ಬೆಂಗಳೂರು: ಮದವೇರಿದ ಗೂಳಿಯ ತಿವಿತದಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರಪಾಳ್ಯದಲ್ಲಿ ನಡೆದಿದೆ.
ಘಟನೆಯಲ್ಲಿ ಗುರಪ್ಪಾ, ಸೆಲ್ವಕುಮಾರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದಲೂ ಅನ್ನಸಂದ್ರಪಾಳ್ಯದಲ್ಲಿ ಬೆದರಿಸಿದ ಸ್ಥಿತಿಯಲ್ಲಿ ಗೂಳಿ ಓಡಾಡುತ್ತಿತ್ತು. ಹಲವು ಅಂಗಡಿ ಮುಂಗಟ್ಟು ಹಾಗೂ ವಾಹನಗಳನ್ನು ಜಖಂಗೊಳಿಸಿತ್ತು. ಈ ವೇಳೆ ಅಂಗಡಿಯೊಂದರ ಬಳಿ ಕುಳಿತಿದ್ದ ಗುರಪ್ಪ ಹಾಗೂ ಸೆಲ್ವಕುಮಾರ್ ಅವರಿಗೆ ಕೊಂಬಿನಿಂದ ತಿವಿದು ಗಾಯಗೊಳಿಸಿದೆ.