ಬೆಂಗಳೂರು : ಯುಗಾದಿ ಹಬ್ಬದ ಪ್ರಯುಕ್ತ ಉದ್ಯಮಿಯೊಬ್ಬರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು 10 ಲಕ್ಷ ರೂ. ಮೌಲ್ಯದ ಡೈಮಂಡ್ ಕಳ್ಳತನ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ಬೆಳಕಿಗೆ ಬಂದಿದೆ.
ಉದ್ಯಮಿಯಾಗಿರುವ ರಂಜಿತಾ ಮೆಟ್ರಾನಿ ಎಂಬುವರು ಯುಗಾದಿ ಹಬ್ಬದ ಹಿನ್ನೆಲೆ ತಮಿಳುನಾಡಿನ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅವರು ಹಬ್ಬ ಮುಗಿಸಿಕೊಂಡು ನಿನ್ನೆ ಸಂಜೆ ಕೋರಮಂಗಲದಲ್ಲಿರುವ 3ನೇ ಬ್ಲಾಕ್ನಲ್ಲಿರುವ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಮನೆಯ ಗ್ರೀಲ್ ಹಾಗೂ ಬೀಗ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಸದ್ಯ ಕೋರಮಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: 10 ದಿನದ ವಿಕಲಚೇತನ ಶಿಶುವನ್ನ ಪ್ಲಾಸ್ಟಿಕ್ ಕವರ್ನಲ್ಲಿರಿಸಿ ಬಿಟ್ಟೋದ ನಿರ್ದಯಿ ಪೋಷಕರು