ETV Bharat / state

ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಬೌನ್ಸ್ ಸ್ಕೂಟರ್: ಬಿಡಿ ಭಾಗಗಳು ಕಿಡಿಗೇಡಿಗಳ ಪಾಲು

author img

By

Published : Mar 3, 2020, 4:46 PM IST

ವ್ಯಕ್ತಿಯೊಬ್ಬ ಬೌನ್ಸ್ ನಿಂದ ಬೈಕ್ ಬಾಡಿಗೆಗೆ ಪಡೆದು ಹಿಂದೂಪುರ-ಬೆಂಗಳೂರು ನಡುವಿನ ನಗರ ಸಮೀಪದಲ್ಲಿ ಬಿಟ್ಟು ತೆರಳಿದ್ದ. ಕಳೆದೊಂದು ವಾರದಿಂದ ಈ ಬೈಕ್ ರಸ್ತೆ ಬದಿಯಲ್ಲೇ ಅನಾಥವಾಗಿ‌ ನಿಂತಿದ್ದು ಬಿಡಿಭಾಗಗಳು ಕಿಡಿಗೇಡಿಗಳ ಪಾಲಾಗಿವೆ.

bounce scooter
ಬೌನ್ಸ್ ಸ್ಕೂಟರ್

ದೊಡ್ಡಬಳ್ಳಾಪುರ: ವ್ಯಕ್ತಿಯೊಬ್ಬ ಬೌನ್ಸ್ ಸ್ಕೂಟರ್ ಬಾಡಿಗೆಗೆ ಪಡೆದು ಹಿಂದೂಪುರ-ಬೆಂಗಳೂರು ನಡುವಿನ ನಗರದ ಸಮೀಪದಲ್ಲಿ ಬಿಟ್ಟು ತೆರಳಿದ್ದು, ಕಳೆದೊಂದು ವಾರದಿಂದ ಕೇಳುವವರಿಲ್ಲದೆ ರಸ್ತೆ ಬದಿಯಲ್ಲಿ ಬೈಕ್ ಅನಾಥವಾಗಿ‌ ನಿಂತಿದೆ.

ಸ್ವಂತ ಬೈಕ್‌ ಇಲ್ಲದವರಿಗೆ ಅಥವಾ ತಮ್ಮ ತುರ್ತು ಕೆಲಸಗಳಿಗೆ ಸ್ಕೂಟರ್​ ಅವಶ್ಯಕತೆ ಇದ್ದವರಿಗೆ ನಗರದಲ್ಲಿ ಸಂಚರಿಸಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ಬೌನ್ಸ್ ಸ್ಕೂಟರ್​ ಸೇವೆ ಈಗ ಬೆಂಗಳೂರು ನಗರದಲ್ಲಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದರ ಬಳಕೆದಾರರು ಹೆಚ್ಚಾಗುತ್ತಿದ್ದಾರೆ.

ರಸ್ತೆ ಬದಿ ನಿಂತಿರುವ ಬೌನ್ಸ್ ಸ್ಕೂಟರ್​ನ ಬಿಡಿ ಭಾಗಗಳು ಕಿಡಿಗೇಡಿಗಳ ಪಾಲಾಗಿವೆ.

ಕಿಡಿಗೇಡಿಗಳು ರಸ್ತೆ ಬದಿ ನಿಲ್ಲಿಸಲಾದ ಬೈಕ್​ನಲ್ಲಿರುವ ಬೆಲೆ ಬಾಳುವ ಬಿಡಿ ಭಾಗಗಳನ್ನು ಹೊತ್ತೊಯ್ದಿದ್ದಾರೆ. ಈ ಕುರಿತಂತೆ‌ ಬೌನ್ಸ್ ಸಹಾಯವಾಣಿಗೆ ಸ್ಥಳೀಯರು‌ ಮಾಹಿತಿ ನೀಡಿದ್ದಾರೆ. ಆದ್ರೆ, ಕಂಪನಿಯವರು ಸ್ಪಂದಿಸದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.