ಬೆಂಗಳೂರು: ಇತ್ತೀಚೆಗೆ ಆ್ಯಸಿಡ್ ದಾಳಿಗೊಳಗಾಗಿದ್ದ ಬಿಎಂಟಿಸಿಯ ಮಹಿಳಾ ನಿರ್ವಾಹಕಿಯನ್ನು, ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸಂತ್ರಸ್ತೆಯ ಕುಟುಂಬಕ್ಕೆ ವೈಯಕ್ತಿಕವಾಗಿ ₹ 25 ಸಾವಿರ ರೂಪಾಯಿ ಮತ್ತದ ಚೆಕ್ ನೀಡಿದ್ರು.
ಬಳಿಕ ಮಾತನಾಡಿದ ಅವರು, ಕಂಡಕ್ಟರ್ ಪರಿಸ್ಥಿತಿ ನೋಡಿದರೆ ಬಹಳ ನೋವಾಗುತ್ತೆ. ದುಷ್ಕರ್ಮಿಗಳು ಯಾರೇ ಇರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಾಡಹಗಲೇ ಬಿಎಂಟಿಸಿ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ: ಬೆಚ್ಚಿಬಿದ್ದ ಬೆಂಗಳೂರು
ಈಗಾಗಲೇ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಇನ್ನು ಆಸ್ಪತ್ರೆಯ ಎಲ್ಲಾ ವೆಚ್ಚವನ್ನೂ ಬಿಎಂಟಿಸಿ ಭರಿಸಲಿದೆ ಎಂದು ನಂದೀಶ್ ರೆಡ್ಡಿ ಇದೇ ವೇಳೆ ತಿಳಿಸಿದರು.