ಬೆಂಗಳೂರು: 2023-24 ಬಜೆಟ್ ವರ್ಷದ ಅರ್ಧ ವರ್ಷ ಕಳೆದಿದೆ. ಹೊಸ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದಿದ್ದು, ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. ಆರ್ಥಿಕ ವರ್ಷದ ಆರು ತಿಂಗಳಲ್ಲಿ ರಾಜ್ಯದ ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿಯ ಸ್ಥಿತಿಗತಿ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ತಿಂಗಳು ಆಗಿದ್ದು, ರಾಜ್ಯಭಾರ ನಡೆಸುತ್ತಿದೆ. ಹೊಸ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳೊಂದಿಗೆ ಹೊಸ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿ ಕೇಂದ್ರೀಕೃತ ಬಜೆಟ್ ಮಂಡನೆ ಮಾಡಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ವರ್ಷದ ಆರು ತಿಂಗಳುಗಳನ್ನು ಕ್ರಮಿಸಿದೆ. ತನ್ನ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಹುವಾಗಿ ಪಂಚ ಗ್ಯಾರಂಟಿಗಳಿಗೆ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿಗಳ ಜಾರಿಗಾಗಿ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಯ ಬೃಹತ್ ಹೊರೆಯ ಮಧ್ಯೆ ಬರದ ಬರೆಯನ್ನೂ ಎದುರಿಸಬೇಕಾಗಿದೆ. ಪಂಚ ಗ್ಯಾರಂಟಿ, ಬರದ ಮಧ್ಯೆ ಅಭಿವೃದ್ಧಿ ಕಾಯ್ದುಕೊಳ್ಳುವುದರೊಂದಿಗೆ ಸಮತೋಲಿತ ಬಜೆಟ್ ಅನುಷ್ಠಾನ ಮಾಡುವ ಸವಾಲು ಸಿದ್ದರಾಮಯ್ಯ ಸರ್ಕಾರದ ಮೇಲಿದೆ. ಈಗಾಗಾಲೇ ಬಜೆಟ್ ವರ್ಷದ ಆರು ತಿಂಗಳು ಕಳೆದಿದೆ. ಆರು ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ ಅನುಷ್ಠಾನದ ಇಲಾಖಾವಾರು ಆರ್ಥಿಕ ಪ್ರಗತಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳೋಣ ಬನ್ನಿ...
ಅರ್ಧ ಬಜೆಟ್ ವರ್ಷದಲ್ಲಿ ಶೇ.31.43 ಪ್ರಗತಿ: ಕೆಡಿಪಿ ಪ್ರಗತಿ ಅಂಕಿ - ಅಂಶದ ಪ್ರಕಾರ, 2023-24 ಬಜೆಟ್ ವರ್ಷದ ಆರು ತಿಂಗಳಲ್ಲಿ ಇಲಾಖಾವಾರು ಒಟ್ಟು 31.43% ಆರ್ಥಿಕ ಪ್ರಗತಿ ಕಂಡಿದೆ. ಈ ಬಾರಿ ಎಲ್ಲಾ ಇಲಾಖೆಗಳಿಗೆ ಒಟ್ಟು 2,96,853.63 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಸೆಪ್ಟೆಂಬರ್ ವರೆಗೆ ಒಟ್ಟು 1,11,854.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಸೆಪ್ಟೆಂಬರ್ ವರೆಗೆ ಒಟ್ಟು 93,304.81 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಟ್ಟು ಹಂಚಿಕೆ ಎದುರು ಶೇ 31.43ರಷ್ಟು ಪ್ರಗತಿ ಕಾಣಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಇಲಾಖಾವಾರು ಆರ್ಥಿಕ ಪ್ರಗತಿ ಉತ್ತಮವಾಗಿದೆ. ಕಳೆದ ಬಾರಿ ಈ ಅವಧಿಗೆ ಶೇ 27ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿತ್ತು.
ಶೇ. 20ಕ್ಕಿಂತಲೂ ಕಡಿಮೆ ಆರ್ಥಿಕ ಪ್ರಗತಿ ಕಂಡ ಇಲಾಖೆಗಳು: ಮೂಲಭೂತ ಸೌಕರ್ಯ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಯುವ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ. 20ಕ್ಕಿಂತಲೂ ಕಡಿಮೆ ಆರ್ಥಿಕ ಪ್ರಗತಿ ಕಂಡಿದೆ.
ಮೂಲಸೌಕರ್ಯ ಹಾಗೂ ಒಳನಾಡು ಜಲ ಸಾರಿಗೆ ಇಲಾಖೆಗೆ 1,048.47 ಕೋಟಿ ರೂ. ಹಂಚಿಕೆಯಾಗಿದ್ದರೆ, ಬಿಡುಗಡೆಯಾಗಿದ್ದು 306 ಕೋಟಿ ರೂ. ಇನ್ನು 70 ಕೋಟಿ ರೂ. ವೆಚ್ಚವಾಗಿದ್ದು, ಕೇವಲ 6.68% ಪ್ರಗತಿ ಕಂಡಿದೆ. ಇತ್ತ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 2,101 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲಾಖೆಯಡಿ 198 ಕೋಟಿ ರೂ. ವೆಚ್ಚವಾಗಿದ್ದು, ಈವರೆಗೆ ಕೇವಲ 9.41% ಪ್ರಗತಿ ಕಂಡಿದೆ.
