ETV Bharat / state

ಪಾರಿವಾಳದ ಆಸೆಗೆ ಹೋಯ್ತು ಜೀವ: ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಸಾವು - A boy died for the desire of pigeon

ಚಂದನ್ ಹಾಗೂ ಸುಪ್ರೀತ್ ಮನೆ ಮೇಲೆ ಏರಿ ಕಬ್ಬಿಣದ ರಾಡ್​ನಿಂದ ಪಾರಿವಾಳ ಹಾರಿಸುವಾಗ ಹೈ ಟೆನ್ಷನ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು.

died boy Supreeth
ಸಾವನ್ನಪ್ಪಿದ ಬಾಲಕ ಸುಪ್ರೀತ್​
author img

By

Published : Dec 4, 2022, 11:54 AM IST

ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿದ್ದ ಇಬ್ಬರು ಬಾಲಕರಿಗೆ ಹೈ ಟೆನ್ಷನ್ ತಂತಿ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದವರ‌ ಪೈಕಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸುಪ್ರೀತ್ ಸಾವನ್ನಪ್ಪಿದ ಬಾಲಕನೆಂದು ತಿಳಿದುಬಂದಿದೆ.

ನಂದಿನಿ ಲೇಔಟ್​ನ ವಿಜಯನಂದನಗರದಲ್ಲಿ ಡಿಸೆಂಬರ್‌ 1ರ ಮಧ್ಯಾಹ್ನ 11 ವರ್ಷದ ಬಾಲಕರಾದ ಚಂದನ್ ಹಾಗೂ ಸುಪ್ರೀತ್ ಮನೆ ಮೇಲೇರಿ ಪಾರಿವಾಳ ಹಿಡಿಯಲು ಮುಂದಾಗಿದ್ದರು.‌ ಈ ಸಂದರ್ಭದಲ್ಲಿ ಕಬ್ಬಿಣದ ರಾಡ್​ನಿಂದ ಪಾರಿವಾಳ ಹಾರಿಸುವಾಗ ವಿದ್ಯುತ್‌ ತಂತಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಬಾಲಕರು ಚಿಕಿತ್ಸೆ ಪಡೆಯುತ್ತಿದ್ದರು‌‌.‌ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಉಡುಪಿ ರಸ್ತೆ ಅಪಘಾತ : ಆಸ್ಪತ್ರೆಯಲ್ಲಿ‌ ಸಾವನ್ನಪ್ಪಿದ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.