ETV Bharat / state

ಬಾಡಿ ಬಿಲ್ಡಿಂಗ್ ಸ್ಪರ್ಧೆ: ಬೆಂಗಳೂರಿನ ನೇಹಾ ಪ್ರಭಾಕರ್‌ಗೆ ಪ್ರಥಮ ಸ್ಥಾನ

ಮಾರ್ಚ್ 5-6ರಂದು ನಡೆದ ರಾಜ್ಯಮಟ್ಟದ ಮಿಸ್ಟರ್ ಉಡುಪಿ 2022, ಮಹಿಳೆಯರ ವಿಭಾಗದ 89 ಕೆಜಿ ಸ್ಪರ್ಧೆಯಲ್ಲಿ ಬೆಂಗಳೂರು ಮೂಲದ ನೇಹಾ ಪ್ರಭಾಕರ್​ ಪ್ರಥಮ ಸ್ಥಾನ ಗಳಿಸಿದ್ದಾರೆ.

body-building-competation-held-in-bengaluru
ಬೆಂಗಳೂರಿನ ನೇಹಾ ಪ್ರಭಾಕರ್‌ಗೆ ಪ್ರಥಮ ಸ್ಥಾನ
author img

By

Published : Mar 16, 2022, 11:01 PM IST

ಬೆಂಗಳೂರು (ಕೆ.ಆರ್.ಪುರ): ಮಿಸ್ಟರ್ ಉಡುಪಿ 2022 ಹಾಗೂ ಮಿಸ್ಟರ್ ಕರ್ನಾಟಕ ಮಹಿಳಾ ವಿಭಾಗದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನ ನೇಹಾ ಪ್ರಭಾಕರ್‌ಗೆ ಪ್ರಥಮ ಸ್ಥಾನ ದೊರಕಿದೆ.

ಮಾಂಡವಿ ಬಿಲ್ಡರ್ಸ್ ಹಾಗೂ ಇ ಫಿಟ್ನೆಸ್ ಜಿಮ್ ವತಿಯಿಂದ ಉಡುಪಿಯ ಮೌಂಟ್ ರೋಸರಿ ಚರ್ಚ್ ಗ್ರೌಂಡ್​ನಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನುಆಯೋಜಿಸಲಾಗಿದ್ದ ಮಿಸ್ಟರ್ ಉಡುಪಿ 2022 ಹಾಗೂ ಮಿಸ್ಟರ್ ಕರ್ನಾಟಕ ಮಹಿಳಾ ವಿಭಾಗದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ನೂರಾರು ಬಾಡಿ ಬಿಲ್ಡರ್ಸ್ ಭಾಗವಹಿಸಿದ್ದರು.

ಇಂದು ಬೆಂಗಳೂರಿನ ತಮ್ಮ ಮನೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ನೇಹಾ ಪ್ರಭಾಕರ್, ಬಹಳ ವರ್ಷಗಳ ಶ್ರಮದಿಂದ ಉಡುಪಿಯಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿದ್ದು, ಕೋಚ್ ಹರೀಶ್ ಕೃಷ್ಣಪ್ಪ ಹಾಗೂ ತಮ್ಮ ಕುಟುಂಬದ ಸದಸ್ಯರ ಪ್ರೋತ್ಸಾಹದಿಂದ ಈ‌ ಮಟ್ಟಕ್ಕೆ ಬೆಳೆದಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಮಿಸೆಸ್ ಸೌತ್, ಮಿಸೆಸ್ ಇಂಡಿಯಾ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಪ್ರತಿದಿನ ಮಾಂಸ ಹಾಗೂ ಸಸ್ಯಹಾರಿ ಆಹಾರ ತಿನ್ನುವ ಮೂಲಕ ದೇಹದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಶಿವಮೊಗ್ಗ: ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.