ETV Bharat / state

ಜುಲೈ 5ರ ಕೇಂದ್ರ ಬಜೆಟ್​ಗೆ ಕೌಂಟ್‌ಡೌನ್.. ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಗರಿಗೆದರಿದ ನಿರೀಕ್ಷೆ.. - undefined

ಕೇಂದ್ರ ಸರ್ಕಾರವು ಜುಲೈ 5ರಂದು ಮಂಡಿಸಲಿರುವ ಬಜೆಟ್​ನಲ್ಲಿ ರೈಲ್ವೆ ಕಾಮಗಾರಿಗಳು ಸೇರಿದಂತೆ ಅನೇಕ ಯೋಜನೆಗಳ ನಿರೀಕ್ಷೆಯನ್ನು ಮತದಾರರು ಎದುರು ನೋಡುತ್ತಿದ್ದಾರೆ. ರಾಜ್ಯ ಸಚಿವರಾಗಿರುವ ಸುರೇಶ ಅಂಗಡಿ ಅವರಲ್ಲಿ ಈಗಾಗಲೇ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ಜು.5ರ ಕೇಂದ್ರದ ಬಜೆಟ್​ನಲ್ಲಿ ರೈಲ್ವೆ ಬಜೆಟ್​​ಗೆ ಸಾರ್ವಜನಿಕರಿಂದ ಹೆಚ್ಚಿದ ನಿರೀಕ್ಷೆ
author img

By

Published : Jun 30, 2019, 9:00 PM IST

ಬೆಂಗಳೂರು: ಎರಡನೇ ಬಾರಿ ಕೇಂದ್ರದ ಗದ್ದುಗೆ ಏರಿರುವ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಈ ವರ್ಷದ ಮೊದಲ ಬಜೆಟ್​ಗೆ ಸಿದ್ಧತೆಗೆ ಸನ್ನದ್ಧವಾಗುತ್ತಿದೆ. ಸಾಮಾನ್ಯ ಬಜೆಟ್ ಬಗ್ಗೆ ಸಾರ್ವಜನಿಕರಲ್ಲಿ ಇನ್ನಿಲ್ಲದ ನಿರೀಕ್ಷೆ ಮೂಡಿದೆ.‌ ಇದರಲ್ಲಿ ರೈಲ್ವೆ ಬಜೆಟ್ ಒಳಗೊಂಡಿದ್ದು ರೈಲ್ವೆ ಪ್ರಾಜೆಕ್ಟ್​ಗಳ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವ ಸುರೇಶ್ ಅಂಗಡಿ ಅವರ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಜುಲೈ 5ರ ಕೇಂದ್ರದ ಬಜೆಟ್​ನಲ್ಲಿ ರೈಲ್ವೆ ಬಜೆಟ್​​ಗೆ ಸಾರ್ವಜನಿಕರಿಂದ ಹೆಚ್ಚಿದ ನಿರೀಕ್ಷೆ..

ರೈಲ್ವೆ ಕಾಮಗಾರಿಗಳು, ಹೊಸ ರೈಲು ಮಾರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂಬುದು ಕನ್ನಡಿಗರ ಅಹವಾಲಾಗಿದೆ. ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಚಿವರು ಗ್ರೌಂಡು ರಿಪೋರ್ಟ್ ಕೂಡಾ ಪಡೆದಿದ್ದಾರೆ ಎನ್ನಲಾಗುತ್ತದೆ.

ಲೋಕಲ್ ರೈಲ್ವೆ, ಸಬ್ ಅರ್ಬನ್ ರೈಲುಗಳ ಅವಶ್ಯಕತೆ ಹೆಚ್ಚಿದ್ದು, ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್​​ಗೆ ಸಬ್ ಅರ್ಬನ್ ರೈಲುಗಳ ಅವಶ್ಯಕತೆ ಇದೆ. ಶೇ. 25ರಷ್ಟು ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎನ್ನಲಾಗುತ್ತಿದೆ.

