ETV Bharat / state

ಬಿಎಂಟಿಸಿ ಬಸ್​ ದರ ಕಡಿತ ಸೇರಿದಂತೆ ಬೆಂಗಳೂರಿಗರಿಗೆ ಹಲವು ಸಿಹಿ ಸುದ್ದಿ ನೀಡಿದ ಸಿಎಂ

ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬೆಂಗಳೂರಿನ ಅಭಿವೃದ್ಧಿಗೆ ಹಲವು ನಿರ್ಧಾರ ಕೈಗೊಂಡಿದ್ದಾರೆ. ಸಧ್ಯದಲ್ಲೇ ಬಿಎಂಟಿಸಿ ಬಸ್​ ಟಿಕೆಟ್​ ದರ ಇಳಿಸುವ ಕುರಿತು ಸಿಹಿ ಸುದ್ದಿ ನೀಡಿದ್ದಾರೆ.

ಬಿ.ಎಸ್​.ಯಡಿಯೂರಪ್ಪ
author img

By

Published : Nov 6, 2019, 9:49 PM IST

Updated : Nov 6, 2019, 10:56 PM IST

ಬೆಂಗಳೂರು: ವಿದ್ಯುತ್ ಚಾಲಿತ ಬಸ್ ಸೇರಿದಂತೆ ಬಿಎಂಟಿಸಿಗೆ ಹೊಸದಾಗಿ 6 ಸಾವಿರ ಬಸ್​ಗಳ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಬಸ್ ದರ ಇಳಿಕೆ ಮೂಲಕ ಖಾಸಗಿ ವಾಹನದಲ್ಲಿ ಸಂಚರಿಸುವವರನ್ನು ಸಾರಿಗೆ‌ ಬಸ್​ಗಳಲ್ಲಿ ಪ್ರಯಾಣಿಸುವಂತೆ ಉತ್ತೇಜಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಬಿ.ಎಸ್​.ಯಡಿಯೂರಪ್ಪ, ಮುಖ್ಯಮಂತ್ರಿ

ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರು ಗಂಟೆಗಳ ಕಾಲ ಬೆಂಗಳೂರು ನಗರದ ಮೂಲಸೌಕರ್ಯ ಸುಧಾರಣೆ, ಸಂಚಾರದಟ್ಟಣೆ ನಿವಾರಿಸಲು, ತಜ್ಞರು ಮತ್ತು ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿ ಹಲವು ನಿರ್ಧಾರ ಕೈಗೊಂಡು ಡಿಸೆಂಬರ್ 15 ರ ನಂತರ ಮತ್ತೊಮ್ಮೆ ಸಭೆ ನಡೆಸಿ ಅನುಷ್ಠಾನಕ್ಕೆ ಸಂಬಂಧಪಟ್ಟ ಪರಿಶೀಲನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ನಗರದ ಮೂಲಸೌಕರ್ಯ ಸುಧಾರಣೆ, ಸಂಚಾರದಟ್ಟಣೆ ನಿವಾರಿಸಿ ವಾಯು ಮಾಲಿನ್ಯ‌ ತಗ್ಗಿಸುವ ಸಂಬಂಧ ಬೆಂಗಳೂರು ಮೊಬಿಲಿಟಿ ಮ್ಯಾನೇಜ್​ಮೆಂಟ್ ಅಥಾರಿಟಿ ರಚಿಸಲು ನಿರ್ಧರಿಸಲಾಯಿತು. ನಗರದ ದಟ್ಟಣೆಯುಳ್ಳ 12 ಕಾರಿಡಾರ್ ರಸ್ತೆಗಳನ್ನು ಗುರುತಿಸಿ‌ ಪ್ರತ್ಯೇಕ ಬಸ್ ಪಥ ನಿರ್ಮಿಸಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಿರ್ಧರಿಸಲಾಗಿದೆ ಎಂದರು.

