ಬೆಂಗಳೂರು : ಸಾರಿಗೆ ಬಸ್‌ಗಳು ಸಂಪೂರ್ಣವಾಗಿ ಸ್ತಬ್ದವಾದ ಕಾರಣ ಸದ್ಯ ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಖಾಕಿ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ಹೀಗಾಗಿ ಯಶವಂತಪುರದಿಂದ ನೆಲಮಂಗಲಕ್ಕೆ ಒಂದು ಬಸ್‌ನ ಖಾಕಿ ಭದ್ರತೆಯಲ್ಲಿ ಚಾಲನೆ ಮಾಡಲಾಗಿದೆ.
ಗೊರಂಗುಟೆ ಪಾಳ್ಯ ಮಾರ್ಗವಾಗಿ ಒಂದು ಬಿಎಂಟಿಸಿ ಬಸ್ ಸಂಚಾರ ಮಾಡಿದೆ. ಪ್ರಯಾಣಿಕರನ್ನು ನೋಡಿಕೊಂಡು ಮತ್ತಷ್ಟು ಬಸ್ ಓಡಿಸಲು ನಿರ್ಧಾರ ಮಾಡಲಾಗಿದೆ. ಕೆಲ ಚಾಲಕರು ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಓಡಿಸಲು ಬಿಎಂಟಿಸಿ ಅಧಿಕಾರಿಗಳು ಖಾಕಿ ಭದ್ರತೆಯಲ್ಲಿ ಅನುಮತಿ ಕೊಟ್ಟಿದ್ದಾರೆ.
ಕೆಲ ಬಸ್‌ಗಳು ಡಿಪೋ ಸ್ಥಳದಲ್ಲೇ ನಿಂತಿವೆ. ಹೀಗಾಗಿ ಪ್ರಯಾಣಿಕರೂ ಕೂಡ ಇಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಸಾಮಾನ್ಯ ದಿನಗಳಲ್ಲಿ ಇಷ್ಟು ಹೊತ್ತಿಗಾಗಲೇ ಬಿಇಎಲ್, ಜಾಲಹಳ್ಳಿ, ಮಹಾಲಕ್ಷ್ಮಿಲೇಔಟ್ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಇನ್ನೂ ಯಾವುದೇ ಬಸ್ ಈ ಮಾರ್ಗವಾಗಿ ಸಂಚಾರ ಮಾಡಿಲ್ಲ.
ಸುಮಾರು 10 ಗಂಟೆಯ ನಂತರ ಪೊಲೀಸರ ಸರ್ಪಗಾವಲಿನಲ್ಲಿ ಬಸ್ ನಂಬರ್ ನೋಟ್ ಮಾಡಿಕೊಂಡು ಅಧಿಕಾರಿಗಳು ಬಸ್ ಕಳಿಸಲು ನಿರ್ಧಾರ ಮಾಡಿದ್ದಾರೆ. ಆದರೆ, ಚಾಲಕರು ಬಂದರೆ ಮಾತ್ರ ಬಸ್ ಓಡಾಟವಿರಲಿದೆ.