ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ರೌಡಿಗಳ ಅಟ್ಟಹಾಸ ಮತ್ತೊಂದೆಡೆ ಸೈಕೋ ಪಾತ್‌ಗಳ ಹಾವಳಿ. ಲೇಡಿಸ್ ಪಿಜಿಗಳನ್ನೇ ಟಾರ್ಗೆಟ್ ಮಾಡಿಕೊಂಡ ರೋಡ್ ಸೈಕೋ ಒಬ್ಬ ಯುವತಿಯರೊಂದಿಗೆ ಅಸಭ್ಯವರ್ತನೆ ಮಾಡಿದ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಪಿಜಿಯೊಂದರಲ್ಲಿ ಕಳೆದ ಕೆಲ ದಿನಗಳಿಂದ ವ್ಯಕ್ತಿಯೊಬ್ಬ ಪಿಜಿ ಟೆರೇಸ್ ಹತ್ತಿ ಯುವತಿಯರ ಜೊತೆ ಅಸಹ್ಯವಾಗಿ ಸನ್ನೆ ಮಾಡಿ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ. ಪ್ರತಿ ದಿನ ಇದೇ ರೀತಿ ಮಾಡುವುದರಿಂದ ಬೇಸತ್ತ ಯುವತಿಯರು ಪಿಜಿ ಬಿಟ್ಟು ಬೇರೆ ಕಡೆ ತೆರಳಿದ್ದಾರೆ. ಇನ್ನು ಕೆಲ ಯುವತಿಯರು ಧೈರ್ಯದಿಂದ ವಿಡಿಯೋ ಮಾಡಿ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.