ಬೆಂಗಳೂರು : ಸುಮಾರು 10 ದಿನಗಳಿಂದ ಅದಮ್ಯ ಚೇತನ ಸಂಸ್ಥೆ ರಾಜ್ಯ ಸರ್ಕಾರದ ಜೊತೆಗೂಡಿ ಕೈಗೊಂಡಿರುವ ದಾಸೋಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ. ಈ ಬಗ್ಗೆ ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಅದಮ್ಯ ಚೇತನ ಹಲವು ವರ್ಷಗಳಿಂದ ಸಮಾಜಕ್ಕೆ ಮಹತ್ತರ ಸೇವೆ ಮಾಡುತ್ತಿದೆ. ಹಸಿದವರಿಗೆ ಆಹಾರ ನೀಡುವ ತನ್ನ ಸೇವೆಯನ್ನು ಲಾಕ್‌ಡೌನ್ ವೇಳೆಯೂ ಮುಂದುವರೆಸಿದೆ. ಈ ರೀತಿಯ ಎನ್‌ಜಿಒಗಳು, ಸರ್ಕಾರದೊಂದಿಗೆ ಕೈಜೋಡಿಸುವುದರಿಂದ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವವರನ್ನು ತಲುಪುವುದು ಸುಲಭ ಎಂದು ಪತ್ರ ಬರೆದಿದ್ದಾರೆ.