ETV Bharat / state

ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಒಪ್ಪತ್ತಿನ ಉಪವಾಸಕ್ಕೆ ಮುಂದಾದ ಬಿಎಸ್​ವೈ: ಕಾರ್ಯಕರ್ತರಿಗೂ ಕರೆ ...!

ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೀಡಿರುವ ಕರೆಯಂತೆ ಒಂದು ದಿನ ಒಪ್ಪತ್ತಿನ ಉಪವಾಸ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಕಾರ್ಯಕರ್ತರೆಲ್ಲರೂ ಒಪ್ಪೊತ್ತಿನ ಊಟ ತ್ಯಜಿಸುವಂತೆ ಕರೆ ನೀಡಿದ್ದಾರೆ.

BSY Tweet F
ನಡ್ಡಾ ಕರೆಯಂತೆ ಒಪ್ಪತ್ತಿನ ಉಪವಾಸಕ್ಕೆ ಮುಂದಾದ ಬಿಎಸ್​ವೈ
author img

By

Published : Apr 6, 2020, 1:24 PM IST

ಬೆಂಗಳೂರು: ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೀಡಿರುವ ಕರೆಯಂತೆ ಒಂದು ದಿನ ಒಪ್ಪತ್ತಿನ ಉಪವಾಸ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಕಾರ್ಯಕರ್ತರೆಲ್ಲರೂ ಒಪ್ಪೊತ್ತಿನ ಊಟ ತ್ಯಜಿಸುವಂತೆ ಕರೆ ನೀಡಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನಾಚರಣೆ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್ , ಪೊಲೀಸರು, ಆಶಾ ಕಾರ್ಯಕರ್ತೆಯರು, ಸರ್ಕಾರಿ‌ ನೌಕರರು, ಮಾಧ್ಯಮದವರು ಹಗಲಿರುಳು ದುಡಿಯುತ್ತಿದ್ದಾರೆ, ಅವರಿಗೆ ಒಪ್ಪತ್ತಿನ ಉಪವಾಸದ ಮೂಲಕ ಗೌರವ ಸೂಚಿಸಿ ಬೆಂಬಲ ನೀಡುವಂತೆ ಕಾರ್ಯಕರ್ತರಿಗೆ ಜೆ.ಪಿ ನಡ್ಡಾ ಕರೆ ನೀಡಿದ್ದಾರೆ. ಅದರಂತೆ ನಾನು ಇಂದು ಉಪವಾಸ ಮಾಡುತ್ತಿದ್ದೇನೆ ಕಾರ್ಯಕರ್ತರು ಕೂಡ ಒಪ್ಪತ್ತಿನ ಉಪವಾಸ ಮಾಡಬೇಕೆಂದು ವೀಡಿಯೋ ಸಂದೇಶದ ಮೂಲಕ ಸಿಎಂ ಕರೆ ನೀಡಿದ್ದಾರೆ.

ನಡ್ಡಾ ಕರೆಯಂತೆ ಒಪ್ಪತ್ತಿನ ಉಪವಾಸಕ್ಕೆ ಮುಂದಾದ ಬಿಎಸ್​ವೈ

ಸಿಎಂ ಟ್ವೀಟ್ :

ಪ್ರಜಾಸತ್ತಾತ್ಮಕ ಭಾರತದ ನಿಜವಾದ ವಕ್ತಾರನಾದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಪಕ್ಷದ ಸಮಸ್ತ ಕಾರ್ಯಕರ್ತರಿಗೆ ಶುಭಾಶಯಗಳು. ಕೊರೊನ ಮಹಾಮಾರಿಯ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿಸೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ‌.

  • ಪ್ರಜಾಸತ್ತಾತ್ಮಕ ಭಾರತದ ನಿಜವಾದ ವಕ್ತಾರನಾದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಪಕ್ಷದ ಸಮಸ್ತ ಕಾರ್ಯಕರ್ತರಿಗೆ ಶುಭಾಶಯಗಳು.#ಕೊರೊನ ಮಹಾಮಾರಿಯ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿಸೋಣ.#BjpFoundationDay #bjp4india

    — B.S. Yediyurappa (@BSYBJP) April 6, 2020 " class="align-text-top noRightClick twitterSection" data=" ">

ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಟ್ವೀಟ್ ಮೂಲಕ ಪಕ್ಷದ ಸಂಸ್ಥಾಪನಾ ದಿನದ ಶುಭ ಕೋರಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾತಾಂತ್ರಿಕ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನವಾದ ಇಂದು ಎಲ್ಲ ಕಾರ್ಯಕರ್ತರಿಗೂ ಹಾಗೂ ಬೆಂಬಲಿಗರಿಗೂ ಹೃತ್ಪೂರ್ವಕ ಶುಭಾಶಯಗಳು. ಈ ದಿನ ಪಕ್ಷಕ್ಕಾಗಿ ಹಗಲಿರುಳು ದುಡಿದ ಮಹನೀಯರನ್ನು ನೆನೆಯುತ್ತ ಭಾರತ ಮಾತೆಯ ಅವಿರತ ಸೇವೆಗೆ ಮತ್ತೊಮ್ಮೆ ಸಂಕಲ್ಪ ಮಾಡೋಣ ಎಂದು ಕರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.