ಸಾರಿಗೆ ಇಲಾಖೆಗೆ 4,962 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಸೆಪ್ಟೆಂಬರ್ ವರೆಗೆ 1,183 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 488 ಕೋಟಿ ರೂ. ವೆಚ್ಚವಾಗಿದೆ. ಈವರೆಗೆ 9.84% ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ. ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,165 ಕೋಟಿ ರೂ. ಹಂಚಿಕೆಯಾಗಿದೆ. ಈ ಪೈಕಿ 4,595 ಕೋಟಿ ರೂ. ಬಿಡುಗಡೆಯಾಗಿದೆ. 3,449 ಕೋಟಿ ರೂ. ವೆಚ್ಚವಾಗಿದ್ದು, 14.27% ಪ್ರಗತಿ ಸಾಧಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 3,050 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ 893.30 ಕೋಟಿ ರೂ. ಬಿಡುಗಡೆ ಮಾಡಿದ್ದು, 573.80 ಕೋಟಿ ರೂ. ವೆಚ್ಚವಾಗಿದೆ. ಆ ಮೂಲಕ 18.81% ಪ್ರಗತಿ ಕಂಡಿದೆ. ಇನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 10,459 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ 2,705 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 2,045 ಕೋಟಿ ರೂ. ವೆಚ್ಚವಾಗಿದ್ದು, 19% ಪ್ರಗತಿ ಕಂಡಿದೆ.
ತೋಟಗಾರಿಕೆ ಇಲಾಖೆ:
ಅನುದಾನ ಹಂಚಿಕೆ- 1,195 ಕೋಟಿ ರೂ.
ಬಿಡುಗಡೆ- 367 ಕೋಟಿ ರೂ.
ವೆಚ್ಚ- 261 ಕೋಟಿ ರೂ.
ಪ್ರಗತಿ- 21.84%
ಸಹಕಾರ ಇಲಾಖೆ:
ಅನುದಾನ ಹಂಚಿಕೆ- 2,276 ಕೋಟಿ
ಬಿಡುಗಡೆ- 850.66 ಕೋಟಿ
ವೆಚ್ಚ- 509 ಕೋಟಿ ರೂ.
ಪ್ರಗತಿ- 22%
ಕೃಷಿ ಇಲಾಖೆ:
ಅನುದಾನ ಹಂಚಿಕೆ- 4,120 ಕೋಟಿ
ಬಿಡುಗಡೆ- 1,651 ಕೋಟಿ
ವೆಚ್ಚ- 1,016 ಕೋಟಿ
ಪ್ರಗತಿ- 25%
ಗ್ರಾಮೀಣಾಭಿವೃದ್ಧಿ ಇಲಾಖೆ:
ಅನುದಾನ ಹಂಚಿಕೆ- 24,078 ಕೋಟಿ
ಬಿಡುಗಡೆ- 3,266 ಕೋಟಿ
ವೆಚ್ಚ- 6,289 ಕೋಟಿ
ಪ್ರಗತಿ- 26%
ವಸತಿ ಇಲಾಖೆ:
ಅನುದಾನ ಹಂಚಿಕೆ- 5,850 ಕೋಟಿ
ಬಿಡುಗಡೆ- 397 ಕೋಟಿ
ವೆಚ್ಚ- 1,543 ಕೋಟಿ
ಪ್ರಗತಿ-26.38%
ಜಲಸಂಪನ್ಮೂಲ ಇಲಾಖೆ:
ಅನುದಾನ ಹಂಚಿಕೆ- 18,013 ಕೋಟಿ
ಬಿಡುಗಡೆ- 4,507 ಕೋಟಿ
ವೆಚ್ಚ- 4,817 ಕೋಟಿ
ಪ್ರಗತಿ- 27%
ಲೋಕೋಪಯೋಗಿ ಇಲಾಖೆ:
ಅನುದಾನ ಹಂಚಿಕೆ- 9,645 ಕೋಟಿ
ಬಿಡುಗಡೆ- 3,174 ಕೋಟಿ
ವೆಚ್ಚ- 2,617 ಕೋಟಿ
ಪ್ರಗತಿ- 27%
ಇಂಧನ ಇಲಾಖೆ:
ಅನುದಾನ ಹಂಚಿಕೆ- 22772 ಕೋಟಿ
ಬಿಡುಗಡೆ- 7709 ಕೋಟಿ
ವೆಚ್ಚ- 7,700 ಕೋಟಿ
ಪ್ರಗತಿ-34%
ಸಣ್ಣ ನೀರಾವರಿ ಇಲಾಖೆ:
ಅನುದಾನ ಹಂಚಿಕೆ- 2,332 ಕೋಟಿ
ಬಿಡುಗಡೆ- 914 ಕೋಟಿ
ವೆಚ್ಚ- 800 ಕೋಟಿ
ಪ್ರಗತಿ- 34.30%
ಆರೋಗ್ಯ ಇಲಾಖೆ:
ಅನುದಾನ ಹಂಚಿಕೆ- 11,337 ಕೋಟಿ
ಬಿಡುಗಡೆ- 4,184 ಕೋಟಿ
ವೆಚ್ಚ- 4,007 ಕೋಟಿ
ಪ್ರಗತಿ-35%
ಶಿಕ್ಷಣ ಇಲಾಖೆ:
ಅನುದಾನ ಹಂಚಿಕೆ- 32,374 ಕೋಟಿ
ಬಿಡುಗಡೆ- 16,460 ಕೋಟಿ
ವೆಚ್ಚ- 12,570 ಕೋಟಿ
ಪ್ರಗತಿ-39%
ಸಮಾಜ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 4,433 ಕೋಟಿ
ಬಿಡುಗಡೆ- 2,419 ಕೋಟಿ
ವೆಚ್ಚ-1,893 ಕೋಟಿ
ಪ್ರಗತಿ- 43%
ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆಗೆ ರಾಜ್ಯದ ಹಣ ಬಳಕೆ ಆರೋಪ ಸುಳ್ಳು: ಅವರು ನೋಡಿದ್ದಾರಾ ಸಿಎಂ ಪ್ರಶ್ನೆ