ETV Bharat / state

'ಬಸ್​ ಡೇ' ಮರಳಿ ಜಾರಿಗೆ ನಿರ್ಧಾರ: ಬಿಎಂಟಿಸಿ ನೂತನ ಅಧ್ಯಕ್ಷ ನಂದೀಶ್ ​ರೆಡ್ಡಿ ಹೇಳಿಕೆ - ಬಿಎಂಟಿಸಿ ನೂತನ ಅಧ್ಯಕ್ಷ ನಂದೀಶ್​ರೆಡ್ಡಿ ಹೇಳಿಕೆ

ಸ್ಥಗಿತಗೊಂಡಿರುವ 'ಬಸ್ ಡೇ' ಯೋಜನೆಯನ್ನು ಮರಳಿ ಆರಂಭಿಸಲಾಗುತ್ತದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ದ ನೂತನ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದರು.

ಬಿಎಂಟಿಸಿ ಅಧ್ಯಕ್ಷರಾಗಿ ನಂದೀಶ್​ರೆಡ್ಡಿ ಅಧಿಕಾರ ಸ್ವೀಕಾರ
author img

By

Published : Nov 7, 2019, 5:50 PM IST

ಬೆಂಗಳೂರು: ಸ್ಥಗಿತಗೊಂಡಿರುವ 'ಬಸ್ ಡೇ' ಯೋಜನೆಯನ್ನು ಮರಳಿ ಆರಂಭಿಸಲಾಗುತ್ತದೆ ಎಂದು ಬಿಎಂಟಿಸಿಯ ನೂತನ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದರು.

ಪ್ರತಿ ತಿಂಗಳ 4ನೇ ತಾರೀಖಿನಂದು ಆಚರಿಸಲಾಗುವ ಬಸ್‌ಡೇ ದಿನದಂದು ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರಿ ಬಸ್​ನಲ್ಲೇ ಕಚೇರಿಗೆ ತೆರಳುವ ಮೂಲಕ ಸಾರ್ವಜನಿಕರಿಗೆ ಸಾರಿಗೆ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಮಹಾನಗರದಲ್ಲಿ ಸಂಚಾರ ದಟ್ಟಣೆ ಇದೆ. ಸಾರ್ವಜನಿಕರು ಸಾರಿಗೆ‌ ಬಳಸಿದರೆ ಸಂಚಾರ ಹಾಗೂ ಪರಿಸರವನ್ನು ಒಳ್ಳೆಯ ದಿಕ್ಕಿನತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಹೇಳಿದ್ರು.

ಇನ್ನು ನಗರದ ರಸ್ತೆಗಳಲ್ಲಿ ಬಸ್ ಪಥವನ್ನು ಅಳವಡಿಸುವುದು ಅತಿದೊಡ್ಡ ಸವಾಲಾಗಿದ್ದು, ಎಲ್ಲರೂ ಕೈ ಜೋಡಿಸಿ ಯೋಜನೆ ಯಶಸ್ವಿಯಾಗಿಸಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.ಇದರ ಜೊತೆಯಲ್ಲಿ ವಿದ್ಯುತ್ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ಸಿಎಂ ಜೊತೆ ಮಾತುಕತೆ ನಡೆಸುವುದಾಗಿಯೂ ನೂತನ ಅಧ್ಯಕ್ಷರು ತಿಳಿಸಿದರು.

ಬಿಎಂಟಿಸಿಯ ನೂತನ ಅಧ್ಯಕ್ಷ ನಂದೀಶ್​ರೆಡ್ಡಿ

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬಿಎಂಟಿಸಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲ್ಲ ಎಂದು ಖಚಿತಪಡಿಸಿದರು.

ಪರಿಸರ ಉಳಿಸುವ ದೀರ್ಘಾವಧಿ ವಿದ್ಯುತ್ ಬಸ್ ಯೋಜನೆಗೆ ಮುಂದಾಗಿದ್ದು, ಒಂದು ವಿದ್ಯುತ್ ಬಸ್‌ಗೆ ಒಂದೂವರೆ ಕೋಟಿ ರೂ ಖರ್ಚಾಗಲಿದೆ. ಅಷ್ಟು ಹಣವನ್ನು ಭರಿಸುವ ಶಕ್ತಿ ಸಂಸ್ಥೆಗೆ ಇಲ್ಲ. ಹಾಗಾಗಿ ಲೀಸ್ ಆಧಾರದಲ್ಲಿ ಬಸ್​ಗಳನ್ನು ಪಡೆಯಲಿದ್ದೇವೆ ಎಂದು ತಿಳಿಸಿದರು. ನನ್ನ ಅಧಿಕಾರಾವಧಿಯಲ್ಲಿ ನೈರುತ್ಯ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಎಲ್ಲಾ ನಿಗಮಕ್ಕೂ ತೆರಿಗೆ ವಿನಾಯಿತಿ ಕಲ್ಪಿಸಬೇಕು ಆಗ ಸಂಸ್ಥೆಗಳ ಬೆಳವಣಿಗೆ‌ ಸಾಧ್ಯವಾಗಲಿದೆ ಎಂದು ಸಚಿವರು ವಿವರಿಸಿದ್ರು.

