ಬೆಂಗಳೂರು : ಪ್ರಸ್ತುತ ಕರ್ನಾಟಕ ಸಾರಿಗೆ ನಿಗಮ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ಸುಗಳ ದರವನ್ನ ಇಳಿಸಿದೆ. ಕೊರೊನಾದಿಂದ ಲಾಕ್‌ಡೌನ್ ಇದ್ದ ಕಾರಣದಿಂದಾಗಿ ಪ್ರಯಾಣಿಕರು ಬಸ್ಸುಗಳಲ್ಲಿ ಸಂಚರಿಸುವುದನ್ನೇ ಕಡಿಮೆ ಮಾಡಿದ್ದರು. ಅದ್ರಲ್ಲೂ ಪ್ರಿಮಿಯಂ ಬಸ್ಸುಗಳ ಓಡಾಟವಂತೂ ನಿಂತು ನಿಂತು ತುಕ್ಕು ಹಿಡಿಯುವ ಪರಿಸ್ಥಿತಿಗೆ ಬಂದಿತ್ತು. ಇನ್ನು ಲಾಕ್‌ಡೌನ್ ಸಡಿಲ ಆಗಿದ್ದರಿಂದ ಬಸ್ಸುಗಳ ಸಂಚಾರವೂ ಕೂಡ ಆರಂಭವಾಗಿದೆ.
ಇನ್ನೇನು ಇದೀಗ ಮದುವೆ ಸೀಸನ್, ಬೇಸಿಗೆ ರಜೆಗಳಲ್ಲಿ ಪ್ರಯಾಣ ಮತ್ತು ಇನ್ನಿತರ ಪ್ರವಾಸ ಕಾರಣಗಳಿಗಾಗಿ ಪ್ರಯಾಣಿಕರು ಪ್ರವಾಸ ಕೈಗೊಳ್ಳುತ್ತಾರೆ. ಹೀಗಾಗಿ ಪ್ರಿಮಿಯಂ ಬಸ್ ಹಾಗೂ ಎಲ್ಲಾ ವರ್ಗದ ಬಸ್ಗಳನ್ನ ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆಯುವ ವಾಹನಗಳ ಮೇಲಿನ ದರಗಳನ್ನ ಇಳಿಕೆ ಮಾಡಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಇದೇ ತಿಂಗಳು 06 ರಿಂದಲೇ ಬಸ್ಗಳ ದರಗಳನ್ನ ಇಳಿಸಿದೆ. ಪ್ರೀಮಿಯಂ ಬಸ್ಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗ ಪಡೆದುಕೊಳ್ಳಲು ಪ್ರಯಾಣಿಕರನ್ನ ಉತ್ತೇಜಿಸುವ ಸಲುವಾಗಿ ದರ ಇಳಿಕೆ ಮಾಡುವ ನಿರ್ಧಾರ ಮಾಡಿದೆ.
- ಐರಾವತ ಕ್ಲಬ್ ಕ್ಲಾಸ್ (ಬಿಎಸ್ - 3) ಪ್ರತಿ ಕಿ.ಮೀ ಗೆ 5-7ರೂ ವರೆಗೆ ಇಳಿಕೆ ಮಾಡಿದೆ ಮತ್ತು ಕನಿಷ್ಠ 500 ರಿಂದ 400 ಕಿ.ಮಿ ನಿಗದಿಪಡಿಸಲಾಗಿದೆ.
- ಐರಾವತ ಕ್ಲಬ್ ಕ್ಲಾಸ್ (ಬಿಎಸ್ - 4) ಪ್ರತಿ ಕಿ.ಮೀ ಗೆ 5-10ರೂ ವರೆಗೆ ಇಳಿಕೆ ಮಾಡಲಾಗಿದೆ.
- ಐರಾವತ ಕ್ಲಬ್ ಕ್ಲಾಸ್ 51 ಆಸನಗಳಿರುವ ಬಸ್‌ನ ದರವನ್ನ ಕಿ.ಮಿಗೆ 10ರೂ ಇಳಿಕೆ ಮಾಡಿದೆ.
- 32 ಆಸನಗಳಿರುವ ಎಸಿ ಸ್ಲೀಪರ್ ಬಸ್‌ನ ದರವನ್ನ ಕಿ.ಮೀ ಗೆ 5-6ರೂ ಕಡಿಮೆ ಮಾಡಿದೆ.
- 40 ಆಸನಗಳ ಫ್ಲೈ ಬಸ್‌ನ ದರವನ್ನ ಕಿ.ಮೀ ಗೆ 10-16ರೂ ಇಳಿಕೆ ಮಾಡಿದೆ.