ಸಧ್ಯ ಬಿಎಂಟಿಸಿಯಲ್ಲಿ 6 ಸಾವಿರದ 500 ಬಸ್ ಇವೆ. ಈ ಬಸ್ ಗಳಲ್ಲಿ 1000 ಬಸ್ ಗುಜರಿಗೆ ಹಾಕಬೇಕಿದ್ದು, ಉಳಿದ ಬಸ್​ಗಳನ್ನು ಬೇರೆಡೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಹಂತ ಹಂತವಾಗಿ ಹೊಸದಾಗಿ 6 ಸಾವಿರ ಬಸ್​ಗಳನ್ನು ಬಿಎಂಟಿಸಿಗೆ ಸೇರಿಸಲು ನಿರ್ಧಾರಿಸಿದ್ದೇವೆ. ಖಸಗಿಯವರಿಂದ ಒಪ್ಪಂದದ ಮೇಲೆ ಬಸ್ ಬಾಡಿಗೆ ಪಡೆಯಲಿದ್ದೇವೆ. ಹೊಸ ಬಸ್ ನಲ್ಲಿ‌ ಶೇ. 50 ವಿದ್ಯುತ್ ಚಾಲಿತ ಬಸ್​ಗಳು ಇರಲಿದ್ದು, ಇದರಂದ ಶೇ.50 ರಷ್ಟು ಮಾಲಿನ್ಯ ನಿಯಂತ್ರಣಕ್ಕೆ‌ ತರಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಸ್ವಂತ ಮತ್ತು ಖಾಸಗಿ ವಾಹನ ಬಳಕೆಯಿಂದ ಬಿಎಂಟಿಸಿಗೆ ಬಾರದ ಜನರನ್ನು ಸೆಳೆಯಲು ಯತ್ನಿಸಲಾಗುತ್ತದೆ. ಅದಕ್ಕಾಗಿಯೇ ಬಿಎಂಟಿಸಿಗೆ ಆರ್ಥಿಕ ನೆರವು ನೀಡಿ ಬಸ್ ದರ ಇಳಿಕೆ ಮಾಡಿ ಜನರನ್ನ ಸೆಳೆಯಲಾಗುವುದು ಎಂದು ಹೇಳಿದರು.

ಮೆಟ್ರೋ 2 ಹಂತ 2020ರ ಡಿಸೆಂಬರ್ ವೇಳೆಗೆ ಮುಕ್ತಾಯಕ್ಕೆ ಸೂಚನೆ ನೀಡಲಾಗಿದ್ದು, 2022 ರ ವೇಳೆಗೆ ವೈಟ್ ಫೀಲ್ಡ್ ಹೊರ ವರ್ತುಲ ರಸ್ತೆ ಪೀಣ್ಯ ಹಬ್​ಗೆ ಸೇರಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, 2023ಕ್ಕೆ ವಿಮಾನ ನಿಲ್ದಾಣದ ಹೊರ ವರ್ತುಲ ರಸ್ತೆ ಮುಗಿಸಲು ಸೂಚಿಸಿದ್ದಾರೆ. ಅಲ್ಲದೆ ಹೊಸಕೋಟೆ, ಸರ್ಜಾಪುರಕ್ಕೆ ಮೆಟ್ರೋ 3ನೇ ಹಂತ ಸಂಪರ್ಕ ಕಲ್ಪಿಸಲು ಸೂಚನೆ ನೀಡಲಾಗಿದೆ.

