ಬೆಂಗಳೂರು: ರಗಡ್ ಮೈಕಟ್ಟು. ಮಸಲ್ ಅಂತೂ ಮಸ್ತ್..ಜಿಮ್ನಲ್ಲಿ ಸಖತ್ ವರ್ಕೌಟ್.. ಇವರನ್ನ ನೋಡುತ್ತಿದ್ದರೆ ಯಾರೋ ಜಿಮ್ ಟ್ರೈನರ್ ಅನಿಸದೇ ಇರದು. ಆದರೆ ಇವರು ಜಿಮ್ ಟ್ರೈನರ್ ಅಲ್ಲ. ಬಾಡಿ ಬಿಲ್ಡರ್ ಕೂಡ ಅಲ್ಲ. ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರಕಾಶ್.
ಪ್ರಕಾಶ್ ಅವರಿಗೆ ಈಗ 50 ವರ್ಷ ಅರ್ಥಾತ್ ಹಾಫ್ ಸೆಂಚೂರಿ. ನಿವೃತ್ತಿಗೆ ಹತ್ತಿರದ ವಯಸ್ಸು. ಆದರೂ ಜಿಮ್ನಲ್ಲಿ ಸಖತ್ ವರ್ಕ್ಔಟ್ ಮಾಡಿ ಫಿಟ್ ಅಂಡ್ ಫೈನ್ ಆಗಿದ್ದಾರೆ. ಪ್ರಕಾಶ್ ಈ ಮಟ್ಟಕ್ಕೆ ಬರೋಕೆ ಕಾರಣ ಅವರ ಸ್ಪೋರ್ಟ್ಸ್ ಮೆನ್ ಶಿಪ್. 6 ತಿಂಗಳ ಸತತ ಪ್ರಯತ್ನ ಮಾಡಿ ಈ ಬಾಡಿ ಬಿಲ್ಡ್ ಮಾಡಿದ್ದಾರೆ. ಟೆಕ್ವಾಂಡೋ ಕ್ಲಾಸ್ ನಡೆಸುತ್ತಿದ್ದ ಪ್ರಕಾಶ್, ಕ್ರೀಡಾ ಕೋಟಾದಡಿ ಪೊಲೀಸ್ ಇಲಾಖೆಗೆ ಸೇರಿದ್ದರು. ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಚಿನ್ನದ ಪದಕ ಕೂಡ ಪಡೆದಿದ್ದಾರೆ. ಇದಾದ ಬಳಿಕ ಫಿಟ್ ಆಗಿರಬೇಕು ಎಂದು ಜಿಮ್ ಸೇರಿದ್ದ ಪ್ರಕಾಶ್ಮಾ, ಮಾಮೂಲಿ ವರ್ಕೌಟ್ ಮಾಡಿ ಜಿಮ್ ವರ್ಕೌಟ್ ಮಾಡುವ ವೇಳೆ ಬಾಡಿ ಗ್ರಿಪ್ ಸಿಗ್ತಿದ್ದಂತೆ ಯಾಕೆ ಬಾಡಿ ಬಿಲ್ಡರ್ ಆಗಬಾರದು ಅನ್ನೋ ಪ್ಲಾನ್ ಬಂದು ಅದಕ್ಕಂತಲೇ ಕಷ್ಟಪಟ್ಟು ಕೇವಲ ಮೂರೇ ತಿಂಗಳಲ್ಲಿ ಈ ಕಟ್ಟುಮಸ್ತಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ.
ಕರಾಟೆಯಲ್ಲಿ ಪಾಕಿಸ್ತಾನ, ಹಾಂಗ್‌ಕಾಂಗ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿರುವ ಪ್ರಕಾಶ್ ಎಲ್ಲಾ ಕಡೆಯಲ್ಲೂ ಗೆದ್ದು ಬಂದಿದ್ದಾರೆ. ಸದ್ಯ ಪ್ರವೃತ್ತಿಯಾಗಿ ಶುರು ಮಾಡಿದ್ದ ಜಿಮ್ನಲ್ಲಿ ಈಗ ಸಾಧನೆಯ ಶಿಖರ ಏರೋಕೆ ಮುಂದಾಗಿದ್ದಾರೆ. ಇವರ ಸಾಧನೆ ಹಿಂದೆ ಕೋಚ್ ಮೊಹಮ್ಮದ್ ಜೇನ್ ಹಿಂದಿದ್ದಾರೆ.
ಅಯ್ಯೋ ಸಾಕಾಯ್ತು, ಇಷ್ಟು ವರ್ಷ ದುಡಿದಿದ್ದೀನಿ. ಇನ್ನೇನಿದೆ ವಿಆರ್ಎಸ್ ತೆಗೆದುಕೊಂಡು ಮನೆಯಲ್ಲಿ ಅರಾಮಾಗಿ ಇರೋಣ ಎನ್ನಿಸುವ ಸಮಯದಲ್ಲಿ ಸಾಧನೆ ಮೇಲೆ ಸಾಧನೆ ಮಾಡಬೇಕು ಎಂಬ ಪ್ರಕಾಶ್ ಹಂಬಲ ನಿಜಕ್ಕೂ ಮಾದರಿ. ಮುಂದಿನ ವರ್ಷದ ನ್ಯಾಷನಲ್ ಇಂಟರ್ ನ್ಯಾಷನಲ್ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ನಲ್ಲಿ ಭಾಗಿಯಾಗಲಿರುವ ಕಾನ್ಸ್ಟೇಬಲ್ ಪ್ರಕಾಶ್ಗೆ ಆಲ್ ದಿ ಬೆಸ್ಟ್ ಹೇಳೋಣ.