ETV Bharat / state

ಡೀಸೆಲ್ ದರ ಏರಿಕೆ ಖಂಡಿಸಿ ಬೋರ್​ವೆಲ್​ ಲಾರಿ ಮಾಲೀಕರ ಮುಷ್ಕರ - Borewell lorry owners' strike to condemn diesel price hike in Bengalore

ಇದಕ್ಕೆ ಸೂಕ್ತ ಪರಿಹಾರ‌‌ ನೀಡದಿದ್ದರೆ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ತಮ್ಮ ಪ್ರತಿಭಟನೆಗೆ ಸೂಕ್ತ ಪ್ರತಿಕ್ರಿಯೆ ದೊರಕುವವರೆಗೂ ಹೋರಾಟ ಮುಂದುವರೆಯಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೇ ಸಮಸ್ಯೆಯಾಗಲಿದೆ. ಸದ್ಯ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು..

borewell-lorry-owners-strike-to-condemn-diesel-price-hike
ಡೀಸೆಲ್ ದರ ಏರಿಕೆ ಖಂಡಿಸಿ ಬೋರ್​ವೆಲ್​ ಲಾರಿ ಮಾಲೀಕರ ಮುಷ್ಕರ
author img

By

Published : Feb 16, 2021, 3:44 PM IST

Updated : Feb 16, 2021, 5:01 PM IST

ಬೆಂಗಳೂರು: ಡೀಸೆಲ್ ಬೆಲೆ ತಗ್ಗಿಸಬೇಕೆಂದು ಆಗ್ರಹಿಸಿ ಬೋರ್‌ವೆಲ್​ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಕರ್ನಾಟಕ ರಿಗ್ ಮಾಲೀಕರ ಸಂಘ ಹಾಗೂ ತಮಿಳುನಾಡು ರಿಗ್ ಮಾಲೀಕರ ಸಂಘದ ಸದಸ್ಯರು ಇಂದು ಮುದ್ದನ್ ಪಾಳ್ಯ ಸರ್ಕಲ್ ಗ್ರೌಂಡ್‌ನಲ್ಲಿ ಪ್ರತಿಭಟಿಸಿದರು.

ದಿನೇ ದಿನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಲಾರಿ ಮಾಲೀಕರಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದ್ರಲ್ಲೂ ಲಾರಿ ಮಾಲೀಕರಿಗೆ ವಾರ್ಷಿಕವಾಗಿ ಸುಮಾರು 40 ರಿಂದ 50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರ ಡೀಸೆಲ್ ದರ ಕಡಿಮೆ ಮಾಡಬೇಕೆಂದು ಈ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಿಗ್ ಮಾಲೀಕರ ಸಂಘದ ಕಾರ್ಯದರ್ಶಿ ಎಸ್​.ನಾಗೇಶ್ ಮಾತನಾಡಿ, ಬೆಲೆ ಏರಿಕೆಯಿಂದ ಡ್ರಿಲ್ಲಿಂಗ್ ಬೆಲೆ ಏರಿಕೆ ಅನಿವಾರ್ಯ. ಇದು ಗ್ರಾಹಕರ ಮೇಲೆ ಹೊರೆಯಾಗಲಿದೆ. ಹೀಗಾಗಿ, ಡೀಸೆಲ್ ದರ ಏರಿಸಿರುವುದು ಮಾತ್ರವಲ್ಲದೇ ರೈತರ ಜಮೀನಿನಲ್ಲಿ ತೆಗೆಯುವ ಬೋರ್​ವೆಲ್​ ವೆಚ್ಚವೂ ಹೆಚ್ಚಾಗುವುದು.

ಡೀಸೆಲ್ ದರ ಏರಿಕೆ ಖಂಡಿಸಿ ಬೋರ್​ವೆಲ್​ ಲಾರಿ ಮಾಲೀಕರಿಂದ ಮುಷ್ಕರ ಮಾಡಲಾಯಿತು

ಇದರಿಂದ ಸಾಕಷ್ಟು ರೈತರು ಬೋರ್​ವೆಲ್​ ಕೊರೆಸುವುದನ್ನೇ ಸ್ಥಗಿತಗೊಳಿಸಿದ್ದು, ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಅವರು ಬೆಳೆದ ಬೆಳೆ ಸಂಪೂರ್ಣ ನಾಶವಾಗಲಿದೆ ಎಂದರು. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಿ ರೈತರಿಗೆ ಉಪಯುಕ್ತ ಮಾಡಿಕೊಡಬೇಕು. ರಾಜ್ಯಾದ್ಯಂತ ಸುಮಾರು 1500ಕ್ಕೂ ಹೆಚ್ಚು ಬೋರ್​ವೆಲ್​ ಲಾರಿಗಳು ಕೆಲಸವಿಲ್ಲದೇ ಖಾಲಿ‌ ನಿಂತಿವೆ.

ಇದಕ್ಕೆ ಸೂಕ್ತ ಪರಿಹಾರ‌‌ ನೀಡದಿದ್ದರೆ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ತಮ್ಮ ಪ್ರತಿಭಟನೆಗೆ ಸೂಕ್ತ ಪ್ರತಿಕ್ರಿಯೆ ದೊರಕುವವರೆಗೂ ಹೋರಾಟ ಮುಂದುವರೆಯಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೇ ಸಮಸ್ಯೆಯಾಗಲಿದೆ. ಸದ್ಯ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಆದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ಇಂದಿನಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಲಾಗಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಓದಿ: ಫೆ.22 ರಿಂದ 6 ರಿಂದ 10 ನೇ ತರಗತಿಗಳು ಪೂರ್ಣಾವಧಿಯಾಗಿ ಆರಂಭ

ಪ್ರತಿಭಟನೆಯಲ್ಲಿ ಕರ್ನಾಟಕ ರಿಗ್ ಮಾಲೀಕರ ಸಂಘದ ಅಧ್ಯಕ್ಷ ಎನ್ ಟಿ ಅರಸು, ಕಾರ್ಯದರ್ಶಿ ಎಸ್​.ನಾಗೇಶ್, ನಿರ್ದೇಶಕ ಅನಿಲ್‌ಕುಮಾರ್, ಖಜಾಂಚಿ ವೈ ಹೆಚ್ ಕೃಷ್ಣ ಸೇರಿದಂತೆ ಸಾವಿರಾರು ಮಂದಿ ಲಾರಿ‌ ಮಾಲೀಕರು‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆ ಹಿನ್ನೆಲೆ ಕೆಲಸವನ್ನ ಸ್ಥಗಿತಗೊಳಿಸಿದ್ದ, ಸುಮಾರು 500ಕ್ಕೂ ಹೆಚ್ಚು ಲಾರಿ ಮಾಲೀಕರು ತಮ್ಮ ವಾಹನಗಳನ್ನು ಪ್ರತಿಭಟನಾ ಸ್ಥಳಕ್ಕೆ ತಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Last Updated : Feb 16, 2021, 5:01 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.