ETV Bharat / state

ಮೋದಿ ಆತ್ಮೀಯರೊಬ್ಬರು ಗಂಟೆಗೆ 53 ಕೋಟಿ ರೂ. ದುಡಿಯುತ್ತಿದ್ದಾರೆ: ಹೆಚ್​ಡಿಕೆ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು ಹೆಚ್​ಡಿಕೆ ಪ್ರತಿಕ್ರಿಯೆ

ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ನಿಷ್ಕ್ರಿಯವಾಗಿದೆ. ಅದೊಂದು ಭ್ರಷ್ಟಕೂಪ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ
author img

By

Published : Jul 3, 2022, 10:20 PM IST

ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ಗಳು, ಅರಮನೆಯಂಥ ಬಂಗಲೆಗಳ ಮೇಲೆ ಬುಲ್ಡೋಜರ್‌ಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ನಿಷ್ಕ್ರಿಯವಾಗಿದೆ. ಅದೊಂದು ಭ್ರಷ್ಟಕೂಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಒಂದರಲ್ಲೇ ಸುಮಾರು 30 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಂಡರೆ ಲಕ್ಷಾಂತರ ಬಡವರಿಗೆ ಮನೆ ಕಟ್ಟಿಕೊಡಬಹುದು. ಅಂಥ ಕೆಲಸವನ್ನು ಬಿಡಿಎ ಮಾಡುತ್ತಿಲ್ಲ. ನನಗೊಂದು ಅವಕಾಶ ಕೊಟ್ಟು ನೋಡಿ. ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸುತ್ತೇನೆ ಎಂದು ಹೆಚ್​ಡಿಕೆ ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿ ಆಗುತ್ತಿಲ್ಲ. ಶ್ರೀಮಂತರು ವಾಸ ಮಾಡುವ ಪ್ರದೇಶಗಳಿಗೆ ಎಲ್ಲ ಅನುಕೂಲಗಳಿದ್ದರೆ, ಬಡವರ ಬಡಾವಣೆಗಳಿಗೆ ಕೊನೆಪಕ್ಷ ರಸ್ತೆಗಳಿಗೆ ಡಾಂಬರು ಇಲ್ಲ, ವಿದ್ಯುತ್‌ ದೀಪಗಳಿಲ್ಲ. ಯಲಹಂಕ ವಿಧಾನಸಭೆ ಕ್ಷೇತ್ರದ ಬೆಟ್ಟಹಳ್ಳಿ ಗ್ರಾಮಕ್ಕೆ ಹೋದರೆ ರಾಜ್ಯ ಸರ್ಕಾರದ ನಿಜವಾದ ಅಭಿವೃದ್ಧಿ ಕಣ್ಣಿಗೆ ಕಾಣುತ್ತದೆ ಎಂದು ಹರಿಹಾಯ್ದರು.

