ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಜಾರಿ ಮಾಡುತ್ತಿರುವ ಪರಿಣಾಮ ಇತ್ತ ಬಸ್ಗಳು ನಿಂತಲ್ಲೇ ನಿಲ್ಲುವಂತಾಗಿದೆ. ಈಗಾಗಲೇ ಅಗತ್ಯ ಸೇವೆಗಾಗಷ್ಟೇ ಸಾರಿಗೆ ನಿಗಮಗಳ ಬಸ್ಗಳು ಕಾರ್ಯಾಚಾರಣೆ ಮಾಡುತ್ತಿವೆ.
ಲಾಕ್ಡೌನ್, ಮುಷ್ಕರದಂತಹ ಕಾರಣಕ್ಕೆ ನಷ್ಟದಲ್ಲಿರುವ ಬಿಎಂಟಿಸಿ ನಿಗಮವೂ, ಇದೀಗ ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ಮುಂದಾಗುತ್ತಿದೆ.
ಕೊರೊನಾ ಸಂಕಷ್ಟದ ನಡುವೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಲಿದೆ. ಡೀಸೆಲ್ ಬೆಲೆ ಗಣನೀಯ ಏರಿಕೆ ಬೆನ್ನಲ್ಲೇ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಹಿಂದೆಯೂ ಬಜೆಟ್ ಸಂದರ್ಭದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾಗ, ಸರ್ಕಾರ ಆಗ ಟಿಕೆಟ್ ದರ ಹೆಚ್ಚಳ ಪ್ರಸ್ತಾವನೆಯನ್ನ ತಿರಸ್ಕರಿಸಿತ್ತು.
ಕಳೆದ ವರ್ಷ ಮಾರ್ಚ್ ವೇಳೆಗೆ 49.98 ಪೈಸೆ ಡೀಸೆಲ್ ಬೆಲೆ ಇತ್ತು. ಆದ್ರೆ, ಕಳೆದ ಜನವರಿಯಲ್ಲೇ ಡೀಸೆಲ್ ಬೆಲೆ 78 ರೂಪಾಯಿ ಹೆಚ್ಚಳವಾಗಿತ್ತು. ಒಂದು ವರ್ಷದಲ್ಲೇ 30 ರೂಪಾಯಿ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಇನ್ನಷ್ಟು ಡೀಸೆಲ್ ಬೆಲೆ ಏರಿಕೆಯಾಗುತ್ತಲಿದೆ. ಜೊತೆಗೆ ಕೊರೊನಾ ಎಫೆಕ್ಟ್ ಹಾಗೂ ಮುಷ್ಕರದಿಂದಾಗಿ ಬಿಎಂಟಿಸಿ ಬಸ್ ಸಂಚಾರದ ಮೇಲೆ ಹೆಚ್ಚು ಪರಿಣಾಮ ಬೀರಿದೆ.
ಐಟಿಬಿಟಿ ಕಂಪನಿಗಳ ಜನ ಹೆಚ್ಚು ಬಿಎಂಟಿಸಿ ಬಸ್ ಬಳಸುತ್ತಿದ್ದರು. ಈಗ ಐಟಿಬಿಟಿ ಕಂಪನಿಗಳು ಇಲ್ಲದ ಕಾರಣ ಆ ಬಸ್ಗಳು ಕಾರ್ಯಚರಣೆ ಇಲ್ಲದೆ ನಿಂತಿವೆ. ಈ ಹಿನ್ನೆಲೆ ಸರ್ಕಾರಕ್ಕೆ ಮುಂದೆ ಬಸ್ ಟಿಕೆಟ್ ದರ ಹೆಚ್ಚಳ ಬಗ್ಗೆ ಮತ್ತೊಮ್ಮೆ ಪ್ರಸ್ತಾವನೆ ಇಟ್ಟಿದೆ.
ಶೇ.18-20 ರಷ್ಟು ಟಿಕೆಟ್ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಕೋವಿಡ್‌ನಿಂದ ಈವರೆಗೆ ಬಿಎಂಟಿಸಿ 1 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗಾಗಿ, ಈ ಬಾರಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಹೆಚ್ಚಿದೆ ಎನ