ಪ್ರಯಾಣದ ಅವಧಿ, ದ್ವಿಚಕ್ರವಾಹನಗಳ ಪರದಾಟ ತಪ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಕಾಂಕ್ರೀಟ್ ರಹಿತ ಮೇಲ್ಸೇತುವೆಗಳ ಕೆಳಗೆ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಹಿಂಜರಿಯುತ್ತಿದ್ದಾರೆ. ತ್ಯಾಜ್ಯ ಸೇರಿದಂತೆ ಕಲುಷಿತ ನೀರು ಚಲಿಸುವ ರೈಲಿನಿಂದ ಕೆಳಗೆ ಬೀಳುತ್ತಿದ್ದು, ಕೃತಕ ಟ್ರಾಫಿಕ್ ಜಾಮ್ ಕೂಡಾ ಉಂಟಾಗುತ್ತಿದೆ. ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ ಇನ್ನಷ್ಟು ವೃದ್ಧಿಯಾಗಬೇಕು. ಬೋಗಿಗಳಲ್ಲಿ ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆ ಬರಬೇಕು. ನೀರಿನ ಸೌಕರ್ಯ ಸೇರಿದಂತೆ ಸಾರ್ವಜನಿಕರಿಂದ ಅನೇಕ ಬೇಡಿಕೆಗಳ ಪಟ್ಟಿಯೇ ಸಿದ್ದವಾಗಿದೆ.

ಕೇಂದ್ರದ ಜತೆ ರಾಜ್ಯ ಸರ್ಕಾರವೂ ನೆನೆಗುದಿಗೆ ಬಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೈಜೋಡಿಸಿದರೆ ಎಲ್ಲವೂ ಸಾಧ್ಯವಿದೆ ಎಂಬುದು ಮತದಾರರ ಆಶಯ.

Intro:ಬಜೆಟ್ ಗೆ ಕೌಂಟ್ ಡೌನ್; ಕರ್ನಾಟಕದ ರೈಲ್ವೆ ಪ್ರಾಜೆಕ್ಟ್ ಗಳ ಬಗ್ಗೆ ಗರಿಗೆದರಿದ ನಿರೀಕ್ಷೆ..

ಬೆಂಗಳೂರು: ಮೋದಿ ಸರ್ಕಾರದ ಸಾಮಾನ್ಯ ಬಜೆಟ್ ಬಗ್ಗೆ ಜನಸಾಮಾನ್ಯರಲ್ಲಿ ಇನ್ನಿಲ್ಲದ ನಿರೀಕ್ಷೆ ಮೂಡಿದೆ..‌ ಸಾಮಾನ್ಯ ಬಜೆಟ್ ನಲ್ಲೇ ರೈಲ್ವೆ ಬಜೆಟ್ ಒಳಗೊಂಡಿರುವುದರಿಂದ ಹೆಚ್ಚುವರಿ ಯಾಗಿ ರೈಲ್ವೆ ಪ್ರಾಜೆಕ್ಟ್ ಗಳ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.. ಅದರಲ್ಲೂ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವ ಸುರೇಶ್ ಅಂಗಡಿ ಅವರ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ..

ರಾಜ್ಯದ ಬಗ್ಗೆ ರಾಜ್ಯದಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಹೊಸ ರೈಲು ಮಾರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಈಗಾಗಲೇ ಕನ್ನಡಿಗರು ಅದಕ್ಕೆ ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಗ್ರೌಂಡು ರಿಪೋರ್ಟ್ ಪಡೆದಿದ್ದಾರೆ.. ಆದರೆ ಕರ್ನಾಟಕದಲ್ಲಿ ಹೊಸ ರೈಲುಗಳ ಅವಶ್ಯಕತೆಗಿಂತ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳು ಮತ್ತು ಈ ಹಿಂದಿನ ಬಜೆಟ್ನಲ್ಲಿ ಘೋಷಣೆಯಾಗಿರುವ ಕಾಮಗಾರಿಗಳು ಪೂರ್ಣಗೊಂಡರೆ ಸಾಕು ಎನ್ನುವ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ..

