ETV Bharat / state

ಲಂಚ ಸ್ವೀಕಾರ ಆರೋಪ: ಕೆಪಿಟಿಸಿಎಲ್ ನೌಕರರ ವಿರುದ್ಧದ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ - ಲೋಕಾಯುಕ್ತ ಪೊಲೀಸರ ಕೈಗೆ

2007ರಲ್ಲಿ ಬೋರೇಗೌಡ ಅವರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

Highcourt
ಹೈಕೋರ್ಟ್​
author img

By

Published : Jun 13, 2023, 7:54 PM IST

ಬೆಂಗಳೂರು: ಲಂಚ ಸ್ವೀಕರಿಸಿದ ಆರೋಪದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ನಿವೃತ್ತ ನೌಕರರೊಬ್ಬರ ವಿರುದ್ಧ 2007ರಿಂದ ಬಾಕಿ ಇರುವ ಇಲಾಖಾ ವಿಚಾರಣೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸುವಂತೆ ಉಪಲೋಕಾಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಬಿ. ಎಲ್. ಬೋರೇಗೌಡ ಎಂಬುವರಿಗೆ ಪೂರ್ಣ ಪ್ರಮಾಣದಲ್ಲಿ ಪಿಂಚಣಿ ಮತ್ತಿತರ ನಿವೃತ್ತಿ ಸೌಲಭ್ಯ ಕಲ್ಪಿಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿದ್ದ ಪೀಠ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಬೋರೇಗೌಡ ಅವರು 2012ರಲ್ಲೇ ಸೇವೆಯಿಂದ ನಿವೃತ್ತಿ ಹೊಂದಿದ್ದು, ಅವರ ವಿರುದ್ಧದ ಇಲಾಖಾ ವಿಚಾರಣೆ ಇನ್ನೂ ಬಾಕಿ ಇದೆ. ವಿಚಾರಣೆಯನ್ನು ಸಾಧ್ಯವಾದಷ್ಟೂ 2 ತಿಂಗಳ ಒಳಗೆ ಪೂರ್ಣಗೊಳಿಸಲು ಉಪಲೋಕಾಯುಕ್ತರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನ್ಯಾಯಾಲಯ ನಿರೀಕ್ಷಿಸುತ್ತಿದೆ.

ವಿಚಾರಣೆ ಪೂರ್ಣಗೊಂಡ ನಂತರದ 2 ತಿಂಗಳ ಒಳಗೆ ವಿಚಾರಣೆಯ ಫಲಿತಾಂಶ ಆಧರಸಿ ಬೋರೇಗೌಡ ಅವರ ಗ್ರ್ಯಾಚುಟಿ, ಉಳಿಕೆ ಪಿಂಚಣಿ ಮೊತ್ತ ಪಾವತಿಸುವ ಬಗ್ಗೆ ಕೆಪಿಟಿಸಿಎಲ್ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಕೆಪಿಟಿಸಿಎಲ್‌ನಲ್ಲಿ ಉದ್ಯೋಗಿಯಾಗಿದ್ದ ಬೋರೇಗೌಡ ಅವರು 2007ರ ಜೂ. 16ರಂದು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜು.2ರಿಂದ ಅವರನ್ನು ಅಮಾನತಿನಲ್ಲಿರಿಸಿ, ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು. ಮತ್ತೊಂದೆಡೆ, ಬೋರೇಗೌಡ ವಿರುದ್ಧ ಭ್ರಷ್ಟಾಚಾರ ನಿಂತ್ರಣಾ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಿಂದ ಅವರು 2011ರ ನ.30ರಂದು ಖುಲಾಸೆಗೊಂಡಿದ್ದರಾದರೂ, ಇಲಾಖಾ ವಿಚಾರಣೆ ಬಾಕಿ ಇತ್ತು.

