದ್ದಿದ್ದು, ಎಲ್ಲರ ನಿದ್ದೆಗೆಡಿಸಿದೆ. ಇನ್ನು ಪ್ರಚಾರ ಅಂದ್ರೆ ಅಲ್ಲಿ ಗುಂಪು ಗುಂಪುಗಳಲ್ಲಿ ಸೇರಿ ತಮ್ಮ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಕಾರ್ಯಕರ್ತರು ಓಡಾಡುತ್ತಾರೆ. ಹೀಗಾಗಿ ಬೈ ಎಲೆಕ್ಷನ್‌ಗಾಗಿ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಓದಿ:ರಾಜ್ಯದಲ್ಲಿ ಹೊಸದಾಗಿ ಎರಡೂವರೆ ಸಾವಿರ ಮಂದಿಯಲ್ಲಿ ಕೊರೊನಾ, 13 ಸಾವು
ಈ ಮಾರ್ಗ ಸೂಚಿಯಲ್ಲಿ ಜನರಲ್ ಗೈಡ್ ಲೈನ್ಸ್, ನಾಮಿನೇಷನ್ ಸಲ್ಲಿಸಬೇಕಾದ ಅಭ್ಯರ್ಥಿ ಪಾಲಿಸಬೇಕಾದ ನಿಯಮ ಮತ್ತು ಚುನಾವಣಾ ಪ್ರಚಾರ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನ ಆರೋಗ್ಯ ಇಲಾಖೆ ಸೂಚಿಸಿದೆ. ಇನ್ನು ಸಭೆ, ಸಮಾವೇಶದ ವೇಳೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡದೇ ಇದ್ದರೆ DM ಆ್ಯಕ್ಟ್ , ಸೆಕ್ಷನ್ 51 ರಿಂದ 60 ಅಡಿ ಕಠಿಣ ಕ್ರಮಕೈಗೊಳ್ಳಲಾಗತ್ತೆ ಎಂದು ಎಚ್ಚರಿಸಲಾಗಿದೆ.
ಜನರಲ್ ಗೈಡ್ ಲೈನ್ಸ್:
- ಚುನಾವಣಾ ಪ್ರಕ್ರಿಯೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಬೇಕು
- ಕನಿಷ್ಠ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
- ದೊಡ್ಡ ಕೊಠಡಿಗಳಲ್ಲಿ ಚುನಾವಣಾ ಸಿಬ್ಬಂದಿಗೆ ಟ್ರೈನಿಂಗ್ ಕೊಡಬೇಕು
- ಸಾಧ್ಯವಾದಷ್ಟು ಆನ್ಲೈನ್ ತರಬೇತಿ ನೀಡಬೇಕು
- ಚುನಾವಣಾ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿಗೆ ನಿಯೋಜಿಸಬೇಕು
ನಾಮಿನೇಷನ್ ಗೈಡ್ ಲೈನ್ಸ್:
- ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಆದ್ಯತೆ ನೀಡಬೇಕು
- ಬಳಿಕ ಪ್ರಿಂಟ್ ಔಟ್ ಚುನಾವಣಾಧಿಕಾರಿಗೆ ಸಲ್ಲಿಸಬಹುದು
- ನಾಮಿನೇಷನ್ ಸಲ್ಲಿಸಲು ಇಬ್ಬರಿಗೆ ಮಾತ್ರ ಅವಕಾಶ
- ನಾಮಪತ್ರ ಪರಿಶೀಲನೆ, ಚಿಹ್ನೆ ನೀಡುವ ಪ್ರಕ್ರಿಯೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
- ಚುನಾವಣಾ ಮತಗಟ್ಟೆಗಳನ್ನ ಹೆಚ್ಚಿಸುವುದು
- ಚುನಾವಣಾಧಿಕಾರಿ ಮತ್ತು ಸಿಬ್ಬಂದಿಗೆ ಗ್ಲೌಸ್, ಮಾಸ್ಕ್, ಫೇಸ್ ಶೀಲ್ಡ್ ಕೊಡಬೇಕು
ಚುನಾವಣಾ ಪ್ರಚಾರಕ್ಕೆ ಗೈಡ್ ಲೈನ್ಸ್:
- ಮನೆ ಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ 5 ಕ್ಕಿಂತ ಹೆಚ್ಚು ಮಂದಿ ಪ್ರಚಾರ ಮಾಡುವಂತಿಲ್ಲ
- ಚುನಾವಣಾ ರ‍್ಯಾಲಿಗಳಲ್ಲಿ ಕೇವಲ 5 ವಾಹನಕ್ಕೆ ಅವಕಾಶ
- ಬಹಿರಂಗ ಪ್ರಚಾರದ ವೇಳೆ ಕೊರೊನಾ ನಿಯಮ ಪಾಲಿಸಬೇಕು
- ಮುಚ್ಚಿದ ಪ್ರದೇಶದಲ್ಲಿನ ಪ್ರಚಾರ ಸಭೆಗೆ 200 ಜನರಿಗೆ ಮಾತ್ರ ಅವಕಾಶ