ಅಂದಹಾಗೇ, ಈ ಬಾರಿಯ ಬಜೆಟ್ ನಲ್ಲಿ ಹೆಚ್ಚು ನಿರೀಕ್ಷೆ ಇರುವುದು ಲೋಕಲ್ ಟ್ರೈನ್ಸ್ ಮತ್ತು ಸಬ್ ಅರ್ಬನ್ ರೈಲುಗಳ ಅವಶ್ಯಕತೆ.. ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಗೆ ಸಬ್ ಅರ್ಬನ್ ರೈಲುಗಳ ಅವಶ್ಯಕತೆ ಇದ್ದು, ಶೇಕಡ 25 ರಷ್ಟು ಟ್ರಾಫಿಕ್ ಕಿರಿ ಕಿರಿ ತಪ್ಪಲಿದೆ ಅಂತಾರೆ ..

ರಾಜ್ಯದ ಜನತೆ ರೈಲ್ವೆ ಬಗ್ಗೆ ಬಹುಮುಖ್ಯವಾಗಿ ರೈಲ್ವೆ ಟ್ರಾಫಿಕ್ ಕಡಿಮೆ ಆಗಬೇಕು ಅಂತ ಹೇಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.. ಇದರಿಂದಾಗಿ ಪ್ರಯಾಣದ ಅವಧಿ ಕಡಿಮೆಯಾಗುತ್ತೆ ಎಂದು ನಿರೀಕ್ಷಿಸಲಾಗಿದೆ ಇದರ ಜೊತೆಗೆ ದ್ವಿಚಕ್ರವಾಹನದ ಪರದಾಟ ತಪ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.. ಹಲವೆಡೆ ಕಾಂಕ್ರೀಟ್ ರಹಿತ ಮೇಲ್ಸೇತುವೆಗಳ ಕೆಳಗೆ ಸಂಚರಿಸುವಾಗ ಪ್ರಯಾಣಿಕರು ದ್ವಿಚಕ್ರವಾಹನ ಸವಾರರ ಮೇಲೆ ತ್ಯಾಜ್ಯ ನೀರು ಬೀಳುತ್ತಿದೆ.. ಇದರಿಂದಾಗಿ ಕೃತಕ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ..‌

ಇದರ ಜೊತೆಗೆ ಸ್ವಚ್ಛತೆಯ ಗುಣಮಟ್ಟ ಇನ್ನಷ್ಟು ವೃದ್ಧಿಯಾಗಬೇಕು.. ಬೋಗಿಗಳಲ್ಲಿ ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆ ಬರಬೇಕು.. ನೀರಿನ ವ್ಯವಸ್ಥೆಗಳನ್ನುಯಥೇಚ್ಛವಾಗಿ ನೀಡಬೇಕು.. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ 24ಗಂಟೆಗಳ ತುರ್ತು ತುರ್ತುಚಿಕಿತ್ಸಾ ವ್ಯವಸ್ಥೆಯನ್ನು ನೀಡಬೇಕು ಇತ್ಯಾದಿಗಳು ಸಾರ್ವಜನಿಕರ ಮತ್ತು ಪ್ರಯಾಣಿಕರ ಬಹುಮುಖ್ಯ ಬೇಡಿಕೆ ಆಗಿವೆ..

ಸಾರ್ವಜನಿಕ ವಲಯದಲ್ಲಿ ಬಹು ಮುಖ್ಯವಾಗಿ ಕೇಳಿಬರುವ ಹೊಸ ಯೋಜನೆಗಳಿಗಿಂತ ಈಗಾಗಲೇ ಘೋಷಣೆಯಾಗಿರುವ ಯೋಜನೆಗಳು ಪೂರ್ಣವಾಗ ಬೇಕೆಂಬ ಒತ್ತಡ.. ಆದರೆ ಕೇವಲ ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಮಾತ್ರವಲ್ಲ ಜೊತೆಗೆ ರಾಜ್ಯ ಸರ್ಕಾರ ಕೂಡ ಎಲ್ಲಾ ರೀತಿ ನೆರವು ನೀಡಬೇಕು..‌ ಹಾಗಿದ್ದರೆ ಮಾತ್ರ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯ..

KN_BNG_01_RAILWAY_BUDGET_SCRIPT_7201801

BYTE; ನೈರೆನ್ ಕುಮಾರ್- ರೈಲ್ವೇ ಪ್ರಯಾಣಿಕರು

Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.