ETV Bharat / state

ಮದ್ವೆ ಕಾರ್ಯಕ್ರಮದಲ್ಲಿ ಬಿಎಸ್​ವೈ, ಹೆಚ್​ಡಿಕೆ ಮುಖಾಮುಖಿ: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ?

ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮದುವೆ ಸಮಾರಂಭವೊಂದರಲ್ಲಿ ಮುಖಾಮುಖಿಯಾಗಿದ್ದಾರೆ.

ಬಿಎಸ್​ವೈ, ಹೆಚ್​ಡಿಕೆ ಮುಖಾಮುಖಿ
author img

By

Published : Nov 1, 2019, 7:24 PM IST

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮದುವೆ ಸಮಾರಂಭವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಈ ಸನ್ನಿವೇಶ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಶ್ರೀಮತಿ ವಸುಂಧರ ಮತ್ತು ರಾಜ ಭಗವಾನ್​ರವರ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಉಭಯ ನಾಯಕರು ಭಾಗಿಯಾಗಿದ್ದರು. ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಆಹ್ವಾನದ ಮೇರೆಗೆ ಬಿ.ಎಸ್.ವೈ ಮತ್ತು ಹೆಚ್​ಡಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಮದುವೆ ಮನೆಯಲ್ಲಿ ಮುಖಾಮುಖಿಯಾಗಿ ನಗು ನಗುತ್ತಲೇ ಪರಸ್ಪರ ಹಾಸ್ತಲಾಘವ ಮಾಡಿ ಉಭಯ ಕುಶಲೋಪರಿ ನಡೆಸಿದರು. ನಂತರದಲ್ಲಿ ವಧುವರರಿಗೆ ಶುಭಾಶಯ ತಿಳಿಸಿ ಸ್ವಲ್ಪ ಸಮಯ ಮಾತುಕತೆಯೂ ನಡೆಸಿದರು.

ಇತ್ತೀಚೆಗಿನ ಕೆಲ ದಿನಗಳಲ್ಲಿ ಯಡಿಯೂರಪ್ಪ ಹಾಗು ರಾಜ್ಯ ಸರ್ಕಾರದ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ಮೂಲಕ ರಾಜ್ಯ ರಾಜಕೀಯ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಬಿಎಸ್‌ವೈ ಆಪ್ತ ಲೆಹರ್ ಸಿಂಗ್, ಕುಮಾರಸ್ವಾಮಿ ನಿವಾಸಕ್ಕೆ ತೆರಳಿ, ಮಾತುಕತೆ ನಡೆಸಿದ್ದರು. ಇದೀಗ ಈ ಇಬ್ಬರೂ ನಾಯಕರು ಮುಖಾಮುಖಿಯಾಗಿರುವುದು ಮುಂದಿನ ರಾಜಕೀಯ ಬದಲಾವಣೆ ಸಾಧ್ಯತೆಗಳಿಗೆ ಪುಷ್ಠಿ ನೀಡಿದೆ.

Intro:

ಬೆಂಗಳೂರು: ರಾಜಕೀಯ ಬದ್ದ ವೈರಿಗಳಂತೆ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮದುವೆ ಸಮಾರಂಭವೊಂದರಲ್ಲಿ ಮುಖಾಮುಖಿಯಾಗಿದ್ದು ರಾಜಕೀಯ ವಲಯದಲ್ಲಿ ಸಾಕಷ್ಡು ಕುತೂಹಲ ಕೆರಳುವಂತೆ ಮಾಡಿದೆ.

ಬಾಗಮನೆ ಕುಟುಂಬದ ಶ್ರೀಮತಿ ವಸುಂಧರ ಮತ್ತು ರಾಜ ಭಗವಾನೇರವರ ಪುತ್ರಿ ಮದುವೆ ಕಾರ್ಯಕ್ರಮಕ್ಕೆ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಆಹ್ವಾನದ ಮೇರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ಗ ಆಗಮಿಸಿದ್ದರು ಈ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡ ಮದುವೆಗೆ ಆಗಮಿಸಿರು, ಹಾಲಿ ಸಿಎಂ ಹಾಗು ಮಾಜಿ ಸಿಎಂ ಮದುವೆ ಮನೆಯಲ್ಲಿ ಮುಖಾಮುಖಿಯಾದರು.ನಗು ನಗುತ್ತಲೇ ಪರಸ್ಪರ ಹಾಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿರು ನಂತರ ವಧು ವರರಿಗೆ ಶುಭ ಕೋರಿದರು.

ಮದುವೆಯಲ್ಲಿ ಪಾಲ್ಗೊಂಡ ನಂತರ ಸ್ವಲ್ಪ ಸಮಯ ಉಭಯ ನಾಯಕರು ಮಾತುಕತೆ ನಡೆಸಿರು.ಮದುವೆಗೆ ಹೋಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ರಾ ಉಭಯ ನಾಯಕರು ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಇತ್ತೀಚಿನ ಕೆಲ ದಿನಗಳಲ್ಲಿ ಯಡಿಯೂರಪ್ಪ ಬಗ್ಗೆ ಸಾಫ್ಟ್ ಕಾರ್ನರ್ ಆಗಿರುವ ಕುಮಾರಸ್ವಾಮಿ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎನ್ನುವ ಹೇಳಿಕೆ ನೀಡಿ ರಾಜ್ಯ ರಾಜಕೀಯ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದರು ಅದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಇದೀಗ ಹಾಲಿ‌ ಸಿಎಂ ಮತ್ತು ಮಾಜಿ ಸಿಎಂ ಮುಖಾಮುಖಿಯಾಗಿರುವುದು ಮುಂದಿನ ರಾಜಕೀಯ ಬದಲಾವಣೆ ಸಾಧ್ಯತೆಗೆ ಪುಷ್ಟಿ ನೀಡುವಂತಿದೆ.Body:.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.