ವೈಜ್ಞಾನಿಕ ಕಸ ವಿಲೇವಾರಿ ಪದ್ಧತಿ ಅಳವಡಿಕೆ, ಕಸ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ಬಿಬಿಎಂಪಿಗೆ ಕೆರೆ ನಿರ್ವಹಣೆ ಜವಾಬ್ದಾರಿ ಸೇರಿದಂತೆ ಹಲವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನೂರು‌ ದಿನ ನೆರೆಗೆ ಹೆಚ್ಚು ಒತ್ತು ಕೊಟ್ಟ ಕಾರಣ ಹಣವನ್ನು ಆಕಡೆ ವಿನಿಯೋಗ ಮಾಡಿದ್ದೇವೆ. ಇನ್ನು ನೂರು ದಿನಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಿದ್ದೇವೆ. ಬೆಂಗಳೂರು ಅಭಿವೃದ್ಧಿ, ಜನ ಮೆಚ್ಚುವ ರೀತಿ ಬದಲಾವಣೆ ಮಾಡಲು ಹೆಜ್ಜೆ ಇಡಲಿದ್ದೇವೆ. ಮೂರು ತಿಂಗಳಲ್ಲಿ ಬದಲಾವಣೆ ಕಾಣಬಹುದು ಎಂದು‌ ಸಿಎಂ ನಗರದ ಜನತೆಗೆ ಅಭಯ ನೀಡಿದ್ರು.

Intro:

ಬೆಂಗಳೂರು: ವಿದ್ಯುತ್ ಚಾಲಿತ ಬಸ್ ಸೇರಿದಂತೆ ಬಿಎಂಟಿಸಿಗೆ ಹೊಸದಾಗಿ 6000 ಬಸ್ ಗಳ ಸೇರ್ಪಡೆ, ದಟ್ಟಣೆ ಇರುವ ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥ, ಬಸ್ ದರ ಇಳಿಕೆ ಮೂಲಕ ಖಾಸಗಿ ವಾಹನದಲ್ಲಿ ಸಂಚರಿಸುವವರನ್ನು ಸಾರಿಗೆ‌ ಬಸ್ ಗಳಲ್ಲಿ ಪ್ರಯಾಣಿಸುವಂತೆ ಉತ್ತೇಜನ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಮೂರು ಗಂಟೆ ಕಾಲ ಬೆಂಗಳೂರು ನಗರದ ಮೂಲಸೌಕರ್ಯ ಸುಧಾರಣೆ, ಸಂಚಾರದಟ್ಟಣೆ ನಿವಾರಿಸಕು, ತಜ್ಞರು, ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿ ಹಲವು ನಿರ್ಧಾರ ಕೈಗೊಂಡು ಡಿಸೆಂಬರ್ 15 ರ ನಂತರ ಮತ್ತೊಮ್ಮೆ ಸಭೆ ನಡೆಸಿ ಅನುಷ್ಠಾನಕ್ಕೆ ಸಂಬಂಧಪಟ್ಟ ಪರಿಶೀಲನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ನಗರದ ಮೂಲಸೌಕರ್ಯ ಸುಧಾರಣೆ, ಸಂಚಾರದಟ್ಟಣೆ, ನಿವಾರಿಸಿ, ವಾಯು ಮಾಲಿನ್ಯ‌ ತಗ್ಗಿಸುವ ಸಂಬಂಧ ಚರ್ಚೆ ಬೆಂಗಳೂರು ಮೊಬಿಲಿಟಿ ಮ್ಯಾನೇಜ್ ಮೆಂಟ್ ಅಥಾರಿಟಿ ರಚಿಸಲು ನಿರ್ಧರಿಸಲಾಯಿತು. ನಗರದ ದಟ್ಟಣೆಯುಳ್ಳೆ 12 ಕಾರಿಡಾರ್ ರಸ್ತೆ ಗುರಿತಿಸಿ‌ ಪ್ರತ್ಯೇಕ ಬಸ್ ಪಥ ನಿರ್ಮಿಸಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಿರ್ಧಾರಿಸಲಾಗಿದೆ ಎಂದರು.

