ETV Bharat / state

ಕೊರೊನಾ ವಾರಿಯರ್ಸ್​ಗೆ ಮಜ್ಜಿಗೆ ವಿತರಣೆ: ಮಹಿಳೆಗೆ ಧನ್ಯವಾದ ಹೇಳಿದ ಸಚಿವ ಸುರೇಶ್​ ಕುಮಾರ್​

ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಕಚೇರಿಗೆ ಹೋಗುವ ಸಂದರ್ಭ ಮಜ್ಜಿಗೆ ಪ್ಯಾಕೇಟ್ ವಿತರಿಸಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

sdd
ಪ್ರಚಾರದ ಗೀಳಿಲ್ಲದೆ ಕೊರೊನಾ ವಾರಿಯರ್ಸ್​ಗೆ ಮಜ್ಜಿಗೆ ವಿತರಣೆ
author img

By

Published : Apr 21, 2020, 2:43 PM IST

ಬೆಂಗಳೂರು: ಲಾಕ್​ಡೌನ್ ಎಫೆಕ್ಟ್​ನಿಂದಾಗಿ ವೈದ್ಯಕೀಯ ‌ಸಿಬ್ಬಂದಿ ಜೊತೆ ಜೊತೆಗೆ ಪೊಲೀಸ್ ಸಿಬ್ಬಂದಿಗೂ ಮಹಿಳೆಯೊಬ್ಬರು ಕಚೇರಿಗೆ ಹೋಗುವ ಸಂದರ್ಭ ಮಜ್ಜಿಗೆ ಪ್ಯಾಕೇಟ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಅಂಚೆ ಕಚೇರಿಯಲ್ಲಿ ಹಿರಿಯ ಖಾತೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉಮಾ ರಾಮಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಆಫೀಸ್​ಗೆ ಹೋಗುವ ದಾರಿಯಲ್ಲಿ ವಿಶೇಷವಾಗಿ ಪೊಲೀಸರಿಗೆ ತಮ್ಮ ಕೈಲಾದ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.‌

ಈ ಬಗ್ಗೆ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಮನೆಯಿಂದ ಬರುತ್ತಿದ್ದಾಗ ಮಾಗಡಿ ರಸ್ತೆ ಪೊಲೀಸ್ ಸ್ಟೇಷನ್ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದ ಪೊಲೀಸ್ ತಂಡ ಕಣ್ಣಿಗೆ ಬಿತ್ತು. ಈ ವೇಳೆ ಮಹಿಳೆಯೊಬ್ಬರು ಬಂದು ಹೀಗೆ ಮಜ್ಜಿಗೆ ವಿತರಿಸುತ್ತಿದ್ದಾರೆ.‌ ಈ ರೀತಿ ಯಾರ ಕಣ್ಣಿಗೂ ಬೀಳದೆ, ಯಾವ ಪ್ರಚಾರವನ್ನೂ ಬಯಸದೆ ತಮ್ಮ ಮನದಾಳದ ಬಯಕೆಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತವರಿಗೆ ನಮ್ಮ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.