ETV Bharat / state

ಹೋರಾಟದ ಬದುಕು, ಏಳುಬೀಳಿನ ರಾಜಕೀಯ... ಬಿಎಸ್​ವೈ ಬದುಕಿನ ಸಂಪೂರ್ಣ ಚಿತ್ರಣ

ಹೋರಾಟದ ಮೂಲಕವೇ ರಾಜಕೀಯದ ಬದುಕು ಕಟ್ಟಿಕೊಂಡಿರುವ ಯಡಿಯೂರಪ್ಪ ಎಂಟು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ನಂತರ ಪರಪ್ಪನ ಅಗ್ರಹಾರದ ವಾಸವನ್ನೂ ಅನುಭವಿಸಿ ಬಂದಿದ್ದು, ಇದೀಗ ಫೀನಿಕ್ಸ್​​ನಂತೆ ಅಧಿಕಾರದ ಗದ್ದುಗೆ ಏರಲು ಅವಕಾಶ ಪಡೆದಿದ್ದಾರೆ.

ಬಿಎಸ್​ವೈ
author img

By

Published : Jul 26, 2019, 10:23 AM IST

Updated : Jul 26, 2019, 1:25 PM IST

ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಹೋರಾಟಗಾರ, ಐದು ದಶಕದ ರಾಜಕೀಯ ಅನುಭವ ಹೊಂದಿರುವ ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಹೋರಾಟದ ಮೂಲಕವೇ ರಾಜಕೀಯದ ಬದುಕು ಕಟ್ಟಿಕೊಂಡಿರುವ ಯಡಿಯೂರಪ್ಪ ಎಂಟು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ನಂತರ ಪರಪ್ಪನ ಅಗ್ರಹಾರದ ವಾಸವನ್ನೂ ಅನುಭವಿಸಿ ಬಂದಿದ್ದು, ಇದೀಗ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಅಧಿಕಾರದ ಗದ್ದುಗೆಗೇರಲು ಅವಕಾಶ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಜೀವನ:

1943 ಫೆ.27ರಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ದಂಪತಿ ಪುತ್ರನಾಗಿ ಯಡಿಯೂರಪ್ಪ ಜನಿಸಿದರು. ಪ್ರಥಮ ದರ್ಜೆ ಗುಮಾಸ್ತ ವೃತ್ತಿಗೆ ರಾಜೀನಾಮೆ ನೀಡಿ ಶಿಕಾರಿಪುರಕ್ಕೆ ತೆರಳಿ ವೀರಭದ್ರಶಾಸ್ತ್ರಿಯವರ ಶಂಕರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದರು. 1967ರಲ್ಲಿ ಮೈತ್ರಾದೇವಿ ಜೊತೆ ವಿವಾಹವಾದರು. ಬಿ.ವೈ.ವಿಜಯೇಂದ್ರ, ವಿ.ವೈ.ರಾಘವೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿ ಯಡಿಯೂರಪ್ಪ ಅವರ ಮಕ್ಕಳಾಗಿದ್ದು, 2004ರಲ್ಲಿ ಮೈತ್ರಾದೇವಿ ನಿಧನರಾಗಿದ್ದಾರೆ.

ಪಕ್ಷದ ಜವಾಬ್ದಾರಿ:

  • 1970: ಆರ್.ಎಸ್.ಎಸ್. ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ನೇಮಕ
  • 1970: ಜನ ಸಂಘದ ತಾಲೂಕು ಅಧ್ಯಕ್ಷ
  • 1980: ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ
  • 1985: ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ
  • 1988: ಬಿಜೆಪಿ ರಾಜ್ಯಾಧ್ಯಕ್ಷ
  • 1993: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
  • 1999: ಬಿಜೆಪಿ ರಾಜ್ಯಾಧ್ಯಕ್ಷ
  • 2016: ಬಿಜೆಪಿ ರಾಜ್ಯಾಧ್ಯಕ್ಷ

ಜನಪ್ರತಿನಿಧಿಯಾಗಿ ಜವಾಬ್ದಾರಿ:

  • 1975: ಶಿಕಾರಿಪುರ ಪುರಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ
  • 1983: ಮೊದಲ ಬಾರಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಗೆಲುವು
  • 1983-1994: ಸತತ ನಾಲ್ಕು ಬಾರಿ ಶಿಕಾರಿಪುರ ಶಾಸಕರಾಗಿ ಆಯ್ಕೆ
  • 1994: ವಿಧಾನಸಭೆ ಪ್ರತಿಪಕ್ಷ ನಾಯಕ
  • 1999: ಮೊದಲ ಬಾರಿ ಶಿಕಾರಿಪುರದಲ್ಲಿ ಸೋಲು
  • 2000: ವಿಧಾನ ಪರಿಷತ್ ಸದಸ್ಯ
  • 2004: ಶಿಕಾರಿಪುರದಿಂದ ಐದನೇ ಬಾರಿ ಆಯ್ಕೆ, ಪ್ರತಿಪಕ್ಷ ನಾಯಕನ ಜವಾಬ್ದಾರಿ
  • 2004-2018: ನಾಲ್ಕು ಬಾರಿ ಶಿಕಾರಿಪುರ ಶಾಸಕರಾಗಿ ಆಯ್ಕೆ
  • 2006: ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಹಣಕಾಸು ಖಾತೆ ನಿರ್ವಹಣೆ
  • 2007: ನವೆಂಬರ್ 12ರಿಂದ 17ರರೆಗೆ 7 ದಿನದ ಅವಧಿಗೆ ಮುಖ್ಯಮಂತ್ರಿ
  • 2008: ಮೇ 30ರಂದು 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
  • 2011: ಜುಲೈ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ
  • 2014: ಶಿವಮೊಗ್ಗ ಲೋಕಸಭಾ ಸದಸ್ಯರಾಗಿ ಆಯ್ಕೆ
  • 2018: ಶಿಕಾರಿಪುರ ಶಾಸಕರಾಗಿ ಎಂಟನೇ ಬಾರಿ ಆಯ್ಕೆ, ಮೇ 17ರಂದು 29ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
  • 2018: ಮೇ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ, ಪ್ರತಿಪಕ್ಷ ನಾಯಕರಾಗಿ ನೇಮಕ

ರಾಜಕೀಯ ಡೋಲಾಯಮಾನ:

ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಪಕ್ಷದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಗೆ ಅಸಮಾಧಾನಗೊಂಡಿದ್ದ ಯಡಿಯೂರಪ್ಪ, 2011ರ ನವೆಂಬರ್ 30ರಂದು ಶಾಸಕ ಸ್ಥಾನ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದರು. 2011ರಲ್ಲಿ ಕೆಜೆಪಿ ಪಕ್ಷ ಸ್ಥಾಪಣೆ ಘೋಷಿಸಿದರು. ಪದ್ಮನಾಭ ಪ್ರಸನ್ನಕುಮಾರ್ ನೋಂದಾಯಿಸಿದ್ದ ಪಕ್ಷವನ್ನೇ ತೆಕ್ಕೆಗೆ ಪಡೆದು 2012ರಲ್ಲಿ ಕೆಜೆಪಿಗೆ ಅಧಿಕೃತ ಚಾಲನೆ ನೀಡಿದರು. 2013ರ ಮೇನಲ್ಲಿ ಕೆಜೆಪಿಯಿಂದ ಶಿಕಾರಿಪುರದಲ್ಲಿ ಸ್ಪರ್ಧಿಸಿ ಗೆಲುವು ಕಂಡು ಆಡಳಿತಾರೂಢ ಬಿಜೆಪಿ 40 ಸ್ಥಾನಕ್ಕೆ ಕುಸಿಯುವಂತೆ ಮಾಡಿದ್ದರು.

ನಂತರ ಬಿಜೆಪಿ ವರಿಷ್ಠರ ಮನವೊಲಿಕೆ ಪರಿಣಾಮ 2013ರಲ್ಲಿ ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಹಿಂದಿರುಗುವುದಾಗಿ ಬಿಎಸ್​ವೈ ಪ್ರಕಟಿಸಿದರು. 2014ರ ಜನವರಿ 2ರಂದು ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಳಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಮತ್ತೆ ರಾಜಕೀಯ ಮುನ್ನೆಲೆಗೆ ಬಂದರು.

ಪ್ರಸಕ್ತ ವಿಧಾನಸಭೆಯಲ್ಲಿಯೇ ಮೂರು ದಿನದ ಮುಖ್ಯಮಂತ್ರಿ ಆಗಿ ಅಧಿಕಾರದಿಂದ ಕೆಳಗಿಳಿದಿದ್ದ ಬಿಎಸ್​ವೈ ಇದೀಗ 14 ತಿಂಗಳ ನಂತರ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆ ಮೂಲಕ ಮತ್ತೊಮ್ಮೆ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಕಮಲ ಅರಳಿಸುತ್ತಿದ್ದಾರೆ.

