ETV Bharat / state

ಅಯೋಧ್ಯೆ, ತ್ರಿವಳಿ ತಲಾಖ್‌..: ಐತಿಹಾಸಿಕ ತೀರ್ಪಿತ್ತ ಕರ್ನಾಟಕದ ನ್ಯಾ.ಅಬ್ದುಲ್‌ ನಜೀರ್‌ ಈಗ ಆಂಧ್ರ ರಾಜ್ಯಪಾಲ

author img

By

Published : Feb 12, 2023, 2:20 PM IST

ಕರ್ನಾಟಕ ಮೂಲದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಲವಾರು ಪ್ರಮುಖ ನಿರ್ಣಯಗಳನ್ನು ನೀಡಿದ ಸುಪ್ರೀಂ ಕೋರ್ಟ್ ಪೀಠಗಳ ಭಾಗವಾಗಿದ್ದ ಅಬ್ದುಲ್ ನಜೀರ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

brief-introduction-by-andhra-governor-s-abdul-nazir

ಬೆಂಗಳೂರು: ಅಯೋಧ್ಯೆ ಭೂ ಹಕ್ಕು ವಿವಾದ ಮತ್ತು ತ್ರಿವಳಿ ತಲಾಖ್​ನಂಥ ಪ್ರಮುಖ ಮತ್ತು ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಪೀಠಗಳ ಭಾಗವಾಗಿದ್ದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎಸ್.ಅಬ್ದುಲ್ ನಜೀರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ 2017 ರಿಂದ 2023 ರವವರೆಗೆ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದ್ದ ನಜೀರ್ ಮೂಲತಃ ಕರ್ನಾಟಕದ ಮೂಡಬಿದಿರೆಯ ಬೆಳುವಾಯಿಯವರು.

ಕಳೆದ ಜನವರಿ 4 ರಂದು ನಜೀರ್​ ನಿವೃತ್ತಿಯಾಗಿದ್ದರು. ಅದಾಗಿ ಕೇವಲ ಐದು ವಾರಗಳ ನಂತರ ಅವರು ರಾಜ್ಯಪಾಲರಾಗಿ ನೇಮಕವಾಗಿರುವುದು ಗಮನಾರ್ಹ. ನಿವೃತ್ತಿಯ ನಂತರ ಸರ್ಕಾರದಿಂದ ಯಾವುದೇ ಒಂದು ಹುದ್ದೆಗೆ ನೇಮಿಸಲ್ಪಟ್ಟ ಮತ್ತು ಅಯೋಧ್ಯೆ ಭೂ ಹಕ್ಕು ವಿವಾದದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳ ಪೈಕಿ ನಜೀರ್ ಮೂರನೆಯವರಾಗಿದ್ದಾರೆ. ಇದೇ ಪೀಠದಲ್ಲಿದ್ದ ಮಾಜಿ ಸಿಜೆಐ ರಂಜನ್ ಗೊಗೊಯ್ ಅವರು ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡರೆ, ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ನಿವೃತ್ತಿಯ ನಾಲ್ಕು ತಿಂಗಳ ನಂತರ 2021 ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಜನವರಿ 5, 1958 ರಂದು ಜನಿಸಿದ ನ್ಯಾಯಮೂರ್ತಿ ನಜೀರ್ ಅವರು 2003 ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. 2017 ರಲ್ಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲಾಯಿತು. ಅಲ್ಪಸಂಖ್ಯಾತ ಸಮುದಾಯದ ನ್ಯಾಯಾಧೀಶರನ್ನು ಸೇರಿಸಿಕೊಳ್ಳುವ ಮತ್ತು ಪೀಠದಲ್ಲಿ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳುವ ಕ್ರಮವಾಗಿ ಕೊಲಿಜಿಯಂ ಅವರಿಗೆ ನೇರ ಬಡ್ತಿ ನೀಡುವುದನ್ನು ಸಮರ್ಥಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಐದು ವರ್ಷ ಮತ್ತು 10 ತಿಂಗಳ ಅಧಿಕಾರಾವಧಿಯಲ್ಲಿ, ನ್ಯಾಯಮೂರ್ತಿ ನಜೀರ್ ಅವರು ಮಹತ್ವದ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡಿದ ಹಲವಾರು ಪೀಠಗಳ ಭಾಗವಾಗಿದ್ದರು. ಅಯೋಧ್ಯೆಯ ತೀರ್ಪಿನಲ್ಲಿ, ನ್ಯಾಯಮೂರ್ತಿ ನಜೀರ್ ಅವರು ಹಿಂದೂಗಳ ಪರವಾಗಿ ವಿವಾದವನ್ನು ನಿರ್ಧರಿಸಿದ ಐವರು ನ್ಯಾಯಾಧೀಶರ ಸರ್ವಾನುಮತದ ತೀರ್ಪಿನ ಭಾಗವಾಗಿದ್ದರು. ಆದಾಗ್ಯೂ, ಇದಕ್ಕೂ ಮೊದಲು ಅವರು ಈ ಸಮಸ್ಯೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದ 4:1 ಬಹುಮತದ ತೀರ್ಪಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಇಸ್ಲಾಂ ಧರ್ಮದ ಅಗತ್ಯ ಲಕ್ಷಣ ಅಲ್ಲ ಎಂಬ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ನಿರ್ಣಯದ ವಿರುದ್ಧ ನ್ಯಾಯಮೂರ್ತಿ ನಜೀರ್ ಅವರು ಏಕಾಂಗಿಯಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಅವರು 2017 ರ ತ್ರಿವಳಿ ತಲಾಖ್ ತೀರ್ಪಿನಲ್ಲಿ 3:2 ಅಲ್ಪಮತದ ನಿರ್ಣಯದ ಭಾಗವಾಗಿದ್ದರು ಮತ್ತು ತ್ರಿವಳಿ ತಲಾಖ್ ಕಾನೂನುಬದ್ಧವಾಗಿ ಮಾನ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಸಮಯದಲ್ಲಿ ಡಿಸೆಂಬರ್ 2021 ರಲ್ಲಿ ನ್ಯಾಯಮೂರ್ತಿ ನಜೀರ್ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಯೋಜಿತವಾಗಿರುವ ವಕೀಲರ ಸಂಸ್ಥೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ 16 ನೇ ರಾಷ್ಟ್ರೀಯ ಕೌನ್ಸಿಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಭಾರತೀಯ ಕಾನೂನು ವ್ಯವಸ್ಥೆಯ ವಸಾಹತುಶಾಹಿ ವ್ಯವಸ್ಥೆಯ ಕುರಿತು ಅವರು ಮಾತನಾಡಿದ್ದರು.

ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅಭಿನಂದನೆ: ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಸ್‌. ಅಬ್ದುಲ್ ನಜೀರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ನೂತನವಾಗಿ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಹೆಮ್ಮೆಯ ಕನ್ನಡಿಗ ಎಸ್‌. ಅಬ್ದುಲ್ ನಜೀರ್ ರವರಿಗೆ ಹಾರ್ದಿಕ ಅಭಿನಂದನೆಗಳು. ಮೂಲತಃ ಮಂಗಳೂರಿನ ಬೆಳುವಾಯಿಯವರಾದ ಇವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ, ನಿವೃತ್ತರಾಗಿದ್ದರು. ಇದೀಗ ರಾಜ್ಯಪಾಲರಾಗಿದ್ದು ಅವರಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟ್ವೀಟ್ ಮಾಡಿದ್ದಾರೆ.

ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮತ್ತು ಕನ್ನಡಿಗ ಎಸ್.ಅಬ್ದುಲ್ ನಜೀರ್ ಅವರ ನೇಮಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸ್ವಾಗತಿಸಿ ಅವರನ್ನು ಅಭಿನಂದಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಅವರು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದು, ಸರಳತೆ ಮೂಲಕ ಗಮನ ಸೆಳೆದವರು. ಅಯೋಧ್ಯೆ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ರಾಮಮಂದಿರದ ಪರವಾಗಿ ತೀರ್ಪು ಕೊಟ್ಟ ನ್ಯಾಯಪೀಠದಲ್ಲಿ ಮತ್ತು ತ್ರಿವಳಿ ತಲಾಖ್ ಅಸಿಂಧು ಎಂಬ ಐತಿಹಾಸಿಕ ತೀರ್ಪು ಕೊಟ್ಟ ನ್ಯಾಯಪೀಠದಲ್ಲಿ ಅವರೂ ಒಬ್ಬರಾಗಿದ್ದರು ಎಂದು ವಿವರಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ರಾಜ್ಯಗಳಿಗೆ ಗವರ್ನರ್​ಗಳು, ಲೆಫ್ಟಿನೆಂಟ್ ಗವರ್ನರ್​ಗಳ ನೇಮಕ ಮಾಡಿದ್ದನ್ನು ಅವರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.