ಇದಕ್ಕೂ ಮುನ್ನ ಬಿಎಂಟಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂದೀಶ್‌ ರೆಡ್ಡಿ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಗೆ ತಮ್ಮ ಕ್ಷೇತ್ರದಿಂದ ಸಾರಿಗೆ ಬಸ್​ನಲ್ಲೇ ಆಗಮಿಸಿದ್ದರು. ನಂತರ ಅಧ್ಯಕ್ಷರ ಕೊಠಡಿಯಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ಶಾಸಕ‌ ಸತೀಶ್ ರೆಡ್ಡಿ , ಸಂಸದ ತೇಜಸ್ವಿ ಸೂರ್ಯ ಈ ವೇಳೆ ಉಪಸ್ಥಿತರಿದ್ದರು.

Intro:KN_BNG_03_BMTC_PRESIDENT_TACKING_CHARGE_SCRIPT_9021933

ವೈಫಲ್ಯಗೊಂಡಿರುವ ಬಸ್ ಡೇ ಮರಳಿ ಜಾರಿ: ಬಿಎಂಟಿಸಿ‌ ನೂತನ ಅಧ್ಯಕ್ಷರ ಘೋಷಣೆ!

ಬೆಂಗಳೂರು:ಕಳೆದ ಬಾರಿಯ ಬಿಜೆಪಿ‌ ಸರ್ಕಾರದ ಅವದಿಯಲ್ಲಿ ಜಾರಿಗೆ ತಂದಿದ್ದ ಪ್ರತಿ ತಿಂಗಳು ಬಸ್ ದಿನಾಚರಣೆ ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತರಲು ಬಿಎಂಟಿಸಿ ನೂತನ ಅಧ್ಯಕ್ಷರು ಮುಂದಾಗಿದ್ದಾರೆ.ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭಕ್ಕೆ ಕೊಂಡೊಯ್ಯುವ ಯೋಜನೆ ಬದಲು
ವೈಫಲ್ಯ ಕಂಡಿರುವ ಬಸ್ ಡೇ ಯೋಜನೆ ಮರುಜಾರಿಗೆ ಮುಂದಾಗಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಉಪ‌ ಚುನಾವಣೆ ಟಕೆಟ್ ಗಾಗಿ ಪಟ್ಟು ಹಿಡಿದು ಮುನಿಸಿಕೊಂಡಿದ್ದ ಮಾಜಿ ಶಾಸಕ ನಂದೀಶ್ ರೆಡ್ಡಿ ಕಡೆಗೂ ಪಟ್ಟು ಸಡಿಲಿಸಿದ್ದು ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಗೆ ತಮ್ಮ ಕ್ಷೇತ್ರದಿಂದ ಸಾರಿಗೆ ಬಸ್ ನಲ್ಲೇ ಆಗಮಿಸಿದ್ದು ವಿಶೇಷ.

ನಂತರ ಬಿಎಂಟಿಸಿಗೆ ಅಧ್ಯಕ್ಷರ ಕೊಠಡಿಯಲ್ಲಿ ಪೂಜಾ ವಿಧಿ ವಿಧಾನ ಪೂರ್ಣಗೊಳಿಸಿ ಅಧಿಕಾರ ಸ್ವೀಕರಿಸಿದರು.ಕಂದಾಯ ಸಚಿವ ಆರ್.ಅಶೋಕ್,ಶಾಸಕ‌ ಸತೀಶ್ ರೆಡ್ಡಿ ,ಸಂಸದ ತೇಜಸ್ವಿ ಸೂರ್ಯ ಸಾತ್ ನೀಡಿದರು.

ಬಿಎಂಟಿಸಿ ನೂತನ ಅಧ್ಯಕ್ಷರಾಗಿ ಪದಗ್ರಹಣದ ನಂತರ ಮೊದಲ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಂದೀಶ್ ರೆಡ್ಡಿ, ಸ್ಥಗಿತಗೊಂಡಿರುವ ಬಸ್ ಡೇ ಯೋಜನೆ ಮರಳಿ ಆರಂಭಿಸಲಾಗುತ್ತದೆ ಎಂದು ಪ್ರಕಟಿಸಿದರು. ಪ್ರತಿ ತಿಂಗಳ ನಾಲ್ಕರಂದು ಬಸ್ ಡೇ ಆಚರಿಸಲಾಗುತ್ತದೆ ಅಂದು ಅಧಿಕಾರಿಗಳು,ಜನಪ್ರತಿನಿಧಿಗಳು ಬಸ್ ನಲ್ಲೇ ಕಚೇರಿಗೆ ತೆರಳುವ ಮೂಲಕ ಸಾರ್ವಜನಿಕ ಸಾರಿಗೆ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಮಹಾನಗರದಲ್ಲಿ ಸಂಚಾರ ದಟ್ಟಣೆ ಇದೆ ಸಾರ್ವಜನಿಕ ಸಾರಿಗೆ‌ ಬಳಸಿದರೆ ಸಂಚಾರ, ಪರಿಸರ ಎರಡನ್ನು ಒಳ್ಳೆಯ ದಿಕ್ಕಿನತ್ತಾ ಕೊಂಡೊಯ್ಯಲು ಸಾಧ್ಯವಿದೆ ಅದಕ್ಕೂ ‌ನಮ್ಮ‌ ಮೊದಲ ಆಧ್ಯತೆ ಎಂದರು.

