ETV Bharat / state

ಉದ್ಯಮಿ, ನಿರ್ಮಾಪಕ ಕಪಾಲಿ ಮೋಹನ್ ಆತ್ಮಹತ್ಯೆ: ಸ್ಥಳಕ್ಕೆ ಡಿಸಿಪಿ ದೌಡು

author img

By

Published : Mar 23, 2020, 1:14 PM IST

Updated : Mar 23, 2020, 1:45 PM IST

ಅನೇಕ ಕನ್ನಡ ಚಿತ್ರಗಳಿಗೆ ಫಿನಾನ್ಸ್ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್​ ಅವರು ಆತ್ಮಹತ್ಯಗೆ ಶರಣಾಗಿದ್ದು, ಆರ್ಥಿಕ ಸಮಸ್ಯೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

Businessman Kapali Mohan commits suicide at Bangalore
ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ

ಬೆಂಗಳೂರು : ಹಲವು ಕನ್ನಡ ಚಿತ್ರಗಳಿಗೆ ಫಿನಾನ್ಸ್ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್​ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಶಶಿಕುಮಾರ್ ಹಾಗೂ ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವರು ಅಣ್ಣಾವ್ರ ಕುಟುಂಬದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಸಿನಿಮಾ ನಿರ್ಮಾಪಕ, ವಿತರಕ, ಧಾರವಾಹಿ ನಿರ್ಮಾಪಕ ಹಾಗೂ ಹೋಟೆಲ್ ಉದ್ಯಮಿಯೂ ಆಗಿದ್ದರು.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ನಗದಲ್ಲಿ ವಾಸವಾಗಿದ್ದಾರೆ. ಕಳೆದೊಂದು ವರ್ಷದ ಹಿಂದೆ ಹೈದ್ರಾಬಾದ್​​ನಿಂದ ವಿಮಾನದಲ್ಲಿ ಕೆಲವರನ್ನು ಕರೆಸಿಕೊಂಡು ಜೂಟಾಟ ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸದಾಶಿವನಗರದ‌ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

Last Updated : Mar 23, 2020, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.