ETV Bharat / state

ಗಡಿ ವಿವಾದದಲ್ಲಿ ನಮ್ಮ ರಾಜ್ಯದ ಹಿತ ಕಾಪಾಡುವುದು ಮುಖ್ಯ: ಬಿ.ಎಸ್.ಯಡಿಯೂರಪ್ಪ - ಬಿ ಎಸ್ ಯಡಿಯೂರಪ್ಪ

ಗಡಿ ವಿಚಾರ ಬಗ್ಗೆ ವರಿಷ್ಠರ ಜತೆ ಮಾತನಾಡುತ್ತೇನೆ. ನೆಲ, ಜಲ‌,ಗಡಿ, ಭಾಷೆ ವಿಚಾರದಲ್ಲಿ ರಾಜಿ ಆಗಲ್ಲ. ಯಾರು ಯಾರಿಗೇ ದೂರು ಕೊಟ್ಟರೂ ನಮಗೆ ಸಂಬಂಧ ಇಲ್ಲ. ನಮ್ಮ ರಾಜ್ಯದ ಹಿತವನ್ನು ಕಾಪಾಡುವುದು ಮುಖ್ಯ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

BS Yeddyurappa
ಬಿ.ಎಸ್.ಯಡಿಯೂರಪ್ಪ
author img

By

Published : Dec 9, 2022, 7:46 PM IST

ಬೆಂಗಳೂರು: ಯಾರು ಯಾರಿಗೇ ದೂರು ಕೊಡಲಿ, ನಮ್ಮ ರಾಜ್ಯದ ಹಿತ ಕಾಯುವ ಕೆಲಸ ನಾವು ಮಾಡುತ್ತೇವೆ ಎಂದು ಅಮಿತ್ ಶಾಗೆ ದೂರು ನೀಡಿದ ಮಹಾರಾಷ್ಟ್ರ ಸಂಸದರಿಗೆ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಜೊತೆಗೆ, ಗಡಿ ವಿಚಾರದ ಕುರಿತು ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

ಗುಜರಾತ್ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಮಿತಿ ಮಾಡಿದ್ದಾರೆ. ನೀವೂ ಬರಬೇಕು ಅಂತ ನನಗೆ ಕರೆ ಬಂತು. ಹೀಗಾಗಿ ಅಹಮದಾಬಾದ್​ಗೆ ಹೊರಟಿದ್ದೇನೆ. ನನ್ನೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಅವರನ್ನು ಸೇರಿಸಿ ಸಮಿತಿ ಮಾಡಿದ್ದಾರೆ. ನಾಳೆ ಸಭೆ ಮುಗಿಸಿ ಭಾನುವಾರ ವಾಪಸ್ ಬರುತ್ತೇನೆ ಎಂದರು.

ಗಡಿ ವಿವಾದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಹಾರಾಷ್ಟ್ರ ಸಂಸದರು ದೂರು ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಗಡಿ ವಿಚಾರ ಬಗ್ಗೆ ವರಿಷ್ಟರ ಜತೆ ಮಾತನಾಡುತ್ತೇನೆ. ನೆಲ, ಜಲ‌, ಗಡಿ, ಭಾಷೆ ವಿಚಾರದಲ್ಲಿ ರಾಜಿ ಆಗಲ್ಲ. ಯಾರು ಯಾರಿಗೇ ದೂರು ಕೊಟ್ಟರೂ ನಮಗೆ ಸಂಬಂಧ ಇಲ್ಲ. ನಮ್ಮ ರಾಜ್ಯದ ಹಿತ ಕಾಪಾಡುವುದು ಮುಖ್ಯ. ಹಾಗಾಗಿ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದರು.

ತುಮಕೂರು ಜನ ಸಂಕಲ್ಪ ಯಾತ್ರೆಗೆ ಗೈರು ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್‌ ವೈ, ಜನ ಸಂಕಲ್ಪ ಯಾತ್ರೆಗೆ ಗೈರಾಗುವ ಪ್ರಶ್ನೆಯೇ ಇಲ್ಲ. ಅನಿವಾರ್ಯವಾಗಿ ಇವತ್ತು ಅಹಮದಾಬಾದ್‌ಗೆ‌ ಹೊರಟಿದ್ದೇನೆ, ಅಲ್ಲಿಂದ ವಾಪಸ್ ಬಂದ ಮೇಲೆ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದರು. ನಮ್ಮ ಚುನಾವಣೆ ತಯಾರಿ ಚೆನ್ನಾಗಿದೆ. ನಾವು ವಿಧಾನಸಭೆ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಇಲ್ಲಿ ಗೆಲ್ಲುತ್ತೇವೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದುವರೆದು, ಮೀಸಲಾತಿ ಬೇಡಿಕೆ ವಿಚಾರದ ಚರ್ಚೆ ನಡೆಯುತ್ತಿದೆ. ಮೀಸಲಾತಿಗೆ ಹಲವರು ಬೇಡಿಕೆ ಮಾಡುತ್ತಿದ್ದಾರೆ. ಮೀಸಲಾತಿ ಕೊಡಲೇನು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತಿದ್ದೇವೆ. ಮುಂದೆ ನೋಡೋಣ, ಇವೆಲ್ಲ ಸಹಜ ಸಂಗತಿಗಳು ಎಂದರು.

ಇದನ್ನೂ ಓದಿ: ಗುಜರಾತ್ ಮಾಡೆಲ್ ಕರ್ನಾಟಕದಿಂದ ಆರಂಭ: ಶಾಸಕ ಮಹೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.