ಬಸ್ ಪಥವನ್ನು ಅಳವಡಿಸುವುದು ಅತಿದೊಡ್ಡ ಸವಾಲು, ಎಲ್ಲರೂ ಕೈ ಜೋಡಿಸಿ ಯೋಜನೆ ಯಶಸ್ವಿಯಾಗಿ ಮಾಡಲು ಪ್ರಯತ್ನ ಮಾಡುತ್ತೇವೆ ಅದರ ಜೊತೆಯಲ್ಲಿ ವಿದ್ಯುತ್ ಬಸ್ ಗಳನ್ನು ರಸ್ತೆಗಿಳಿಸುವ ಸಂಬಂಧ ಸಿಎಂ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್,
ಬಿಎಂಟಿಸಿಯನ್ನು ಯಾವ ಕಾರಣಕ್ಕೂ ಖಾಸಗೀಕರಣ ಮಾಡಲ್ಲ, ಸರ್ಕಾರದ ನಿಲುವೂ ಅದೆ, ಪರಿಸರ ಉಳಿಸುವ ದೀರ್ಘ ಅವದಿ ವಿದ್ಯುತ್ ಬಸ್ ಯೋಜನೆಗೆ ಮುಂದಾಗಿದ್ದೇವೆ ಒಂದು ವಿದ್ಯುತ್ ಬಸ್ ಗೆ ಒಂದೂವರೆ ಕೋಟಿ ಆಗಲಿದೆ ಅಷ್ಟು ಭರಿಸುವ ಶಕ್ತಿ ಸಂಸ್ಥೆಗೆ ಇಲ್ಲ ಹಾಗಾಗಿ ಲೀಸ್ ಆಧಾರದಲ್ಲಿ ಬಸ್ ಗಳನ್ನು ಪಡೆಯಲಿದ್ದೇವೆ,ಅದನ್ನು ಬಿಟ್ಟು ಖಾಸಗೀಕರಣ ದಂತಹ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಹಿಂದೆ ನನ್ನ ಅವದಿಯಲ್ಲಿ ನೈರುತ್ಯ ಸಾರಿಗೆ,ವಾಯುವ್ಯ ಸಾರಿಗೆ ನಿಗಮಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತುಬೀಗ ನಿಲ್ಲಿಸಲಾಗಿದೆ ಈಗ ಎಲ್ಲಾ ನಿಗಮಕ್ಕೂ ತೆರಿಗೆ ವಿನಾಯಿತಿ ಕಲ್ಪಿಸಬೇಕು ಆಗ ಸಂಸ್ಥೆಗಳ ಬೆಳವಣಿಗೆ‌ ಸಾಧ್ಯವಾಗಲಿದೆ ಎಂದರು.

ಕಳೆದ ಆರೇಳು ವರ್ಷದಿಂದ ಬಸ್ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ ಆದರೆ ಸಿಎಂ‌ ಆಶಯ ದರ ಹೆಚ್ಚಳ ಮಾಡಬಾರದು ಎನ್ನುವುದೇ ಆಗಿದೆ ಹಾಗಾಗಿ ಸಧ್ಯಕ್ಕೆ ದರ ಹೆಚ್ಚಿಸುವ ಪ್ರಸ್ತಾಪ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಿ ನಂತರ ಅಧ್ಯಕ್ಷ ಸ್ಥಾನ ನೀಡಿದರೂ ಅಧಿಕಾರ ಸ್ವೀಕಾರ ವಿಳಂಬ ಕುರಿತ ಪ್ರಶ್ನೆಗೆ ಉತ್ತರಿಸಲು ನಯವಾಗಿ ನಿರಾಕರಿಸಿದ ನಾಯಕರು ಅಭಿನಂದನೆ,ಶುಭ ಕೋರಿಕೆ ಎನ್ನುತ್ತಾ ಇಲ್ಲಿ ರಾಜಕೀಯ ಮಾತು ಬೇಡ ಎನ್ನುತ್ತಾ ನಿರ್ಗಮಿಸಿದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.