ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ನಗರದ ಬಿನ್ನಿಮಿಲ್ ಬಳಿಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ಯಾಗ ನೆರವೇರಿಸಿದರು.
ದೇಶದ ಜನತೆ ಕ್ಷೇಮವಾಗಿರಲಿ ಎಂದು ಮಹಾಯಾಗ ನಡೆಸಲಾಗಿದೆ ಎಂದು ಗುರೂಜಿ ಹೇಳಿದರು. ಏಪ್ರಿಲ್ 5 ರಂದು ಎಲ್ಲರೂ ತಮ್ಮ ಮನೆಯಲ್ಲಿ ಎಣ್ಣೆಯ ದೀಪ ಹಚ್ಚಿ. ದೇವಿಯನ್ನು ಆರಾಧಿಸಿ, ಎಲ್ಲವೂ ಸರಿಯಾಗಲಿದೆ. ಇನ್ನು ಐದು ರೋಗಗಳು ಪ್ರಪಂಚದಲ್ಲಿ ಬರಲಿವೆ. ಎರಡು ರೋಗಗಳಿಗೆ ನಾವು ಹೀಗೆ ಕುಗ್ಗಿದ್ರೆ ಹೇಗೆ?. ಎಲ್ಲವನ್ನು ಎದುರಿಸಲು ನಾವು ಪಣ ತೊಡಬೇಕೆಂದು ಅವರು ಹೇಳಿದರು.