2012ರ ಮೇ 31ರಂದು ಬೋರೇಗೌಡ ಕರ್ತವ್ಯದಿಂದ ನಿವೃತ್ತಿ ಹೊಂದಿದ್ದರು. ಇಲಾಖಾ ವಿಚಾರಣೆ ಬಾಕಿ ಇರುವ ಕಾರಣ ಬೋರೇಗೌಡ ಅವರು ಕೇವಲ ಶೇ. 75 ಪಿಂಚಣಿ ಮತ್ತಿತರ ನಿವೃತ್ತಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಜೂ.1ರಂದು ನಿಗಮ ಆದೇಶ ಹೊರಡಿಸಿತ್ತು. ಸಂಪೂರ್ಣ ಸೌಲಭ್ಯ ಕಲ್ಪಿಸುವಂತೆ ಬೋರೇಗೌಡ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ 2013ರ ಜು.22ರಂದು ಕೆಪಿಟಿಸಿಎಲ್ ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಬೋರೇಗೌಡ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಉದ್ಯೋಗಿಯಾದವನು ಸಂವಿಧಾನದ ಪರಿಚ್ಛೇದ 14 ಹಾಗೂ 16ರ ಅಡಿಯಲ್ಲಿ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪಡೆಯುವ ಮೂಲಭೂತ ಹಕ್ಕು ಹೊಂದಿರುತ್ತಾನೆ ಎಂದು ಅಭಿಪ್ರಾಯಪಟ್ಟು, ಬೋರೇಗೌಡ ಅವರಿಗೆ ಶೇ.100 ಸೌಲಭ್ಯ ಕಲ್ಪಿಸಬೇಕು ಎಂದು ಕೆಪಿಟಿಸಿಎಲ್‌ಗೆ 2018ರ ಸೆ.10ರಂದು ಆದೇಶಿಸಿತ್ತು. ಈ ಆದೇಶ ರದ್ದುಕೋರಿ ಕೆಪಿಟಿಸಿಎಲ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಏಕಸದಸ್ಯ ಪೀಠದ ಆದೇಶ ರದ್ದು: ಪ್ರಕರಣದಲ್ಲಿ ಬೋರೇಗೌಡ ನಿವೃತ್ತಿ ಹೊಂದುವುದಕ್ಕೂ ಮೊದಲೇ ಅವರ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಲಾಗಿದೆ. ಆದ್ದರಿಂದ, ನಿಯಮ 172(1)ರ ಪ್ರಕಾರ ಅವರ ಪಿಂಚಣಿಯನ್ನು ತಡೆಹಿಡಿಯಲು ನಿಗಮಕ್ಕೆ ಅಧಿಕಾರವಿದೆ. ಇದಲ್ಲದೆ, ನೌಕರನ ಪಿಂಚಣಿಯ ಸ್ವಲ್ಪ ಭಾಗವನ್ನು ಹಿಡಿದುಕೊಂಡು ಆತನಿಗೆ ತಾತ್ಕಾಲಿಕ ಪಿಂಚಣಿ ನಿಗದಿಪಡಿಸುವುದಕ್ಕೂ ನಿಯಮ 171 ಅವಕಾಶ ಕಲ್ಪಿಸುತ್ತದೆ. ಆದರೆ, ನೌಕರನ ವಿರುದ್ಧದ ಪ್ರಕ್ರಿಯೆ ತೀರ್ಮಾನಗೊಳ್ಳುವವರೆಗೂ ಆತನಿಗೆ ನೀಡಬಹುದಾದ 'ಸಾವು ಮತ್ತು ನಿವೃತ್ತಿ ಗ್ರಾಚ್ಯುಟಿ' ಪಾವತಿಸಬಾರದು ಎಂದು ನಿಯಮದಲ್ಲಿ ಹೇಳಲಾಗಿದೆ. ಆದ್ದರಿಂದ, ಬೋರೇಗೌಡ ಅವರಿಗೆ 2013ರಲ್ಲಿ ನಿಗಮ ನೀಡಿರುವ ಹಿಂಬರಹದಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬೋರೇಗೌಡ ಅವರಿಗೆ ಶೇ. 100 ಪಿಂಚಣಿ ಇನ್ನಿತರ ಭತ್ಯೆಗಳನ್ನು ಪಾವತಿಸುವಂತೆ ಸೂಚಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ತೀರ್ಪು ರದ್ದು ಪಡಿಸಿದೆ.

ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಡಿಕೆಶಿ ಮೇಲ್ಮನವಿ... ರಾಜ್ಯ ಸರ್ಕಾರ, ಸಿಬಿಐಗೆ ನೋಟಿಸ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.