ಮಾಜಿ ಸಚಿವ ಕಟ್ಟಾ ವಿರುದ್ಧ ವಾಗ್ದಾಳಿ: ಕಟ್ಟಾ ಅವರು ಹೆಣ್ಣುಮಕ್ಕಳಿಗೆ ಅರಿಶಿಣ-ಕುಂಕುಮ ಕೊಡುತ್ತೇನೆ, ಲಲಿತಾ ಸಹಸ್ರನಾಮ ಕಾರ್ಯಕ್ರಮ ಏರ್ಪಡಿಸುತ್ತೇನೆ ಎಂದು ಈಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರ ಬದುಕು ಹಸನಾಗುತ್ತದೆಯೇ? ಅಲ್ಲೆಲ್ಲ ದೊಡ್ಡದಾಗಿ ಮಹಿಳೆಯರನ್ನು ಸೇರಿಸಿ ಪೂಜೆ-ಪುನಸ್ಕಾರ ಅಂತ ಹೇಳಿ ಮಂಕುಬೂದಿ ಎರಚಿ, ಗೆದ್ದುಹೋಗಿ ಸಚಿವರಾಗುತ್ತಾರೆ. ಆಮೇಲೆ ಸರ್ಕಾರಿ ಭೂಮಿಯನ್ನು ಲಪಟಾಯಿಸಿ ಬಳಿಕ ಜಾಮೀನಿಗಾಗಿ ಕೋರ್ಟು ಕಚೇರಿ ಅಂತ ಅಲೆಯುತ್ತಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇವತ್ತು ಅನೇಕ ರಾಜಕಾರಣಿಗಳು, ಸಾರ್ವಜನಿಕ ಹಾಗೂ ಬಡಬಗ್ಗರ ಭೂಮಿಯನ್ನು ಕೊಳ್ಳೆ ಹೊಡೆದು ನೂರಾರು ಕೋಟಿ ಮಾಡಿದ್ದಾರೆ. ಅದೇ ಪಾಪದ ಹಣದಿಂದ ಫುಡ್ ಕಿಟ್‌, ಸಣ್ಣ-ಪುಟ್ಟ ಪ್ರಮಾಣದ ಭಕ್ಷೀಸು ನೀಡಿ ಚುನಾವಣೆ ಗೆಲ್ಲುತ್ತಿದ್ದಾರೆ. ಇಂಥ ಆಮಿಷಗಳಿಗೆ ಜನರು ಮಾರುಹೋಗಬಾರದು. ಹಣ ಪಡೆದು ಸಭೆ -ಸಮಾರಂಭಗಳಿಗೆ ಹೋಗಬಾರದು ಎಂದು ಕರೆ ನೀಡಿದರು.

ಮೋದಿ ಆತ್ಮೀಯರೊಬ್ಬರು ಗಂಟೆಗೆ 53 ಕೋಟಿ ದುಡಿಯುತ್ತಿದ್ದಾರಂತೆ: ಬೆಂಗಳೂರಿನಲ್ಲಿ ಬಡವರ ಬಂಧು ಕಾರ್ಯಕ್ರಮದ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ನೆರವಾದೆ. 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಇದೆಲ್ಲವನ್ನೂ ಫಲಾನುಭವಿಗಳ ಹೆಸರಿನ ಸಮೇತ ದಾಖಲೆ ಕೊಡಬಲ್ಲೆ, ನರೇಂದ್ರ ಮೋದಿ ಅವರಂತೆ ನಾನು ಬರೀ ಭಾಷಣ ಮಾಡಲ್ಲ. ಮೋದಿ ಹಿಂದೆ ಸುತ್ತುವ ಆತ್ಮೀಯರೊಬ್ಬರು ಗಂಟೆಗೆ 53 ಕೋಟಿ ದುಡಿಯುತ್ತಿದ್ದಾರಂತೆ. ಅದು ಹೇಗೆ? ಯಾವ ರೀತಿ?. ಇಂಥವರನ್ನು ತೋರಿಸಿ ಭಾರತ ಉದ್ಧಾರವಾಗಿದೆ ಎಂದು ಜಗತ್ತಿಗೆ ತೋರಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ. ಎ ಶರವಣ ಮಾತನಾಡಿದರು. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮೊಯಿದ್ದೀನ್‌ ಅಲ್ತಾಫ್‌, ದಾಸರಹಳ್ಳಿ ಶಾಸಕ ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಹೆಚ್. ಎಂ ರಮೇಶ್‌ ಗೌಡ ಸೇರಿದಂತೆ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಜನತಾಮಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮೊದಲು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಡೆದ ಜನತಾಮಿತ್ರ ಜಾಥ ಮತ್ತು ಬಹಿರಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಶಾಸಕ ಮಂಜುನಾಥ್ ಪಾಲ್ಗೊಂಡಿದ್ದರು.

ಓದಿ: ಪಿಎಂಒ ಹೆಸರಲ್ಲಿ ಚಾಮರಾಜನಗರ ಡಿಸಿಗೆ ಕರೆ.. ಬಿಳಿಗಿರಿರಂಗನಾಥ ದೇವಾಲಯಕ್ಕೆ ಬಂದಾಗ ವಿಶೇಷ ಸೌಲಭ್ಯಕ್ಕೆ ಬೇಡಿಕೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.