ಸಧ್ಯ ಬಿಎಂಟಿಸಿಯಲ್ಲಿ 6500 ಬಸ್ ಇವೆ ಈ ಬಸ್ ಗಳಲ್ಲಿ 1000 ಬಸ್ ಗುಜರಿಗೆ ಹಾಕಬೇಕಿದ್ದು,ಉಳಿದ ಬಸ್ ಗಳನ್ನು ಬೇತೆ ಕಡೆ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು ಹಂತ ಹಂತವಾಗಿ ಹೊಸದಾಗಿ 6000 ಬಸ್ ಗಳನ್ನು ಬಿಎಂಟಿಸಿಗೆ ಸೇರಿಸಲು ನಿರ್ಧಾರಿಸಿದ್ದೇವೆ,ಖಸಗಿಯವರಿಂದ ಒಪ್ಪಂದದ ಮೇಲೆ ಬಸ್ ಬಾಡಿಗೆ ಪಡೆಯಲಿದ್ದೇವೆ,ಹೊಸ ಬಸ್ ನಲ್ಲಿ‌ ಶೇ 50 ವಿದ್ಯುತ್ ಬಸ್ ಇರಲಿದೆ, ಇದರಂದ ಶೇ.50 ರಷ್ಟು ಮಾಲಿನ್ಯ ನಿಯಂತ್ರಣಕ್ಕೆ‌ ತರಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದರು.

ಸ್ವಂತ ಖಾಸಗಿ ವಾಹನ ಬಳಕೆಯಿಂದ ಬಿಎಂಟಿಸಿಗೆ ಬಾರದ ಜನರನ್ನು ಸೆಳೆಯಲು ಯತ್ನಿಸಲಾಗುತ್ತದೆ ಅದಕ್ಕಾಗಿಯೇ ಬಿಎಂಟಿಸಿಗೆ ಆರ್ಥಿಕ ನೆರವು ನೀಡಿ ಬಸ್ ದರ ಇಳಿಕೆ ಮಾಡಿ ಜನರ ಆಕರ್ಷಣೆ ಮಾಡಲು ನಿರ್ಧಾರಿಸಲಾಗಿದೆ ಎಂದರು.

ಮೆಟ್ರೋ 2 ಹಂತ 2020 ರ ಡಿಸೆಂಬರ್ ವೇಳೆಗೆ ಮುಕ್ತಾಯಕ್ಕೆ ಸೂಚನೆ, ಹೊರ ವರ್ತಲು ರಸ್ತೆ ವಿಮಾನ ನಿಲ್ದಾಣಕ್ಕೆ 2023 ಕ್ಕೆ ಮುಗಿಸಲು‌ ಸೂಚನೆ, 2022 ರ ವೇಳೆಗೆ ವೈಟ್ ಫೀಲ್ಡ್ ಹೊರ ವರ್ತುಲ ರಸ್ತೆ ಪೀಣ್ಯ ಹಬ್ ಗೆ ಸೇರಿಸಲು ತೀರ್ಮಾನ,
ಫೆರಿಫೆರಕ್ ರಸ್ತೆ ಪೂರ್ಣಕ್ಕೂ ತೀರ್ಮಾನ ಮಾಡಲಾಗಿದೆ, ಮೆಟ್ರೋ ಮೂರನೇ ಹಂತ, ಹೊಸಕೋಟೆ, ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದರು.

ಕಸ ವಿಲೇವಾರಿಗೆ ವೈಜ್ಞಾನಿಕ ಪದ್ದತಿ ಕಡ್ಡಾಯ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಕಸ ಸಾಗಣೆ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲು ಸೂಚನೆ ಮಾಡಿದ್ದೇವೆ, ಕಸದ ವಾಹನದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಅದನ್ನು ತಪ್ಪಿಸಲು ಜಿಪಿಎಸ್ ಅಳವಡಿಕೆ ಮಾಡುತ್ತಿದ್ದೇವ, ವೈಜ್ಞಾನಿಕ ಕಸ ಸಂಸ್ಕರಣ ಘಟಕ ನಿರ್ವಹಣೆಗೆ ಅನುಕೂಲವಾಗಲು 20 ಇಂಜಿನಿಯರ್ ನೇಮಕಕ್ಕೆ ಸೂಚನೆ ನೀಡಲಾಗಿದೆ. ಪ್ರತಿ ದಿನ 4500 ಮೆಟ್ರಿಕ್ ಟನ್ ಕಸ ಉತ್ಪಾದನೆ ಆಗುತ್ತಿದ್ದು, 2500 ಮೆಟ್ರಿಕ್‌ ಟನ್ ಮಾತ್ರ ವೈಜ್ಞಾನಿಕ ನಿರ್ವಹಣೆ ಆಗುತ್ತಿದೆ ಹಾಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

