ETV Bharat / state

ಪರಿಷತ್​ನಲ್ಲಿ ಕಾಂಗ್ರೆಸ್​ ಧರಣಿ, ಜೆಡಿಎಸ್ ಸಭಾತ್ಯಾಗದ ನಡುವೆ ಧನವಿನಿಯೋಗ ವಿಧೇಯಕಕ್ಕೆ ಅಂಗೀಕಾರ - ವಿಧಾನ ಪರಿಷತ್​ನಲ್ಲಿ ಬಜೆಟ್ ಅಂಗೀಕಾರ

ವಿಧಾನ ಪರಿಷತ್ ವಿತ್ತೀಯ ಕಾರ್ಯ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಧನವಿನಿಯೋಗ ವಿಧೇಯಕ ಮಂಡಿಸಿದರು. ಪ್ರತಿಪಕ್ಷ ಕಾಂಗ್ರೆಸ್ ಧರಣಿ,‌ ಜೆಡಿಎಸ್ ಸಭಾತ್ಯಾಗದ ನಡುವೆ ವಿಧಾನ ಪರಿಷತ್​ನಲ್ಲಿ ಧನ ವಿನಿಯೋಗ ಮಸೂದೆಗೆ ಅಂಗೀಕಾರ ದೊರೆತಿದೆ..

ವಿಧಾನ ಪರಿಷತ್​ನಲ್ಲಿ ಧನವಿನಿಯೋಗ ವಿಧೇಯಕ ಅಂಗೀಕಾರ

author img

By

Published : Mar 24, 2021, 2:44 PM IST

Updated : Mar 24, 2021, 3:03 PM IST

ಬೆಂಗಳೂರು : ಪ್ರಸಕ್ತ ಸಾಲಿನ ಆರ್ಥಿಕ ಮುಂಗಡದ ಧನವಿನಿಯೋಗ ವಿಧೇಯಕಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಧರಣಿ,‌ ಜೆಡಿಎಸ್ ಸಭಾತ್ಯಾಗದ ನಡುವೆ ವಿಧಾನ ಪರಿಷತ್​ನಲ್ಲಿ ಅಂಗೀಕಾರ ದೊರೆತಿದೆ.

ವಿಧಾನ ಪರಿಷತ್​ನಲ್ಲಿ ಬಜೆಟ್ ಅಂಗೀಕಾರ

ವಿಧಾನ ಪರಿಷತ್ ವಿತ್ತೀಯ ಕಾರ್ಯ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಧನವಿನಿಯೋಗ ವಿಧೇಯಕ ಮಂಡಿಸಿದರು.

ವಿಧೇಯಕದ‌ ಮೇಲೆ ಮಾತನಾಡಿದ ಸಿಎಂ, ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ಸದಸ್ಯರು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಪಕ್ಷ ಸದಸ್ಯರು ಬಾವಿಯಲ್ಲಿರುವಾಗ ಹೆಚ್ಚಿನ ಮಾಹಿತಿ ನೀಡಲು ಹೋಗಲ್ಲ ಎಂದು ಬಜೆಟ್‌ನ ಭಾಷಣದ ಪ್ರತಿ ಮಂಡಿಸಿದರು. ನಂತರ ಧ್ವನಿಮತದ ಮೂಲಕ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಸಾರ್ವಜನಿಕ ಸಂಘಗಳ ಪಾರದರ್ಶನ ತಿದ್ದುಪಡಿ ವಿಧೇಯಕ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ ಅಂಗೀಕಾರ ನೀಡಿತು.

ಕರ್ನಾಟಕ ಸೊಸೈಟಿಗಳ ನೋಂದಾವಣಿ ವಿಧೇಯಕ, ಕರ್ನಾಟಕ ಜಲಸಾರಿಗೆ ಮಂಡಳಿ ವಿಧೇಯಕಕ್ಕೆ ಧ್ವನಿಮತದ ಮೂಲಕ ಪರಿಷತ್ ಅಂಗೀಕಾರ ನೀಡಿದರು. ವಿತ್ತೀಯ ಕಲಾಪದ ನಂತರ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ಇದನ್ನೂ ಓದಿ: ಸಚಿವ ಡಾ.ಕೆ. ಸುಧಾಕರ್ ಹೇಳಿಕೆಗೆ ಪರ - ವಿರೋಧ ಪ್ರತಿಕ್ರಿಯೆ; ನಾಯಕರುಗಳು ಹೇಳಿದ್ದೇನು?

ಜೆಡಿಎಸ್ ಸಭಾತ್ಯಾಗ : ಸದನದಲ್ಲಿ ಕಾಂಗ್ರೆಸ್ ಧರಣಿ ಹಾಗೂ ಬಿಜೆಪಿಯ ನಿಲುವಿಗೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಆಕ್ಷೇಪಿಸಿದರು. ‌ಶಿಕ್ಷಕರ ಸಮಸ್ಯೆ ಸೇರಿ‌ ಜ್ವಲಂತ ಸಮಸ್ಯೆ ಚರ್ಚೆಗೆ ಅವಕಾಶ ಇಲ್ಲದಂತಾಗಿದೆ. ಬಜೆಟ್​ ಮೇಲೂ ಮಾತನಾಡಲಾಗಿಲ್ಲ.

‌ಕಾಂಗ್ರೆಸ್ ಧರಣಿ, ಆಡಳಿತ ಪಕ್ಷದ ಧೋರಣೆ ಖಂಡಿಸಿ ಸಭಾತ್ಯಾಗ ಮಾಡುವ ಘೋಷಣೆ ಮಾಡಿ ಸದನದಿಂದ ಹೊರ ನಡೆದರು. ಜೆಡಿಎಸ್​ನ ಎಲ್ಲ ಸದಸ್ಯರು ಸಭಾತ್ಯಾಗ ಮಾಡಿದರು.

Last Updated : Mar 24, 2021, 3:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.