Intro:Body:

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನ ನಾನು!

ಹೋರಾಟದ ಮೂಲಕವೇ ರಾಜಕೀಯದ ಬದುಕು ಕಟ್ಟಿಕೊಂಡಿರುವ ಯಡಿಯೂರಪ್ಪ ಎಂಟು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ನಂತರ ಪರಪ್ಪನ ಅಗ್ರಹಾರದ ವಾಸವನ್ನೂ ಅನುಭವಿಸಿ ಬಂದಿದ್ದು, ಇದೀಗ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಅಧಿಕಾರದ ಗದ್ದುಗೆಗೇರಲು ಅವಕಾಶ ಪಡೆದಿದ್ದಾರೆ.

ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಹೋರಾಟಗಾರ, ಐದು ದಶಕದ ರಾಜಕೀಯ ಅನುಭವ ಹೊಂದಿರುವ ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಹೋರಾಟದ ಮೂಲಕವೇ ರಾಜಕೀಯದ ಬದುಕು ಕಟ್ಟಿಕೊಂಡಿರುವ ಯಡಿಯೂರಪ್ಪ ಎಂಟು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ನಂತರ ಪರಪ್ಪನ ಅಗ್ರಹಾರದ ವಾಸವನ್ನೂ ಅನುಭವಿಸಿ ಬಂದಿದ್ದು, ಇದೀಗ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಅಧಿಕಾರದ ಗದ್ದುಗೆಗೇರಲು ಅವಕಾಶ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಜೀವನ:

1943 ಫೆ. 27 ರಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ದಂಪತಿ ಪುತ್ರನಾಗಿ ಯಡಿಯೂರಪ್ಪ ಜನಿಸಿದರು. ಪ್ರಥಮ ದರ್ಜೆ ಗುಮಾಸ್ತ ವೃತ್ತಿಗೆ ರಾಜೀನಾಮೆ ನೀಡಿ ಶಿಕಾರಿಪುರಕ್ಕೆ ತೆರಳಿ ವೀರಭದ್ರಶಾಸ್ತ್ರಿಯವರ ಶಂಕರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದರು. 1967ರಲ್ಲಿ ಮೈತ್ರಾದೇವಿ ಜೊತೆ ವಿವಾಹವಾದರು. ಬಿ.ವೈ.ವಿಜಯೇಂದ್ರ, ವಿ.ವೈ.ರಾಘವೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿ ಯಡಿಯೂರಪ್ಪ ಅವರ ಮಕ್ಕಳಾಗಿದ್ದು, 2004ರಲ್ಲಿ ಮೈತ್ರಾದೇವಿ ನಿಧನರಾಗಿದ್ದಾರೆ.

ಪಕ್ಷದ ಜವಾಬ್ದಾರಿ:

    1970: ಆರ್.ಎಸ್.ಎಸ್. ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ನೇಮಕ

    1970: ಜನ ಸಂಘದ ತಾಲೂಕು ಅಧ್ಯಕ್ಷ

    1980: ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ

    1985: ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ

    1988: ಬಿಜೆಪಿ ರಾಜ್ಯಾಧ್ಯಕ್ಷ

    1993: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

    1999: ಬಿಜೆಪಿ ರಾಜ್ಯಾಧ್ಯಕ್ಷ

    2016: ಬಿಜೆಪಿ ರಾಜ್ಯಾಧ್ಯಕ್ಷ

ಜನಪ್ರತಿನಿಧಿಯಾಗಿ ಜವಾಬ್ದಾರಿ:

    1975: ಶಿಕಾರಿಪುರ ಪುರಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ

    1983: ಮೊದಲ ಬಾರಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಗೆಲುವು

    1983-1994: ಸತತ ನಾಲ್ಕು ಬಾರಿ ಶಿಕಾರಿಪುರ ಶಾಸಕರಾಗಿ ಆಯ್ಕೆ

    1994: ವಿಧಾನಸಭೆ ಪ್ರತಿಪಕ್ಷ ನಾಯಕ

    1999: ಮೊಲಲ ಬಾರಿ ಶಿಕಾರಿಪುರದಲ್ಲಿ ಸೋಲು

    2000: ವಿಧಾನ ಪರಿಷತ್ ಸದಸ್ಯ

    2004: ಶಿಕಾರಿಪುರದಿಂದ ಐದನೇ ಬಾರಿ ಆಯ್ಕೆ, ಪ್ರತಿಪಕ್ಷ ನಾಯಕನ ಜವಾಬ್ದಾರಿ

    2004-2018: ನಾಲ್ಕು ಬಾರಿ ಶಿಕಾರಿಪುರ ಶಾಸಕರಾಗಿ ಆಯ್ಕೆ

    2006: ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಹಣಕಾಸು ಖಾತೆ ನಿರ್ವಹಣೆ

    2007: ನವೆಂಬರ್ 12ರಿಂದ 17ರರೆಗೆ 7 ದಿನದ ಅವಧಿಗೆ ಮುಖ್ಯಮಂತ್ರಿ

    2008: ಮೇ 30ರಂದು 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

    2011: ಜುಲೈ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ

    2014: ಶಿವಮೊಗ್ಗ ಲೋಕಸಭಾ ಸದಸ್ಯರಾಗಿ ಆಯ್ಕೆ

    2018: ಶಿಕಾರಿಪುರ ಶಾಸಕರಾಗಿ ಎಂಟನೇ ಬಾರಿ ಆಯ್ಕೆ, ಮೇ 17ರಂದು 29ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

    2018: ಮೇ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ, ಪ್ರತಿಪಕ್ಷ ನಾಯಕರಾಗಿ ನೇಮಕ

ರಾಜಕೀಯ ಡೋಲಾಯಮಾನ:

ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಪಕ್ಷದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಗೆ ಅಸಮಾಧಾನಗೊಂಡಿದ್ದ ಯಡಿಯೂರಪ್ಪ, 2011ರ ನವೆಂಬರ್ 30ರಂದು ಶಾಸಕ ಸ್ಥಾನ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದರು. 2011ರಲ್ಲಿ ಕೆಜೆಪಿ ಪಕ್ಷ ಸ್ಥಾಪಣೆ ಘೋಷಿಸಿದರು. ಪದ್ಮನಾಭ ಪ್ರಸನ್ನಕುಮಾರ್ ನೋಂದಾಯಿಸಿದ್ದ ಪಕ್ಷವನ್ನೇ ತೆಕ್ಕೆಗೆ ಪಡೆದು 2012ರಲ್ಲಿ ಕೆಜೆಪಿಗೆ ಅಧಿಕೃತ ಚಾಲನೆ ನೀಡಿದರು. 2013ರ ಮೇನಲ್ಲಿ ಕೆಜೆಪಿಯಿಂದ ಶಿಕಾರಿಪುರದಲ್ಲಿ ಸ್ಪರ್ಧಿಸಿ ಗೆಲುವು ಕಂಡು ಆಡಳಿತಾರೂಢ ಬಿಜೆಪಿ 40 ಸ್ಥಾನಕ್ಕೆ ಕುಸಿಯುವಂತೆ ಮಾಡಿದ್ದರು. ನಂತರ ಬಿಜೆಪಿ ವರಿಷ್ಠರ ಮನವೊಲಿಕೆ ಪರಿಣಾಮ 2013ರಲ್ಲಿ ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಹಿಂದಿರುಗುವುದಾಗಿ ಬಿಎಸ್​ವೈ ಪ್ರಕಟಿಸಿದರು. 2014ರ ಜನವರಿ 2ರಂದು ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಳಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಮತ್ತೆ ರಾಜಕೀಯ ಮುನ್ನೆಲೆಗೆ ಬಂದರು.

ಪ್ರಸಕ್ತ ವಿಧಾನಸಭೆಯಲ್ಲಿಯೇ ಮೂರು ದಿನದ ಮುಖ್ಯಮಂತ್ರಿ ಆಗಿ ಅಧಿಕಾರದಿಂದ ಕೆಳಗಿಳಿದಿದ್ದ ಬಿಎಸ್​ವೈ ಇದೀಗ 14 ತಿಂಗಳ ನಂತರ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆ ಮೂಲಕ ಮತ್ತೊಮ್ಮೆ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಕಮಲ ಅರಳಿಸುತ್ತಿದ್ದಾರೆ.

Conclusion:
Last Updated : Jul 26, 2019, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.