ಎಲ್ಲಾ ಕೆರೆ ನಿರ್ವಹಣೆ ಬಿಬಿಎಂಪಿಗೆ ವಹಿಸಲು ನಿರ್ಧಾರ ಮಾಡಲಾಗಿದೆ,‌ಕೆರೆ ಏರಿ ಭದ್ರಪಡಿಸಿ, ವಾಕಿಂಗ್ ಪಾತ್ ನಿರ್ಮಿಸಲು‌ ಸೂಚನೆ ನೀಡಿದ್ದೇವೆ, ಒತ್ತುವರಿ ತೆರವುಗೂ ಸೂಚಿಸಿದ್ದು,ಅಲ್ಲಿ ಬಡವರ ಮನೆ ಇದ್ದರೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದೇನೆ ಎಂದರು.

ಬಸ್ ಕಡಿಮೆ ದರ ಇದೆ, ಮೆಟ್ರೋ ದರ ಜಾಸ್ತಿ ಇದೆ ಅನ್ನೋದು ಸತ್ಯ ಹಾಗಂತ ಮೆಟ್ರೋ ದರ ಕಡಿಮೆ ಮಾಡಲು ಸಾಧ್ಯವಿಲ್ಲ ನಿರ್ವಹಣೆಗೆ ಅನಿವಾರ್ಯ.ದೇಶದೆಲ್ಲೆಡೆ ಇದೇ ವ್ಯವಸ್ಥೆ ಇದೆ ಅಲ್ಲದೇ ನಮ್ನಲ್ಲಿ ಬಿಎಂಟಿಸಿಯಲ್ಲಿ ಪ್ರತಿನಿತ್ಯ 45 ಲಕ್ಷ ಜನ ಸಂಚರಿಸಿದರೆ 5 ಲಕ್ಷ ಜನ ಮಾತ್ರ ಮೆಟ್ರೋ ದಲ್ಲಿ ಸಂಚಾರ ಮಾಡುತ್ತಿದ್ದಾರೆ ಹಾಗಾಗಿ ಬಸ್ ದರ ಕಡಿಮೆ ಮಾಡುವುದರಿಂದಲೇ ಹೆಚ್ಚ ಅನುಕೂಲ ಆ ಕೆಲಸ‌ ಮಾಡುತ್ತೇವೆ ಎಂದರು.

ಈ ನೂರು‌ದಿನ ನೆರೆಗೆ ಹೆಚ್ಚು ಒತ್ತು ಕೊಟ್ಟ ಕಾರಣ ಹಣಕಾಸು ಆ ಕಡೆ ವಿನಿಯೋಗ ಮಾಡಿದ್ದೇವೆ ಇನ್ನು ನೂರು ದಿನದಲ್ಲಿ ಸಾಕಷ್ಟು ಬದಲಾವಣೆ ಮಾಡಲಿದ್ದೇವೆ.ಬೆಂಗಳೂರು ಅಭಿವೃದ್ಧಿ, ಜನ ಮೆಚ್ಚುವ ರೀತಿ ಬದಲಾವಣೆ ಮಾಡಲು ಹೆಜ್ಜೆ ಇಡಲಿದ್ದೇವೆ, ಮೂರು ತಿಂಗಳಲ್ಲಿ ಬದಲಾವಣೆ ಕಾಣಬಹುದು ಎಂದು‌ ಸಿಎಂ ಜನತೆಗೆ ಅಭಯ ನೀಡಿದರು.
Body:.Conclusion:
Last Updated : Nov 6, 2019, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.