ETV Bharat / state

ಫೇಲ್ ಆಗಿದ್ದಕ್ಕೆ ಬುದ್ಧಿವಾದ ಹೇಳಿದ ಪೋಷಕರು: ಮನನೊಂದು ಮನೆ ಬಿಟ್ಟು ಹೋದ ಬಾಲಕ - student missing

ಮಧ್ಯಂತರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಎಸ್ಎಸ್ಎಲ್​ಸಿ ವಿದ್ಯಾರ್ಥಿ ಮನೆ ಬಿಟ್ಟು ಹೋದ ಘಟನೆ ನಡೆದಿದೆ.

boy runs away from home after failing exam
ಮನೆ ಬಿಟ್ಟು ಹೋದ ಬಾಲಕ
author img

By

Published : Oct 13, 2022, 11:59 AM IST

ಬೆಂಗಳೂರು: ಟ್ಯೂಷನ್​ಗೆ ಹೋಗಿ ಬರುವುದಾಗಿ ಮನೆಯಿಂದ ಹೋದ ವಿದ್ಯಾರ್ಥಿಯೊಬ್ಬ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಅಕ್ಟೋಬರ್ 11 ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಸ್ಎಸ್ಎಲ್​ಸಿ ಓದುತ್ತಿದ್ದ ಪುನೀತ್ ನಾಪತ್ತೆಯಾದ ವಿದ್ಯಾರ್ಥಿ.

ಓಕಳಿಪುರಂನ ಕೇಂದ್ರೀಯ ವಿದ್ಯಾಲಯದಲ್ಲಿ ಎಸ್ಎಸ್ಎಲ್​ಸಿ ಓದುತ್ತಿದ್ದ ಪುನೀತ್, ಓದಿನಲ್ಲಿ ಕೊಂಚ ಹಿಂದೆ ಇದ್ದ. ಇತ್ತೀಚೆಗೆ ಮಧ್ಯಂತರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನೆಯಲ್ಲಿ ಪೋಷಕರು ಬೈದು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದ ಬಾಲಕ ಮಂಗಳವಾರ ಬೆಳಗ್ಗೆ 10.30ಕ್ಕೆ ಟ್ಯೂಷನ್​ಗೆ ಹೋಗುವುದಾಗಿ ಹೇಳಿ ಹೊರ ಹೋದವನು ವಾಪಸ್ ಮನೆಗೆ ಮರಳಿಲ್ಲ.

ಇದನ್ನೂ ಓದಿ: ಬೆಂಗಳೂರಿಂದ ಕಾಣೆಯಾಗಿದ್ದ ಮೂವರು ಚೆನ್ನೈನಲ್ಲಿ ಪತ್ತೆ: ಸಲಿಂಗ ಮದುವೆಗೆ ಸಿದ್ಧತೆ ನಡೆಸಿದ್ದ ಶಾಲಾ ಬಾಲಕಿಯರು!

ಪುನೀತ್​ಗಾಗಿ ಪೋಷಕರು ಹುಡುಕಾಟ ನಡೆಸುತ್ತಿದ್ದು, ಬ್ಯಾಡರಹಳ್ಳಿ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.