ಬೆಂಗಳೂರು: ನಿನ್ನೆ ಸಂಜೆಯೇ ಸರ್ಕಾರದ ಆದೇಶವಾದರೂ ಬುಕ್ ಮೈ ಶೋ ಆನ್ಲೈನ್ ಮೂಲಕ ಚಲನಚಿತ್ರಗಳ ಮಾರಾಟ ಮಾಡುತ್ತಿತ್ತು. ಇಂದು ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ವೇದಿಕೆ ತನ್ನೆಲ್ಲಾ ಬುಕಿಂಗ್ ನಿಲ್ಲಿಸಿದೆ.
ಶಿವರಾಜ್ ಕುಮಾರ್ ಅಭಿನಯದ 'ದ್ರೋಣ' ಚಿತ್ರ ಹೆಸರಘಟ್ಟದ ಎಸ್ಎಲ್ಎನ್ ಚಿತ್ರಮಂದಿರದಲ್ಲಿ ಲಭ್ಯವಿರುವ ಬುಕಿಂಗ್ ಪರದೆ ಮೇಲೆ ಇನ್ನೂ ಕೂಡಾ ಕಾಣಿಸುತ್ತಿದೆ. ಆದರೆ ಸಿನಿಮಾ ಬುಕ್ ಮಾಡಲು ಹೋದರೆ ಸಾಧ್ಯವಾಗುತ್ತಿಲ್ಲ.
ಸಂಸ್ಥೆ ವಾರದಲ್ಲಾಗಿರುವ ಎಲ್ಲಾ ಬುಕಿಂಗ್ ಬಗ್ಗೆ ಮಾಹಿತಿ ನೀಡಿಲ್ಲ. ಇದರ ಜೊತೆಗೆ ಬುಕಿಂಗ್ ಮಾಡಿರುವವರ ಹಣ ವಾಪಸ್ಸು ಆಗುವ ಬಗ್ಗೆಯೂ ಯಾವುದೇ ಸುಳಿವು ನೀಡಿಲ್ಲ.